ಇಂದು ಬಿಬಿಎಂಪಿ ಮೇಯರ್ ಫೈಟ್

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಪ್ರತಿಷ್ಠೆಯ ಜಿದ್ದಾಜಿದ್ದಿಗೆ ವೇದಿಕೆ ಆಗಿರುವ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಸ್ಥಾನದ ಚುನಾವಣೆ ಶುಕ್ರವಾರ ನಡೆಯಲಿದೆ. 8 ಪಕ್ಷೇತರ ಸದಸ್ಯರನ್ನು ನೆಚ್ಚಿಕೊಂಡು ಆಡಳಿತ ಚುಕ್ಕಾಣಿ ಹಿಡಿಯಲು ಆಡಳಿತಾರೂಢ ಮೈತ್ರಿ ಪಕ್ಷಗಳು ತಂತ್ರ ರೂಪಿಸಿದ್ದರೆ, ದೋಸ್ತಿಗಳಿಗೆ ಶಾಕ್ ನೀಡಿ ಇಬ್ಬರು ಪಕ್ಷೇತರರಿಗೆ ಬಿಜೆಪಿ ಗಾಳ ಹಾಕಿರುವುದಾಗಿ ತಿಳಿದು ಬಂದಿದೆ. ನಂಬರ್​ಗೇಮ್ಲ್ಲಿ ಮೈತ್ರಿ ಪಕ್ಷಗಳು ಮುಂದಿದ್ದರೂ ಶುಕ್ರವಾರ ಬೆಳಗ್ಗೆವರೆಗೆ ಬಿಜೆಪಿ ನಡೆಸಲಿರುವ ಕಾರ್ಯತಂತ್ರ ಒಟ್ಟಾರೆ ಫಲಿತಾಂಶವನ್ನು ನಿರ್ಣಯಿಸುವ ಸಾಧ್ಯತೆ ಇದೆ. ಮೇಯರ್ ಅಭ್ಯರ್ಥಿಯಾಗಿ ಕಾಂಗ್ರೆಸ್​ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಕಣಕ್ಕಿಳಿದಿದ್ದು, ಶುಕ್ರವಾರ ಬೆಳಗ್ಗೆ ನಾಮಪತ್ರ ಸಲ್ಲಿಸಲಿದ್ದಾರೆ. ಉಪಮೇಯರ್ ಅಭ್ಯರ್ಥಿಯಾಗಿ ರಮಿಳಾ ಉಮಾಶಂಕರ್ ಸ್ಪರ್ಧಿಸುವ ನಿರೀಕ್ಷೆಯಿದೆ.

ಮೇಯರ್, ಉಪ ಮೇಯರ್ ಚುನಾವಣೆ ಇಂದು

ಪಾಲಿಕೆಯ 19ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಶುಕ್ರವಾರ ನಡೆಯಲಿದ್ದು, ಬೆಳಗ್ಗೆ 8 ಗಂಟೆಯಿಂದ 9.30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಬೆಳಗ್ಗೆ 11.30ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ.

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಮತ್ತು ಚುನಾವಣಾಧಿಕಾರಿ ಶಿವಯೋಗಿ ಸಿ. ಕಳಸದ ಗುರುವಾರ ಸುದ್ದಿಗೋಷ್ಠಿ ನಡೆಸಿ ಚುನಾವಣಾ ಪ್ರಕ್ರಿಯೆ ವಿವರ ನೀಡಿದರು.

ಮೇಯರ್ ಹಾಗೂ ಉಪಮೇಯರ್ ಸ್ಥಾನ ಗಳಿಗೆ ಈಗಾಗಲೇ ಮೀಸಲಾತಿ ಪ್ರಕಟಿಸಿದ್ದು, ಚುನಾವಣೆಗೆ ಸ್ಪರ್ಧಿಸಲು ಬಯಸು ವವರು ಶುಕ್ರ ವಾರ ಬೆಳಗ್ಗೆ 8ರಿಂದ 9.30ರೊಳಗೆ ಹೆಚ್ಚುವರಿ ಆಯುಕ್ತರಿಗೆ (ಆಡಳಿತ) ನಾಮಪತ್ರ ಸಲ್ಲಿಸಲು ಅವಕಾಶವಿದೆ. ಆನಂತರ ಬರುವ ನಾಮಪತ್ರ ಗಳನ್ನು ಸ್ವೀಕರಿಸುವುದಿಲ್ಲ. ಕೆಂಪೇಗೌಡ ಪೌರ ಸಭಾಂಗಣದಲ್ಲಿ ಬೆಳಗ್ಗೆ 11.30ಕ್ಕೆ ಚುನಾವಣಾ ಸಭೆ ಆರಂಭವಾಗಲಿದೆ ಎಂದು ತಿಳಿಸಿದರು.

ಮೊದಲಿಗೆ ಎಲ್ಲ ಮತ ದಾರರಿಂದ ಹಾಜರಾತಿ ಪಡೆಯಲಾಗುತ್ತದೆ. ಚುನಾವಣಾ ಪ್ರಕ್ರಿಯೆ ಆರಂಭ ವಾದ ಕೂಡಲೇ ಕೌನ್ಸಿಲ್ ಸಭಾಂಗಣದ ಬಾಗಿಲುಗಳನ್ನು ಮುಚ್ಚಲಾಗುವುದು. ಮೇಯರ್ ಹಾಗೂ ಉಪಮೇಯರ್ ಅಭ್ಯರ್ಥಿಗಳ ಪರ ಹಾಗೂ ವಿರುದ್ಧವಾಗಿ ಕೈ ಎತ್ತುವ ಮೂಲಕ ಮತ ಪಡೆಯಲಾಗುವುದು ಎಂದು ಹೇಳಿದರು.

ಚುನಾವಣೆ ಪ್ರಕ್ರಿಯೆಯಲ್ಲಿ ಪಾಲಿಕೆಯ 198 ಸದಸ್ಯರು, 9 ರಾಜ್ಯಸಭಾ ಸದಸ್ಯರು, 5 ಲೋಕಸಭಾ ಸದಸ್ಯರು, 19 ವಿಧಾನ ಪರಿಷತ್ ಸದಸ್ಯರು ಹಾಗೂ 28 ವಿಧಾನಸಭಾ ಸದಸ್ಯರಿಗೆ ಮತದಾನ ಮಾಡಲು ಅವಕಾಶವಿದೆ. ಒಟ್ಟು ಸದಸ್ಯರ ಪೈಕಿ ಮೂರನೇ ಒಂದು ಸದಸ್ಯರು ಹಾಜರಾದ ಬಳಿಕ ಸಭೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಶುಕ್ರವಾರ ಚುನಾವಣಾ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭದ್ರತಾ ದೃಷ್ಟಿಯಿಂದ ಅವಶ್ಯವಿರುವೆಡೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಮತದಾರರು ಮತ್ತು ಸಿಬ್ಬಂದಿಗೆ ಪಾಸ್ ನೀಡಲಾಗಿದೆ ಎಂದು ಶಿವಯೋಗಿ ಸಿ. ಕಳಸದ ವಿವರಿಸಿದರು.

ಬಿಬಿಎಂಪಿ ವೆಬ್​ಸೈಟ್​ನಲ್ಲಿ ನೇರಪ್ರಸಾರ

ಚುನಾವಣೆ ಪ್ರಕ್ರಿಯೆಯನ್ನು ಬಿಬಿಎಂಪಿ ವೆಬ್​ಸೈಟ್​ನಲ್ಲಿ ನೇರಪ್ರಸಾರ ಮಾಡಲು ಚಿಂತನೆ ನಡೆಸಲಾಗಿದೆ. ಈಗಾಗಲೇ ತಾಂತ್ರಿಕ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಬಿಬಿಎಂಪಿ ವೆಬ್​ಸೈಟ್​ನಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಪ್ರಸಾರ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಚುನಾವಣಾಧಿಕಾರಿ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.

ರಾಜ್ಯಸಭಾ ಸದಸ್ಯರು

ಬಿ.ಕೆ. ಹರಿಪ್ರಸಾದ್, ಎಂ.ವಿ. ರಾಜೀವ್ ಗೌಡ, ಡಿ. ಕುಪೇಂದ್ರ ರೆಡ್ಡಿ, ಜೈರಾಮ್ ರಮೇಶ್, ನಿರ್ಮಲಾ ಸೀತಾರಾಮನ್, ಕೆ.ಸಿ. ರಾಮಮೂರ್ತಿ, ರಾಜೀವ್ ಚಂದ್ರಶೇಖರ್, ಜಿ.ಸಿ. ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ.

ಲೋಕಸಭಾ ಸದಸ್ಯರು

ಡಿ.ಕೆ. ಸುರೇಶ್, ಡಿ.ವಿ. ಸದಾನಂದಗೌಡ, ಪಿ.ಸಿ. ಮೋಹನ್, ಅನಂತಕುಮಾರ್, ಎಂ. ವೀರಪ್ಪ ಮೊಯ್ಲಿ.

ವಿಧಾನಸಭೆ ಸದಸ್ಯರು

ಎಸ್.ಆರ್. ವಿಶ್ವನಾಥ್, ಕೃಷ್ಣಬೈರೇಗೌಡ, ಮಂಜುನಾಥ್, ಬೈರತಿ ಸುರೇಶ್, ಮುನಿರತ್ನ, ಕೆ.ಜೆ. ಜಾರ್ಜ್, ಬಿ.ಎ. ಬಸವರಾಜ, ಅಖಂಡ ಶ್ರೀನಿವಾಸ, ಡಾ. ಸಿ.ಎಸ್. ಅಶ್ವತ್ಥನಾರಾಯಣ, ಎಸ್.ಟಿ. ಸೋಮಶೇಖರ್, ಕೆ. ಗೋಪಾಲಯ್ಯ, ಎಸ್. ರಘು, ಆರ್. ರೋಷನ್ ಬೇಗ್, ದಿನೇಶ್ ಗುಂಡೂರಾವ್, ಎನ್.ಎ. ಹ್ಯಾರೀಸ್, ಎಸ್. ಸುರೇಶ್​ಕುಮಾರ್, ವಿ. ಸೋಮಣ್ಣ, ಉದಯ್ ಗರುಡಾಚಾರ್, ಎಂ. ಕೃಷ್ಣಪ್ಪ, ಜಮೀರ್ ಅಹಮದ್ ಖಾನ್, ರಾಮಲಿಂಗಾರೆಡ್ಡಿ, ಅರವಿಂದ ಲಿಂಬಾವಳಿ, ರವಿಸುಬ್ರಹ್ಮಣ್ಯ, ಆರ್.ಅಶೋಕ್, ಸೌಮ್ಯಾರೆಡ್ಡಿ, ಎಂ.ಸತೀಶ್ ರೆಡ್ಡಿ, ಎಂ. ಕೃಷ್ಣಪ್ಪ, ಬಿ. ಶಿವಣ್ಣ.

ವಿಧಾನಪರಿಷತ್ ಸದಸ್ಯರು

ಡಾ. ಜಯಮಾಲಾ ರಾಮಚಂದ್ರ, ವಿ.ಎಸ್. ಉಗ್ರಪ್ಪ, ಎಚ್.ಎಂ. ರೇವಣ್ಣ, ಟಿ.ಎ. ಶರವಣ, ಡಿ.ಯು. ಮಲ್ಲಿಕಾರ್ಜುನ, ಪುಟ್ಟಣ್ಣ, ಜಿ. ರಘು ಆಚಾರ್, ಸಿ.ಆರ್. ಮನೋಹರ್, ಎಂ. ನಾರಾಯಣ ಸ್ವಾಮಿ, ಲೆಹರ್ ಸಿಂಗ್, ರಿಜ್ವಾನ್ ಅರ್ಷದ್, ಕೆ.ವಿ.ನಾರಾಯಣ ಸ್ವಾಮಿ, ಪಿ.ಆರ್. ರಮೇಶ್, ಕೆ. ಗೋವಿಂದ ರಾಜ್, ಡಾ.ತೇಜಸ್ವಿನಿಗೌಡ, ಕೆ.ಪಿ. ನಂಜುಂಡಿ ವಿಶ್ವಕರ್ಮ, ಎನ್. ರವಿಕುಮಾರ್, ವೈ.ಎ. ನಾರಾಯಣ ಸ್ವಾಮಿ ಮತ್ತು ಅ. ದೇವೇಗೌಡ.

Leave a Reply

Your email address will not be published. Required fields are marked *