ಧರ್ಮ ಸಂಸ್ಕೃತಿ ಪರಂಪರೆ ಬೆಳೆಸುವುದೇ ಮಠಗಳ ಕರ್ತವ್ಯ

ಬಾಳೆಹೊನ್ನೂರ‌ಃ ಧರ್ಮ ಸಂಸ್ಕೃತಿ ಪರಂಪರೆ ಬೆಳಸುವುದೆ ವೀರಶೈವ ಮಠಗಳ ಆದ್ಯ ಕರ್ತವ್ಯವಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಂಗಳವಾರ ರಂಭಾಪುರಿ ಪೀಠದ ರಂಭಾಪುರೀಶ್ವರ ಸಮುದಾಯಭವನದಲ್ಲಿ ಜರುಗಿದ ನೆಗಳೂರ ಶ್ರೀಗಳು ನೆಗಳೂರಿಂದ ರಂಭಾಪುರಿ ಪೀಠ ಕ್ಕೆ ಕೈಗೊಂಡ ಪ್ರಕೃತಿ ಸಮತೋಲನ ಪಾದಯಾತ್ರೆಯ ಮಂಗಲ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ನೆಗಳೂರಿನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ವಯಸ್ಸಿನಲ್ಲಿ ಕಿರಿಯರಾದರು ಅವರ ಸಮಾಜಮುಖಿ ಕಾರ್ಯಗಳನ್ನು ಮಾಡುವುದರಮೂಲಕ ಉಳಿದ ಮಠಾಧೀಶರಿಗೆ ಮಾದರಿಯಾಗಿದ್ದಾರೆ ಶ್ರೀಗಳು ಮಾಡುವ ಕಾರ್ಯಗಳಿಂದ ವ್ಯಯತ್ತಿಕವಾಗಿ ಸಂತಸ ಉಂಟುಮಾಡಿದಲ್ಲದೆ ಸುವರ್ಣ ಅಕ್ಷರಗಳಿಂದ ಬರೆಯವಂತದ್ದಾಗಿದೆ.
ಪ್ರಸ್ತುತ ದಿನಮಾನಗಳಲ್ಲಿ ಧರ್ಮ ಒಡೆಯುವ ಪರಸ್ಪರ ರಾಗ ದ್ವೇಷಗಳನ್ನುಂಟುಮಾಡಿ ತಮ್ಮ ಸ್ವ ಹಿತಾಸಕ್ತಿಗಾಗಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವರು ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ. ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿಂದಾಗಿ ಹೆತ್ತವರಿಗೆ ಒಂದು ತುತ್ತು ಅನ್ನ ಹಾಕದ ಪರಸ್ಥಿತಿ ಎದುರಾಗಿದೆ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳಲ್ಲಿ ಧರ್ಮ ಪರಂಪರೆಯ ಮೂಲಗಳ ತಿಳುವಳಿಕೆ ನೀಡಿ ಸತ್ಪ್ರಜೆಯನ್ನಾಗಿಸುವ ಮಹತ್ವರ ಜವಬ್ದಾರಿ ತಂದೆತಾಯಿಗಳಾಗಿದೆ ಎಂದರು.
ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು ಮಾತನಾಡಿ ಪ್ರಕೃತಿಯನ್ನು ಪೂಜಿಸುವ ಸಂಸ್ಕೃತಿ ನಮ್ಮದಾಗಿದ್ದು ಪ್ರಕೃತಿ ಮುನಿಸಿಕೊಂಡರೆ ಎಲ್ಲವೂ ಸರ್ವನಾಶವಾಗುತ್ತದೆ ಕೊಡಗು ಮಡಿಕೇರಿ ಕೇರಳದಲ್ಲಿ ಅತಿವೃಷ್ಟಿಯಿಂದಾಗಿ ಅಲ್ಲಿಯ ಜನರ ಪರಸ್ಥಿತಿಯಾಗದಿರಲಿ ಸಕಾಲಕ್ಕೆ ಪ್ರಕೃತಿ ಸಮತೋಲನದಿಂದರಲಿ ಎಂಬ ಉದ್ದೇಶದಿಂದ ಪೃಥ್ವಿ ತತ್ವದ ಒಡೆಯರಾದ ರಂಭಾಪುರೀಶ್ವರಲ್ಲಿ ಪಾರ್ಥಿಸಲು ಪಾದಯಾತ್ರೆ ಕೈಗೊಂಡೆವು ದಾರಿಯುದ್ದಕ್ಕೂ ಸಾಕಷ್ಟು ಅನುಭವಗಳೊಂದಿಗೆ ಅನುಭಾವ ವನ್ನು ವೃದ್ದಿಸುವಂತಾಯಿತು ಭಕ್ತರೆಲ್ಲರ ಸಹಕಾರೊಂದಿಗೆ ಜಗದ್ಗುರಗಳ ಅಂತ‌ಃಕರಣದ ಆರ್ಶಿವಾದಿಂದ ಪಾದಯಾತ್ರೆ ಸುಗಮವಾಗಿ ಸಾಗಿಬಂತು ಎಲ್ಲಾ ವರ್ಗದ 108 ಭಕ್ತರು ಪಾದಯಾತ್ರೆಯಲ್ಲಿ ಪಾಲಗ್ಗೊಂಡು ನಾವೇಲ್ಲರು ಗುರುವಿನ ಸಾನಿಧ್ಯದಲ್ಲಿ ಸಮಾನರು ಎಂಬ ಸಂದೇಶ ವನ್ನು ಸಮಾಜಕ್ಕೆ ಸಾರಿದರು ರಂಭಾಪುರಿ ಜಗದ್ಗುರುಗಳ ಕೃಪಾಕಾರುಣ್ಯವೇ ನಮಗೆ ಶ್ರೀರಕ್ಷೆ ಪ್ರೇರಣೆ ಎಂದರು. ಸಮಾರಂಭದಲ್ಲಿ ಅಬ್ಬಿಗೇರಿ ಶ್ರೀಗಳು ಹಳ್ಳೀಖೇಡ ಶ್ರೀಗಳು ನವಲಕಲ್ ಶ್ರೀಗಳು ಆಡಳಿತಾಧಿಕಾರಿ ಎಸ್.ಬಿ ಹಿರೇಮಠ ಸೇರಿದಂತೆ ಸದ್ಭಕ್ತರು ಇದ್ದರು.

ಪೋಟೋ ಕ್ಯಾಪ್ಚರ್
ಬಾಳೆಹೊನ್ನೂರಿನ ರಂಭಾಪುರಿಪೀಠದ ರಂಭಾಪುರೀಶ್ವರ ಸಭಾಭವನದಲ್ಲಿ ಪ್ರಕೃತಿ ಸಮತೋಲನ ಪಾದಯಾತ್ರೆ ಮಂಗಲ ಸಮಾರಂಭದಲ್ಲಿ ರಂಭಾಪುರಿ ಜಗದ್ಗುರು ಪಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯರು ಮಾತನಾಡಿದರು.

Leave a Reply

Your email address will not be published. Required fields are marked *