ಹಿಂದೂ ಮಹಾಗಣಪತಿ ವಿಸರ್ಜನೆ ಬೃಹತ್ ಶೋಭಾ ಯಾತ್ರೆ

ಹಾವೇರಿ: ಡಿಜೆಗಾಗಿ ಹತ್ತು ದಿನಗಳ ಕಾಲ ಮುಂದೂಡಿದ್ದ ಹಾವೇರಿ ಹಿಂದು ಮಹಾಸಭಾ ಗಣೇಶ ಸಮಿತಿಯ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯ ಶುಕ್ರವಾರ ನಡೆಯಿತು.ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಕಾಗಿನೆಲೆಯ ರಸ್ತೆಯ ಕಲ್ಲು ಮಂಟಪದಿಂದ ಪ್ರಾರಂಭಗೊಂಡ ಮೇರವಣಿಗೆ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಬೃಹತ್ ಶೋಭಾ ಯಾತ್ರೆ ನಡೆಯಿತು. ಸುಪ್ರೀಂ ಕೋರ್ಟ್​ ಆದೇಶದಂತೆ ಕಡಿಮೆ ಡಿಸಿಬಲ್​ನ ಡಿಜೆ ಬಳಸುವ ಮೂಲಕ ಶೋಭಾ ಯಾತ್ರೆ ನಡೆಸಲಾಯಿತು.ಜಿಲ್ಲೆಯ ಸಹಸ್ರಾರು ಸಂಖ್ಯೆಯ ಭಕ್ತರು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಹಾವೇರಿ ಜಿಲ್ಲಾಡಳಿತ ಮತ್ತು ಹಿಂದು ಮಹಾಸಭಾ ಗಣಪತಿ ಸಮಿತಿಯ ಮಧ್ಯೆ ಪ್ರತಿಷ್ಠೆಯಾಗಿದ್ದ ಗಣಪತಿ ವಿಸರ್ಜನಾ ಕಾರ್ಯ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು ಸಮಿತಿ ಮತ್ತು ಜಿಲ್ಲಾಡಳಿತಕ್ಕೆ ನೆಮ್ಮದಿ ಮೂಡಿಸಿದೆ. ಈ ಸಂದರ್ಭದಲ್ಲಿ ಮುಂಜಾಗೃತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮೇರವಣಿಗೆಯಲ್ಲಿ ಹಣೆಗೆ ಕೇಸರಿ ತಿಲಕವಿಟ್ಟು ತೆಲೆಗೆ ಕೇಸರಿ ಬಣ್ಣದ ರುಮಾಲು ಸುತ್ತಿಕೊಂಡ ಯುವ ಸಮೂಹ ಡಿ.ಜೆ ಹಾಡುಗಳಿಗೆ ನೃತ್ಯ ಮಾಡುತ್ತಿದ್ದರೆ ಇತ್ತ ಮನೆಯ ಮಹಡಿ ಮೇಲೆ ಮೇರವಣಿಗೆಯನ್ನು ವಿಕ್ಷಿಸುತ್ತಿದ್ದವರು ಪುಷ್ಪಾರ್ಪಾಣೆ ಮಾಡುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು ಕೇಸರಿ ಬಾವುಟಗಳ ಹಾರಾಟ ಮನಸೂರೆಗೊಂಡವು. ಮಳೆಯರಾಯನ ಆಗಮನವು ಸಹ ಆಯಿತು ಬಿಜಿಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ ನಗರ ಸಭಾ ಸದಸ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ ಮುಖಂಡರಾದ ಪ್ರಭು ಹಿಟ್ನಳ್ಳಿ ಚನ್ನು ಮತ್ತಿಹಳ್ಳಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು

Leave a Reply

Your email address will not be published. Required fields are marked *