ಪಟ್ಟಣದ ಮಂಗಲ ಕಾರ್ಯಾಲಯವನ್ನು ಸಮುದಾಯ ಆಸ್ಪತ್ರೆಗೆ ನೀಡಬಾರದೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋಬಳಿ ಅಧ್ಯಕ್ಷ ಎಚ್ ಆರ್ ಬಡಿಗೇರ್ ಮನವಿ

ಕೆಂಭಾವಿ : ಪಟ್ಟಣದ ಮಂಗಲ ಕಾರ್ಯಾಲಯವನ್ನು ಸಮುದಾಯ ಆಸ್ಪತ್ರೆಗೆ ನೀಡಬಾರದೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋಬಳಿ ಅಧ್ಯಕ್ಷ ಎಚ್ ಆರ್ ಬಡಿಗೇರ್ ಸಹಾಯಕ ಕಾರ್ಯಪಾಲಕ ಅಭಿಯಂತರರು ರಶೀದಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸದರು. ಮನವಿ ಪತ್ರವನ್ನು ಸಲ್ಲಿಸಿ ಮತಾನಾಡಿದ ಅವರು ಕೆಬಿಜೆಎನ್‍ಎಲ್ ಒಡೆತನದಲ್ಲಿರುವ ಕಲ್ಯಾಣ ಮಂಟಪ ಕಾರ್ಯಾಲಯವನ್ನು ಬಡವರ ಮದುವೆ ಹಾಗೂ ಮಂಗಲ ಕಾರ್ಯಾಗಳನ್ನು ಮಾಡಲು ನಿರ್ಮಿಸಿದ್ದು, ಈ ಕಲ್ಯಾಣ ಮಂಟಪ ಕೇವಲ 10 ಸಾವಿರ ನಿಗಧಿತ ಕಡಿಮೆದರವನ್ನು ಹೊಂದಿದ್ದು, ಸಾಲ ಶೋಲ ಮಾಡಿ ಮದುವೆ ಮಾಡುವ ಬಡಕುಟುಂಬಗಳಿಗೆ ಅನುಕೂಲವಾಗುಹತ್ತಿದೆ. ಆದರೆ ಈಗ ಪಟ್ಟಭಧ್ರ ಹಿತಾಶಕ್ತಿಗಳಿಂದ ಪಟ್ಟಣದ ಸಮುದಾಯ ಆಸ್ಪತ್ರೆಗೆ ನೂತನ ಕಟ್ಟಡವನ್ನು ನಿರ್ಮಿಸುತ್ತೇವೆ ಎಂದು ನಾಲ್ಕು ವರ್ಷದಿಂದ ಕುಂಟು ನೆಪಗಳನ್ನು ಹೇಳುತ್ತಾ ಕಟ್ಟಡದ ನಿರ್ಮಾಣವನ್ನು ಮುಂದೆಕ್ಕೆ ಹಾಕುತ್ತಾ ಈಗ ಇರುವಂತಹ ಕೆಬಿಜೆಎನ್‍ಎಲ್ ಕಲ್ಯಾಣ ಮಂಟಪವನ್ನು ಆಸ್ಪತ್ರೆಯನ್ನಾಗಿ ಮಾಡಲು ಹೊರಟಿದ್ದಾರೆ. ಆದ್ದರಿಂದ ಕಲ್ಯಾಣ ಮಂಟಪವನ್ನು ಆಸ್ಪತ್ರೆಗೆ ನೀಡಿದರೆ ಬಡ ಕುಟುಂಬಗಳಿಗೆ ಅನ್ಯಾಯವಾಗುತ್ತದೆ. ಕಾಟಾಚಾರಕ್ಕೆ ಎಂಬಂತೆ ಆಸ್ಪತ್ರೆಯನ್ನು ಮಾಡುತ್ತೇವೆ ಎಂದು ಕಲ್ಯಾಣ ಮಂಟಪವನ್ನು ಕೇಳುತ್ತಿದ್ದಾರೆ ಎಂದು ದೂರಿದರು. ಪಟ್ಟಣದಲ್ಲಿರುವಂತಹ ಕಟ್ಟಡಗಳ ವಾಸ್ಥವ ಸ್ಥಿತಿಯನ್ನು ಕೊಲಕುಂಶವಾಗಿ ಪರಿಶೀಲಿಸಿ ಆಸ್ಪತ್ರೆಗೆ ನೀಡಬಾರದು, ಒಂದು ವೇಳೆ ಮನವಿಗೆ ಸ್ಪಂದಿಸಿದೆ ಹೋದರೆ ಕೆಬಿಜೆಎನ್‍ಎಲ್ ಕಛೇರಿಗೆ ಬೀಗ್ ಹಾಕಿ ಉಗ್ರ ಪತ್ರಭಟನೆಯನ್ನು ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಈ ಸಂಧರ್ಭದಲ್ಲಿ ಕುಮಾರ ಮೋಪಗಾರ, ಶ್ರೀಶೈಲ್ ಕಾಚಾಪೂರ, ಸಚಿನ್ ದೊರೆ, ತುಳಜಾ ರಾಮ ವಕೀಲ, ದೇವು ಭಜಂತ್ರಿ ಇದ್ದರು.

Leave a Reply

Your email address will not be published. Required fields are marked *