ಮೊದಲ ಬಾರಿಗೆ ಬೆಳ್ಳಿ ತೆರೆ ಮೇಲೆ ರಾಗಿಣಿ ರಾಮಚಂದ್ರನ್!

ವೃತ್ತಿಯಿಂದ ನೃತ್ಯಗಾರ್ತಿಯಾಗಿರುವ ನಟನೆಯನ್ನು ಪ್ಯಾಶನ್ ಮಾಡಿಕೊಂಡಿರುವ ರಾಗಿಣಿ ರಾಮಚಂದ್ರನ್ ಪೂರ್ಣ ಪ್ರಮಾಣದ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.
ಕೆಲವು ವಾಣಿಜ್ಯಾತ್ಮಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದ ರಾಗಿಣಿ , ನಟನೆಗೆ ಪೂರ್ಣ ಅವಧಿ ಮೀಸಲಿಡಲು ನಿರ್ಧರಿಸಿದ್ದಾರೆ. ಕಿರುಚಿತ್ರ ರಿಷಬಪ್ರಿಯದಲ್ಲಿ ಸಾಹಸ ಪ್ರದರ್ಶಿಸಿದ್ದ ರಾಗಿಣಿ ವಿಕ್ರಮ್ ಚಿತ್ರದಲ್ಲಿ ಪತಿ ಪ್ರಜ್ವಲ್ ದೇವರಾಜ್ ಜೊತೆಯಲ್ಲಿ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಿರ್ದೇಶಕ ರಘು ಸಮರ್ಥ್ ಅವರ ಮುಂದಿನ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ವಿಜಯದಶಮಿ ಶೀರ್ಷಿಕೆಯ ಚಿತ್ರಕ್ಕೆ ಇದೇ ತಿಂಗಳ 19 ರಂದು ಮುಹೂರ್ತ ನಡೆಯಲಿದ್ದು, 21ರ ನಂತರ ಚಿತ್ರೀಕರಣ ನಡೆಯಲಿದೆ.
ರಾಗಿಣಿಗೆ ಕ್ಯಾಮರಾ ಏನೂ ಹೊಸದೇನಲ್ಲಾ , ಈ ಹಿಂದೆ ಉತ್ತಮ ಕಥೆ ಸಿಕ್ಕಿದ್ದರೆ ಆ ಪಾತ್ರಕ್ಕೆ ನ್ಯಾಯ ಒದಗಿಸುವುದಾಗಿ ಅವರೇ ಹೇಳಿಕೊಂಡಿದ್ದರು.
ನಿರ್ದೇಶಕ ರಘು ಸಮರ್ಥ್ ಗುರುನಂದನ್ ನಟಿಸಿದ ಸ್ಮೈಲ್ ಫ್ಲೀಸ್ ಚಿತ್ರ ಹಾಗೂ ಅನೇಕ ಧಾರಾವಾಹಿಗಳ ತೊಡಗಿಸಿಕೊಂಡಿದ್ದರು. ವಿಜಯ ದಶಮಿ ಅವರ ಮುಂದಿನ ಭವಿಷ್ಯದ ಚಿತ್ರವಾಗಿದೆ.

Leave a Reply

Your email address will not be published. Required fields are marked *