ತಿಂಗಳ ಸಾಹಿತ್ಯ ಚಿಂತನಾಗೋಷ್ಠಿ

ನರೇಗಲ್ಲ: ಕನ್ನಡ ಸಾಹಿತ್ಯ ಪರೀಷತ್(ಕಸಾಪ) ತಾಲ್ಲೂಕ ಮತ್ತು ಹೋಬಳಿ ಘಟಕದ ವತಿಯಿಂದ ತಿಂಗಳ ಸಾಹಿತ್ಯ ಚಿಂತನಾಗೋಷ್ಠಿಯನ್ನು ಪಟ್ಟಣದ ಶ್ರೀ ಮಾರಿಕಾಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸೆ. 29 ರಂದು ಶನಿವಾರ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಡಾ. ಆರ್.ಕೆ.ಗಚ್ಚಿನಮಠ ಅವರು “ನೆಮ್ಮದಿಯ ಜೀವನಕ್ಕೆ ಕೌಟುಂಬಿಕ ಪ್ರೀತಿ ಅಗತ್ಯ” ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡಲಿದ್ದಾರೆ. ಸಾನಿಧ್ಯವನ್ನು ಸ್ಥಳೀಯ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು. ಗಜೇಂದ್ರಗಡ, ರೋಣ ತಾಲ್ಲೂಕಾಧ್ಯಕ್ಷ ಐ.ಎ.ರೇವಡಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹೋಬಳಿ ಘಟಕದ ಅಧ್ಯಕ್ಷ ಎಫ್.ಎನ್.ಹುಡೇದ, ಸದಸ್ಯರು, ಶಿಕ್ಷಕರು ಭಾಗವಹಿಸಲಿದ್ದು. ಕಾರ್ಯಕ್ರಮವನ್ನು ಶಿಕ್ಷಕ ಬಸವರಾಜ ಕುರಿ ನಿರೂಪಿಸಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನಿಯರ ಸನ್ಮಾನವು ಜರುಗಲಿದೆ ಎಂದು ಕಸಾಪ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

  • 34
    ನರೇಗಲ್ಲ: ಇಂದಿನ ವಿದ್ಯಾವಂತ ಯುವಕರಲ್ಲಿ ಅವಿಭಕ್ತ ಕುಟುಂಬವನ್ನು ಒಡೆದು ಹಿರಿಯರನ್ನು ದೂರ ಮಾಡುವ ಮನಸ್ಥಿತಿಗಳು ಹೆಚ್ಚಾಗುತ್ತಿವೆ ಇದರಿಂದ ಕೌಟುಂಬಿಕ ಪ್ರೀತಿಯ ಬೇಲೆ ಅವರಿಗೆ ಹಾಗೂ ಅವರ ಮಕ್ಕಳಿಗೆ ಅರಿವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಾ. ಆರ್.ಕೆ.ಗಚ್ಚಿನಮಠ ಹೇಳಿದರು. ಪಟ್ಟಣದ ಶ್ರೀ ಮಾರಿಕಾಂಬ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ಗಜೇಂದ್ರಗಡ, ರೋಣ ತಾಲ್ಲೂಕ ಘಟಕ ಹಾಗೂ ನರೇಗಲ್ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ವತಿಯಿಂದ ಜರುಗಿದ ತಿಂಗಳ ಸಾಹಿತ್ಯ…
    Tags: ಸಾಹಿತ್ಯ, ನರೇಗಲ್ಲ, ಕೌಟುಂಬಿಕ, ಎಂದು, ಜೀವನಕ್ಕೆ, ಅವರು, ವತಿಯಿಂದ, ತಿಂಗಳ, ಶನಿವಾರ, ಕಸಾಪ

Leave a Reply

Your email address will not be published. Required fields are marked *