ಮನೋರಮಾ ಕಾಲೇಜು ವಿದ್ಯಾರ್ಥಿಗಳ ಬಾಳಿನ ಬೋಧಿ ವೃಕ್ಷ

*ಹಳೆ ವಿದ್ಯಾರ್ಥಿಗಳ ಸಲಹೆ, ಇತಿಹಾಸದೊಂದಿಗೆ ಮಾತ್ರ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ
******
ಗದಗ: ವಿದ್ಯೆಯನ್ನು ಕಲಿಸಿದ ಉತ್ತಮ ಶಿಕ್ಷಣ ಸಂಸ್ಥೆಗಳ ಮೂಲಕ ನಮ್ಮ ಬದುಕು ರಚನೆಯಾಗುತ್ತದೆ. ಜೀವನದಲ್ಲಿ ನಾವು ಉನ್ನತ ಸ್ಥಾನಕ್ಕೆ ಏರಲು ಕಾರಣವಾದ ವಿದ್ಯಾ ಸಂಸ್ಥೆಗಳ ಋಣವನ್ನು ಎಂದಿಗೂ ಮರೆಯಬಾರದು ಎಂದು ಪ್ರಾಚಾರ್ಯ ಬಿ.ಎಸ್.ಹಿರೇಮಠ ಹೇಳಿದರು. ಸ್ಥಳೀಯ ಮನೋರಮಾ ಕಾಲೇಜಿನಲ್ಲಿ ರವಿವಾರ ಜರುಗಿದ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದರು, ವಿದ್ಯಾರ್ಥಿಗಳಿಗೆ ಸದಾ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡುವ ಮೂಲಕ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡುತ್ತಿರುವ ಮನೋರಮಾ ಕಾಲೇಜಿನಲ್ಲಿ 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿತು ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕೇವಲ ಪದವಿ ಹಾಗೂ ನೌಕರಿಗಾಗಿ ಶಿಕ್ಷಣ ನೀಡದೇ ನಮ್ಮ ಯುಶಕ್ತಿ ದೇಶದ ಪ್ರಗತಿಯ ದ್ಯೋತಕವಾಗುವಂತೆ ಹಾಗೂ ಯಾರ ಮೇಲೆಯೂ ಅವಲಂಬನೆಯಾಗದೆ ಉತ್ತಮ ರೀತಿಯಲ್ಲಿ ತಾವೇ ಬದುಕು ಕಟ್ಟಿಕೊಳ್ಳುವಂತ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ ಎಂದರು. ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಪ್ರತಿಯೊಬ್ಬರು ಒಂದೆಡೆ ಸೇರಿ ಅವರ ಅನುಭವಗಳನ್ನು, ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಳ್ಳುವಂತಾಗಬೇಕು ಹಾಗೂ ಅಗತ್ಯವಿದ್ದವರಿಗೆ ಉದ್ಯೋಗವಕಾಶ, ಕೌಶಲ್ಯಗಳನ್ನು ಹಂಚಿಕೊಳ್ಳುವ ಉತ್ತಮ ವೇದಿಕೆ ಕಲ್ಪಿತವಾಗಬೇಕು ಎಂದು ಹೇಳಿದರು.

ಗದಗ ನಗರದ ಮನೋರಮಾ ಕಾಲೇಜಿನಲ್ಲಿ ಜರುಗಿದ ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಬಿ.ಎಸ್.ಹಿರೇಮಠ ಮಾತನಾಡಿದರು.

ಗದಗ ನಗರದ ಮನೋರಮಾ ಕಾಲೇಜಿನಲ್ಲಿ ಜರುಗಿದ ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ಚಂದ್ರು ಎಂ. ರಾಥೋಡ್ ಉದ್ಘಾಟಿಸಿದರು

ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಹಳೆಯ ವಿದ್ಯಾರ್ಥಿ ಚಂದ್ರು ಎಂ. ರಾಥೋಡ್ ಮಾತನಾಡಿ, ಮನೋರಮಾ ಕಾಲೇಜಿನ ಇತಿಹಾಸದಲ್ಲಿ ನಾನು ಮೊದಲ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆ ಇದೆ. ಇಲ್ಲಿ ಕಲಿಸಿದ ಪಾಠವೇ ನಮ್ಮ ಇಂದಿನ ಬದುಕು ಹಾಗೂ ಯಶಸ್ಸು ಆಗಿದೆ. ನನಗೆ ಕಲಿಸಿದ ಗುರುಗಳ ಸಮ್ಮುಖದಲ್ಲಿ ಮಾತನಾಡುವ ಹಾಗೂ ವೇದಿಕೆಯನ್ನು ಹಂಚಿಕೊಳ್ಳುವ ಅವಕಾಶ ದೊರೆತಿರುವುದು ನನ್ನ ಭಾಗ್ಯವಾಗಿದೆ. ಮನೋರಮಾ ಕಾಲೇಜು ಬೋಧಿ ವೃಕ್ಷವಿದ್ದಂತೆ, ಎಷ್ಟೋ ವಿದ್ಯಾರ್ಥಿಗಳ ಬಾಳಿನ ಜ್ಞಾನದ ಬೆಳಕಾಗಿದೆ. ನಾವು ಜೀವನಪೂರ್ತಿ ವಿದ್ಯಾರ್ಥಿಯಾಗುವ ಮೂಲಕ ನಮ್ಮ ನಾಡಿಗೆ, ಕಲಿತ ಶಿಕ್ಷಣ ಸಂಸ್ಥೆಗೆ, ಗುರು ಬಳಗಕ್ಕೆ ಗೌರವ ತರಬೇಕು ಎಂದರು.
ಚೇರಮನ್ನರಾದ ಎನ್.ಎಂ.ಕುಡತರಕರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ರೀತಿಯ ಬದಲಾವಣೆ ತರುವ ಉದ್ದೇಶದಿಂದ ಮಾತೋಶ್ರೀಯವರ ಹೆಸರಿನ ಮೇಲೆ ವಿದ್ಯಾ ಸಂಸ್ಥೆಯನ್ನು 2008ರಲ್ಲಿ ಆರಂಭಿಸಲಾಯಿತು. ಇಂದಿಗೆ 10 ವರ್ಷಗಳೊಂದಿಗೆ ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ಇದರ ಸವಿನೆನಪಿಗಾಗಿ ಡಿಸೆಂಬರ್ ಕೊನೆಯ ವಾರದಲ್ಲಿ ದಶಮಾನೋತ್ಸವದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗುತ್ತಿದೆ ಹಾಗೂ ಈ ಕಾರ್ಯಕ್ರಮಕ್ಕೆ ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಕಾಲೇಜಿನ ಗೌರವನ್ನು ಹೆಚ್ಚಿಸಿರುವ ಪ್ರತಿ ವಿದ್ಯಾರ್ಥಿಯೂ ಆಗಮಿಸಲಿದ್ದಾರೆ ಎಂದರು. ಹಳೆ ಬೇರು ಹೋಸ ಚಿಗುರು ಸೇರಿದರೆ ಮಾತ್ರ ಕಾಲೇಜು ಸೋಬಗು ಎನ್ನುವಂತೆ ಹಳೆಯ ವಿದ್ಯಾರ್ಥಿಗಳ ಅಗತ್ಯ ಸಲಹೆ, ಸಹಕಾರ ಮತ್ತು ಇತಿಹಾಸದೊಂದಿಗೆ ಮಾತ್ರ ಶಿಕ್ಷಣ ಸಂಸ್ಥೆ ಬೆಳೆಯಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಕಲಿಕೆಯ ದಿನಗಳ ಅನುಭವವನ್ನು ಹಂಚಿಕೊಂಡರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಕಿಶೋರ ಮುದಗಲ, ಆರ್. ಲಖಾನಿ, ಸ್ನೇಹಾ ಕುರಂದವಾಡ, ಟಿ. ಅತ್ತಾರ, ಉಮಾ ದಿನ್ನಿ, ಮೆಹುಲ್, ಕೃಷ್ಣ, ಆನಂದ, ಪೂಜಾ ಜೈನ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *