ರಾಮಮಂದಿರಕ್ಕೆ ದಿಕ್ಸೂಚಿ?

ಕಳಂಕಿತ ರಾಜಕಾರಣಿಗಳ ಚುನಾವಣೆ ಸ್ಪರ್ಧೆ, ಆಧಾರ್, ಬಡ್ತಿ ಮೀಸಲಾತಿ ಪ್ರಕರಣಗಳ ಗೊಂದಲಗ ಳಿಗೆ ತೆರೆ ಎಳೆದ ಬೆನ್ನಲ್ಲೇ ಸುಪ್ರೀಂಕೋರ್ಟ್ ಗುರುವಾರ ಮತ್ತೊಂದು ಐತಿಹಾಸಿಕ ತೀರ್ಪಿತ್ತಿದೆ. ರಾಮಮಂದಿರ ನಿರ್ವಣಕ್ಕೆ ಪರೋಕ್ಷವಾಗಿ ಸಂಬಂಧಿಸಿದ ಪ್ರಕರಣದ ವಿಚಾರಣೆ ಕಾಯ್ದಿರಿಸಿದ್ದ ನ್ಯಾಯಾಲಯ ಸಾಮೂಹಿಕ ಪ್ರಾರ್ಥನೆಗೆ ಮಸೀದಿ ಅಗತ್ಯವಿಲ್ಲ ಎಂದಿದ್ದ 1994ರ ತೀರ್ಪಿನ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವಹಿಸಲು ನಿರಾಕರಿಸಿದೆ. ಹಾಗೆಯೇ ಅಯೋಧ್ಯೆ ರಾಮಜನ್ಮಭೂಮಿ ವಿವಾದದ ವಿಚಾರಣೆಯನ್ನು ಅ.29ರಿಂದ ಪ್ರತಿದಿನ ನಡೆಸುವುದಾಗಿ ಸವೋಚ್ಚ ನ್ಯಾಯಾಲಯ ಘೋಷಿಸಿರುವುದು 2019ರ ಲೋಕಸಭೆ ಚುನಾವಣೆಗೆ ಮುನ್ನವೇ ಈ ಪ್ರಕರಣದ ತೀರ್ಪು ಹೊರಬರಬಹುದೆನ್ನುವ ನಿರೀಕ್ಷೆ ಮೂಡಿಸಿದೆ. ಈ ಎರಡು ಬೆಳವಣಿಗೆಗಳು ರಾಮಮಂದಿರ ನಿರ್ವಣಕ್ಕೆ ದಿಕ್ಸೂಚಿಯಂತಿದೆ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ.

ಮಂದಿರ ನಿರೀಕ್ಷೆ ಏಕೆ?

2019ರ ಲೋಕಸಭೆ ಚುನಾವಣೆವರೆಗೆ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಬಾರದೆಂದು ಸುನ್ನಿ ವಕ್ಪ್ ಮಂಡಳಿ ಪರ ವಕೀಲ ಕಪಿಲ್ ಸಿಬಲ್ ಮಂಡಿಸಿದ್ದ ವಾದಕ್ಕೆ ಸುಪ್ರೀಂ ಮನ್ನಣೆ ನೀಡದಿರುವುದು
ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸಲು ಸುಪ್ರೀಂ ತೀರ್ವನಿಸಿರುವುದರಿಂದ ಲೋಕಸಭೆ ಚುನಾವಣೆಗೆ ಮೊದಲೇ ತೀರ್ಪು ಹೊರಬರುವ ವಿಶ್ವಾಸ.

ಕೋರ್ಟ್ ಹೇಳಿದ್ದು

ಸರ್ಕಾರದಿಂದ ಭೂ ಸ್ವಾಧೀನಕ್ಕೆ ಸಂಬಂಧಿಸಿ 1994ರ ಆದೇಶ ನೀಡಲಾಗಿದೆ. ಅಯೋಧ್ಯೆ ಭೂ ವಿವಾದಕ್ಕೆ ಇದರಿಂದ ಯಾವುದೆ ವ್ಯತಿರಿಕ್ತ ಪರಿಣಾಮ ವಾಗುವುದಿಲ್ಲ. ಇಸ್ಮಾಯಿಲ್ ಫಾರೂಕಿ ಪ್ರಕರಣದಲ್ಲಿನ ಆದೇಶವನ್ನು ಕೇವಲ ಕೋರ್ಟ್ ಅಭಿಪ್ರಾಯ ಎಂದು ಪರಿಗಣಿಸಬೇಕು.

| ಸುಪ್ರೀಂ ತ್ರಿಸದಸ್ಯ ಪೀಠ

2:1ರ ತೀರ್ಪು

ಮಸೀದಿಯಲ್ಲೇ ಪ್ರಾರ್ಥನೆ ಮಾಡಬೇಕು ಎಂದು ಇಸ್ಲಾಂನಲ್ಲಿ ಹೇಳಿಲ್ಲ ಎಂದು 1994ರಲ್ಲಿ ಸುಪ್ರೀಂಕೋರ್ಟ್ ನೀಡಿದ ಅಭಿಪ್ರಾಯ ಕುರಿತು ಸಂವಿಧಾನ ಪೀಠದ ವಿಚಾರಣೆ ಅಗತ್ಯವಿಲ್ಲ ಎಂದು ಸಿಜೆಐ ದೀಪಕ್ ಮಿಶ್ರಾ ಮತ್ತು ನ್ಯಾ.ಅಶೋಕ್ ಭೂಷಣ್ ಅಭಿಪ್ರಾಯ
ಧಾರ್ವಿುಕ ಸಂಪ್ರದಾಯಗಳು ನಂಬಿಕೆ ವಿಚಾರವನ್ನು ಒಳಗೊಂಡಿರುತ್ತವೆ. ಫಾರೂಕಿ ಪ್ರಕರಣದಲ್ಲಿನ ಆದೇಶವನ್ನು 7 ಸದಸ್ಯರ ಸಂವಿಧಾನ ಪೀಠದಿಂದ ಪರಾಮಶಿಸುವ ಅಗತ್ಯವಿದೆ ಎಂದು ನ್ಯಾ.ಅಬ್ದುಲ್ ನಜೀರ್ ಅಭಿಮತ

ಅ.29ರಿಂದ ನಿತ್ಯ ವಿಚಾರಣೆ

ಅಯೋಧ್ಯೆಯ ವಿವಾದಿತ ಜಾಗವನ್ನು ಮೂರು ಸಂಘಟನೆಗಳಿಗೆ ಹಂಚಿ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆ ಅ.29ರಿಂದ ಪ್ರತಿನಿತ್ಯ ನಡೆಯಲಿದೆ. ಈ ಪ್ರಕರಣ ಮಂದಿರ ನಿರ್ಮಾಣ ವಿಷಯಕ್ಕೆ ನಿರ್ಣಾಯಕವಾಗಲಿದೆ.

ರಾಜಕೀಯ ಪರಿಣಾಮ

ರಾಮಮಂದಿರ ವಿಷಯ ಮುಂದಿಟ್ಟುಕೊಂಡು 2019ರ ಲೋಕಸಭೆ ಚುನಾವಣೆಗೆ ಹೋಗಲು ಬಿಜೆಪಿಗೆ ಸದವಕಾಶ
ವಿಪಕ್ಷಗಳಿಗೆ ತಲೆನೋವು ತಂದಿಟ್ಟ ಆದೇಶ

ನಮಗೆ ಶ್ರೀರಾಮ, ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಲೋಕಸಭೆ ಚುನಾವಣೆಗೆ ಮುನ್ನವೇ ರಾಮಮಂದಿರ ನಿರ್ವಣಕ್ಕೆ ಮುಹೂರ್ತ ಕೂಡಿ ಬರುವ ವಿಶ್ವಾಸವಿದೆ.

| ಇಂದ್ರೇಶ್ ಕುಮಾರ್, ಆರೆಸ್ಸೆಸ್ ಮುಖಂಡ

ಏನಿದು ಪ್ರಕರಣ?

ಅಯೋಧ್ಯೆ ರಾಮಜನ್ಮಭೂಮಿ ಸುತ್ತ ಭೂಮಿ ವಶಪಡಿಸಿಕೊಳ್ಳುವ ಸಂಬಂಧ 1993ರಲ್ಲಿ ರಾಷ್ಟ್ರಪತಿಗಳು ಹೊರಡಿಸಿದ್ದ ಸುಗ್ರೀವಾಜ್ಞೆಗೆ ಮುಸ್ಲಿಂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿ ವ್ಯಾಜ್ಯ ಸುಪ್ರೀಂ ಮೆಟ್ಟಿಲೇರಿತ್ತು. 1994ರಲ್ಲಿ ತೀರ್ಪು ನೀಡಿದ್ದ ನ್ಯಾಯಾಲಯ ಮಸೀದಿ ಇಸ್ಲಾಂನ ಅವಿಭಾಗ್ಯ ಅಂಗವೇನೂ ಅಲ್ಲ ಎಂದಿತ್ತು.

ಅ.29ರಿಂದ ಅಯೋಧ್ಯೆ ಅಂತಿಮ ವಿಚಾರಣೆ

ನವದೆಹಲಿ: ಅಯೋಧ್ಯೆ ರಾಮ ಮಂದಿರ ಭೂವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಗಿದ್ದ ವಿಘ್ನ ನಿವಾರಣೆಯಾಗಿದೆ. ಮಸೀದಿಯಲ್ಲೇ ಪ್ರಾರ್ಥನೆ ಮಾಡಬೇಕು ಎಂದು ಇಸ್ಲಾಂನಲ್ಲಿ ಹೇಳಿಲ್ಲ ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯ ಕುರಿತು ಸಂವಿಧಾನ ಪೀಠದ ವಿಚಾರಣೆ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು 2:1 ಬಹುಮತದಲ್ಲಿ ಸ್ಪಷ್ಟಪಡಿಸಿದೆ.

ಎಂ.ಸಿದ್ದಿಕಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾಗೊಳಿಸಿ, ಅ.29ರಿಂದ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಮುಹೂರ್ತ ನಿಗದಿಪಡಿಸಿದೆ. ಆದರೆ ತ್ರಿಸದಸ್ಯ ಪೀಠದಲ್ಲಿ ಕರ್ನಾಟಕ ಮೂಲದ ನ್ಯಾ.ಅಬ್ದುಲ್ ನಜೀರ್ ಅವರು ಸಿಜೆಐ ಹಾಗೂ ನ್ಯಾ.ಅಶೋಕ್ ಭೂಷಣ್ ತೀರ್ಪಿಗೆ ವ್ಯತಿರಿಕ್ತ ಅಭಿಪ್ರಾಯ ತಿಳಿಸಿದ್ದು, ಸಂವಿಧಾನ ಪೀಠದಿಂದ ಪರಾಮಶಿಸುವ ಅಗತ್ಯತೆ ಇದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್​ನ ಈ ಸ್ಪಷ್ಟನೆಯಿಂದ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿ ಇನ್ನೊಂದು ಹೆಜ್ಜೆ ಮುಂದಿಟ್ಟಂತಾಗಿದೆ. ಕಳೆದ ಜುಲೈನಲ್ಲಿ ಭೂ ವಿವಾದದ ಮುಖ್ಯ ಅರ್ಜಿಯ ದೈನಂದಿನ ವಿಚಾರಣೆ ಆರಂಭಿಸಿದಾಗ ಉತ್ತರ ಪ್ರದೇಶ ಸುನ್ನಿ ವಕ್ಪ್​ಮಂಡಳಿ, ಎಂ.ಸಿದ್ದಿಕಿ ಹಾಗೂ ಇತರರು 1994ರಲ್ಲಿನ ಸುಪ್ರೀಂ ಕೋರ್ಟ್ ಆದೇಶಕ್ಕೆ ಸ್ಪಷ್ಟನೆ ಕೋರಿದ್ದರು.

ಇದಕ್ಕೆ ಖಡಕ್ ಉತ್ತರ ನೀಡಿರುವ ಸುಪ್ರೀಂ ಕೋರ್ಟ್, ಸರ್ಕಾರದಿಂದ ಭೂ ಸ್ವಾಧೀನಕ್ಕೆ ಸಂಬಂಧಿಸಿ ಈ ಆದೇಶ ನೀಡಲಾಗಿದೆ. ಅಯೋಧ್ಯೆ ಭೂ ವಿವಾದಕ್ಕೆ ಇದರಿಂದ ಯಾವುದೆ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ. ಇಸ್ಮಾಯಿಲ್ ಫಾರೂಕಿ ಪ್ರಕರಣದಲ್ಲಿನ ಆದೇಶವನ್ನು ಕೇವಲ ಕೋರ್ಟ್ ಅಭಿಪ್ರಾಯ ಎಂದು ಪರಿಗಣಿಸಬೇಕು ಎಂದು ನ್ಯಾ.ಮಿಶ್ರಾ ಹಾಗೂ ನ್ಯಾ.ಭೂಷಣ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಭಿನ್ನಮತದ ಆದೇಶ ನೀಡಿರುವ ನ್ಯಾ.ಅಬ್ದುಲ್ ನಜೀರ್, ಧಾರ್ವಿುಕ ಸಂಪ್ರದಾಯಗಳನ್ನು ನಂಬಿಕೆಯ ವಿಚಾರವನ್ನು ಒಳಗೊಂಡಿರುತ್ತವೆ. ಫಾರೂಕಿ ಪ್ರಕರಣದಲ್ಲಿನ ಆದೇಶವನ್ನು 7 ಸದಸ್ಯರ ಸಂವಿಧಾನ ಪೀಠದಿಂದ ಪರಾಮಶಿಸುವ ಅಗತ್ಯವಿದೆ ಎಂದಿದ್ದಾರೆ. ಈ ಆದೇಶವನ್ನು ಬಿಜೆಪಿ, ಆರ್​ಎಸ್​ಎಸ್ ಸೇರಿ ಬಲಪಂಥೀಯ ಸಂಘಟನೆಗಳು ಸ್ವಾಗತಿಸಿವೆ. ಆದರೆ ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಗಂಭೀರ ಪ್ರಕರಣಗಳಲ್ಲಿ ಭಿನ್ನಮತವಿಲ್ಲದ ಆದೇಶ ನಿರೀಕ್ಷಿಸಲಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *