ಅಭಿಲಾಷಾ ತರಬೇತಿ ಶಿಬಿರ

ಕೆಂಭಾವಿಯಲ್ಲಿ ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಉದ್ಯಮ ಅಭಿಲಾಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿರುವ ಸಮೂಹ ಸಂಪನ್ಮೂಲ ವ್ಯಕ್ತಿ ಮನು ಪ್ರೋಡಕ್ಷನ್ ಮಾಲಿಕ ವಿ.ಶ್ರೀಪಾದ.
ಕೆಂಭಾವಿ
ಪ್ರಧಾನಮಂತ್ರಿ ಅವರ ಜನಪರ ಯೋಜನೆಗಳಲ್ಲಿ ಒಂದಾದ ಉದ್ಯಮ ಅಭಿಲಾಷಾ ಯೋಜನೆಯಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಪ್ರಾರಂಭಿಸಲು ಈ ತರಬೇತಿ ಸಹಕಾರಿಯಾಗುತ್ತದೆ. ದೇಶದಲ್ಲಿ ಯುವ ಸಮುದಾಯವು ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಾಢ್ಯರಾಗಲು ಈ ಮಹತ್ತರವಾದ ಯೋಜನೆಯಿಂದ ಸಾಧ್ಯವಾಗಲಿದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಮನು ಪ್ರೋಡಕ್ಷನ್ ಮಾಲಿಕ ವಿ.ಶ್ರೀಪಾದ ಹೇಳಿದರು.
ಪಟ್ಟಣದ ಆನ್‍ಲೈನ್ ಸರ್ವಿಸ್ ಸೆಂಟರ್‍ನಲ್ಲಿ ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಉದ್ಯಮ ಅಭಿಲಾಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಅರ್ಹ ಶಿಬಿರಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸ್ವಯಂ ಉದ್ಯೋಗ ಆರಂಭಿಸಲು ಅವಕಾಶ ಕಲ್ಪಿಸಲಾಗುವದು. ಈ ಯೋಜನೆಯ ಮುಖ್ಯ ಉದ್ದೇಶ ಯುವ ಜನತೆಯಲ್ಲಿ ಉದ್ಯಮ ಸ್ಥಾಪನೆ ಬಗ್ಗೆ ಹಾಗೂ ಉದ್ಯಮವನ್ನು ತಮ್ಮ ವೃತ್ತಿಯಾಗಿ ಮಾಡಿಕೊಳ್ಳಲು ಪ್ರೇರೆಪಿಸಲಾಗುವದು, ಡಿಜಿಟಲ್ ಮಾಧ್ಯಮ ಮೂಲಕ ತರಬೇತಿ ನೀಡುವದು, ಮಹಿಳಾ ಉದ್ಯಮಿಗಳನ್ನು ಸೃಷ್ಠಿಸುವದು ಹಾಗೂ ಉದ್ಯಮ ಸ್ಥಾಪನೆಗೆ ಬೇಕಾಗುವಂತಹ ಬಂಡವಾಳವನ್ನು ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಒದಗಿಸುವದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್‍ಆಯ್‍ಡಿಬಿಆಯ್ ಮ್ಯಾನೇಜರ್ ಶ್ರೀರಾಮ, ಗುಣಶೀಲ, ನರಸಪ್ಪ, ಸಿಎಸ್‍ಸಿಎಲ್‍ಇ ಕೆಂಭಾವಿ ಸೆಂಟರ್ ಮಾಲಿಕ ಚಿದಾನಂದ ಶಹಾಪುರ ಭಾಗವಹಿಸಿದ್ದರು. ಸುಮಾರು 40 ಕ್ಕಿಂತ ಹೆಚ್ಚು ಜನರು ಶಿಬಿರದಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗಪಡಿಸಿಕೊಂಡರು.
“ಇದು ಕೇಂದ್ರ ಸರಕಾರದ ಅತ್ಯತ್ತಮ ಯೋಜನೆಯಾಗಿದೆ. ಯುವ ಜನತೆ ಇಂತಹ ತರಬೇತಿಗಳಲ್ಲಿ ಭಾಗವಹಿಸಿ ಸ್ವಯಂ ಉದ್ಯೋಗಿಗಳಾಗಲು ಪ್ರಯತ್ನಿಸಬೇಕು.”
– ಗಿರಿರಾಜ ಶಹಾಪುರ, ಶಿಬಿರಾರ್ಥಿ

Leave a Reply

Your email address will not be published. Required fields are marked *