ದಶಮಾನೋತ್ಸವ ಲಾಂಛನ ಬಿಡುಗಡೆ, ಪುಸ್ತಕ ಜೊಳಿಗೆ ಅಭಿಯಾನಕ್ಕೆ ಚಾಲನೆ

ಸುರಪುರ: ಪ್ರತಿಷ್ಠಾನದ ದಶಮಾನೋತ್ಸವ ಸಾಂಸ್ಕೃತಿಕ ಇತಿಹಾಸದಲ್ಲಿ ಇದೊಂದು ಮಹತ್ವದ ಮೈಲುಗಲ್ಲಾಗಲಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಗಮೇಶ ಬಾದವಡಗಿ ಆಶಿಸಿದರು.

ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಸಗರನಾಡು ಸೇವಾ ಪ್ರತಿಷ್ಠಾನ ದಶಮಾನೋತ್ಸವ ಆಚರಣಾ ನಿಮಿತ್ಯ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಲಾಂಛನ ಬಿಡುಗಡೆಮಾಡಿ ಮಾತನಾಡಿದ ಅವರು ಸಂಘ ಸಂಸ್ಥೆಗಳಿಗೆ ದಶಮಾನೋತ್ಸವ, ಬೆಳ್ಳಿ ಹಬ್ಬ, ಸುವರ್ಣ ಸಂಭ್ರಮ, ಅಮೃತ ಮಹೋತ್ಸವ ಇವುಗಳು ಆಯಾ ಸಂಘದ ಕಾರ್ಯಾ ಚಟುವಟಿಕೆ ಎತ್ತಿ ಹಿಡಿಯುತ್ತವೆ ಮತ್ತು ಆ ನೆಪದಲ್ಲಿ ಸಾಹಿತ್ಯ ಸಂಸ್ಕೃತಿಯ ಸಂಭ್ರಮ ಮನೆಮಾಡುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಸಾಹಿತಿ ಚಂದ್ರಕಾಂತ ಕರದಳ್ಳಿ ಭಾಗವಹಿಸಿ ಮಾತನಾಡಿದ ಅವರು ದಶಮಾನೋತ್ಸವ ನಿಮಿತ್ಯ 10 ಪುಸ್ತಕಗಳನ್ನು ಪ್ರಕಟಣೆ ಮಾಡುತ್ತಿದ್ದು ಪ್ರತಿಷ್ಠಾನದ ಸಮಗ್ರ ಪರಿಚಯಕ್ಕೆ 3, ಸಗರನಾಡಿನ ಸಂಪೂರ್ಣ ಇತಿಹಾಸ ಸಾರುವ 3 ಸಂಪುಟಗಳು, ರಾಜ್ಯ ಮಟ್ಟದ ಪ್ರಾತಿನಿಧಿಕ 1 ಕವನ ಸಂಕಲನ, ಕಾರ್ಯಕ್ರಮ ನಿಮಿತ್ಯ ಲೇಖನಗಳನೊಳಗೊಂಡ 1 ಸಾಂಧರ್ಬಿಕ ಸ್ಮರಣ ಗ್ರಂಥ ಹಾಗೂ ಈ ಭಾಗದ ಸಾಧಕರ ಮತ್ತು ಕವಿಗಳ ಮಾಹಿತಿ ಕೋಶ ಸೇರಿದಂತೆ ಒಟ್ಟು 10 ಪುಸ್ತಕಗಳು ಮುಂದಿನ ಪಿಳಿಗೆಗೆ ಸಂಶೋಧನ ಕೃತಿಗಳನ್ನು ಆಗುವ ನಿಟ್ಟಿನಲ್ಲಿ ಆ ಪುಸ್ತಕಗಳನ್ನು ಪ್ರಕಟಿಸಬೇಕೆಂದು ಸಲಹೆ ನೀಡಿದರು.

ನಂತರ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ ದಶಮಾನೋತ್ಸವ ಸಂದರ್ಭದಲ್ಲಿ ಸಗರನಾಡು ಸಂಶೋಧನಾ ಕೇಂದ್ರ ಪ್ರಾರಂಭಿಸುವ ಮಹತ್ವದ ಯೋಜನೆ ಹೊಂದಲಾಗಿದೆ ಜೊತೆಗೆ ಈ ಭಾಗದ ಹಳೆಯ ಕೃಷಿ ಸಲಕರಣೆಗಳನ್ನು, ಜಾನಪದದ ವಾದ್ಯ ಪರಿಕರಗಳನ್ನು, ಜಾನಪದ ಕಲಾವಿಧರ ಉಡಿಗೆ ತೊಡಿಗೆಗಳನ್ನು, ಜಾನಪದ ಸಂಸ್ಕೃತಿ ಸಾತುವ ಚಿತ್ರ ಕಲೆಗಳನ್ನು ಸಂಗ್ರಹಿಸಿ ಜಾನಪದ ವಸ್ತು ಸಂಗ್ರಾಲಯಕೂಡ ಪ್ರಾರಂಭಿಸಲಾಗುವುದು ಹಾಗೂ ಇಂದು ಪುಸ್ತಕ ಜೋಳಿಗೆ ಅಭಿಯಾನಕ್ಕೆ ಚಾಲನೆ ನೀಡಿದ್ದು ಬರುವ ದಿನಗಳಲ್ಲಿ ನಾಡೀನ ತುಂಬಾ ಓಡಾಟ ಮಾಡಿ ಪ್ರತಿಯೊಬ್ಬ ಸಾಹಿತಿಗಳ ಹಳೆಯ ಮತ್ತು ಹೊಸ ಪುಸ್ತಕಗಳನ್ನು ಸಂಗ್ರಹಿಸಿ ದಶಮಾನೊತ್ಸವದ ಸವಿ ನೇನಪಿಗಾಗಿ ಗ್ರಂಥಾಲಯ ಸ್ಥಾಪಿಸುವುದರ ಜೊತೆಗೆ 10 ದಿನಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಹಾಗೂ ಪ್ರೆಕ್ಷಕರಿಗೆ ಉಚಿತವಾಗಿ ಪುಸ್ತಕಗಳನ್ನು ಕೋಡುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಿ.ಎನ್.ಭಂಡಾರಿ, ಎ.ಕೃಷ್ಣ ಸುರಪುರ, ಶಾಂತಪ್ಪ ಬೂದಿಹಾಳ, ಪ.ಮಾನು.ಸಗರ, ಶರಣಗೌಡ ಪಾಟೀಲ್, ಬಸಣ್ಣ ಗೊಡ್ರಿ, ವೀರಣ್ಣ ಕಲಿಕೇರಿ, ವಿಶಾಲ ದೊರನಳ್ಳಿ, ಮಹೇಶ ಪತ್ತಾರ, ರೀಯಾಜ ಪಟೇಲ್ ಸೇರಿದಂತೆ ಇತರಿದ್ದರು, ಡಾ|| ಯಂಕನಗೌಡ ಪಾಟೀಲ್ ನಿರೂಪಿಸಿದರು, ಮಲ್ಲಯ್ಯ ಸ್ವಾಮಿ ಇಟಗಿ ಸ್ವಾಗತಿಸಿದರು, ಬಸವರಾಜ ದಿಗ್ಗಿ ವಂದಿಸಿದರು.

Leave a Reply

Your email address will not be published. Required fields are marked *