ಗುತ್ತಲ ದಸರಾಕ್ಕೆ ಅದ್ದೂರಿ ಚಾಲನೆ

ಗುತ್ತಲ: ಶ್ರೀ ದುರ್ಗಾದೇವಿ ದಸರಾ ಉತ್ಸವ ಸಮಿತಿ ವತಿಯಿಂದ ಜರಗುವ ಗುತ್ತಲ ದಸರಾ ಉತ್ಸವಕ್ಕೆ ಮನಿಪ್ರ ಗುರುಸಿದ್ದಯೋಗಿಸ್ವಾಮಿಗಳು ಚಾಲನೆ ನೀಡಿದರು.
ವೈಭವ ಪೂರ್ಣ ಮೇರವಣಿಗೆಗಜರಾಜ ಹೊತ್ತ ದುರ್ಗಾದೇವಿ ಯೊಳಗೊಂಡ ಅಂಬಾರಿ ಗೊಂಬೆಕುಣಿತ ವಿವಿಧ ಜಾನಪದ ವಾದ್ಯದೊಂದಿಗೆ ಶಾಲಾ ಕಾಲೇಜುಗಳ ಸ್ತಬ್ದ ಚಿತ್ರಗಳು ಮೇರವಣಿಗೆಗೆ ಕಳೆತಂದು ಕೊಟ್ಟರೆ ಯುವಕರು ತಲೆಗೆ ಕೇಸರಿಪೇಟ ಹಣೆಗೆ ತಿಲಕ ಧರಿಸಿಕೊಂಡು ಕೇಸರಿ ಬಣ್ಣದ ಧ್ವಜಗಳನ್ನು ಹಿಡಿದು ಹಾಡುಗಳಿಗೆ ನೃತ್ಯ ನೋಡಗರನ್ನು ಸೆಳೆಯಿತು.
ಪೊಲೀಸ್ ಠಾಣೆಯ ಮುಂದಿನ ರಸ್ತೆಯಿಂದ ಪ್ರಾರಂಭಗೊಂಡ ಮೇರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಲಿಪೇಟೆಯಲ್ಲಿ ಅಲಂಕೃತಗೊಂಡ ಭವ್ಯಮಂಟಪಕ್ಕೆ ಬಂದು ತಲುಪಿತು.
ಚನ್ನಪ್ಪ ಕಲಾಲ ಪಾಲಾಕ್ಷಯ್ಯ ನೆಗಳೂರಮಠ ರಾಜು ಹೂಗಾರ ಮೃತ್ಯುಂಜಯ ರಿತ್ತಿಮಠ ಮಂಜುನಾಥ ಯರವಿನತೆಲಿ ಪ್ರದೀಪ ಸಾಲಗೇರಿ ಶಿವಯೋಗಿ ಕಾಗಿನಲೆ ಮಾರುತಿ ಕೋಡಬಾಳ ಸೇರಿದಂತೆ ಹಲವು ಗ್ರಾಮಗಳಿಂದ ಆಗಮಿಸಿದ ಭಕ್ತರು ಮೇರವಣಿಗೆಯಲ್ಲಿ ಭಾಗವಹಿಸಿ ಸಂಬ್ರಮಿಸಿದರು.

Leave a Reply

Your email address will not be published. Required fields are marked *