ಅಂಬೇಡ್ಕರ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮಹಾ ಪರಿನಿರ್ವಾಣ ದಿನ

ಕೆಂಭಾವಿ: ಅಂಬೇಡ್ಕರ ಅವರ ತತ್ವ, ಆದರ್ಶಗಳು ಪ್ರಜಾಪ್ರಭುತ್ವದಡಿಯಲ್ಲಿ ಜೀವನವನ್ನು ನಡೆಸುತ್ತಿರುವ ನಮಗೆಲ್ಲರಿಗೂ ಮಾದರಿಯಾಗಿವೆ ಎಂದು ಎಂದು ಭಾರತೀಯ ದಲಿತ ಪ್ಯಾಂಥರ್ಸ ಅಧ್ಯಕ್ಷ ಲಕ್ಷ್ಮಣ್ಣ ಬಸರಿಗಿಡ ಹೇಳಿದರು.
ಗುರುವಾರ ಪಟ್ಟಣದ ವಾರ್ಡ ಸಂ 2 ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ರವರ 62ನೆ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಬಾಬಾ ಸಾಹೇಬರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಆದರ್ಶವಾದಿಗಳ, ಮಹನೀಯರ ತತ್ವಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಮೃದ್ಧ ಸಮಾಜ ಹೊಂದಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಬಾವಿಮನಿ, ಶಂಕ್ರಪ್ಪ ಕಟ್ಟಿಮನಿ, ಶಿವಪ್ಪ ಕಂಬಾರ, ಪರಶುರಾಮ ಮಾಳಳ್ಳಿಕರ, ಸಿದ್ದಪ್ಪ ಯತ್ನಾಳ್, ಮಲ್ಲಿಕಾರ್ಜುನ ಬಸರಿಗಿಡ, ಮಾಳಪ್ಪ ರಾಜಾಪೂರ, ಮಲ್ಲು ಬಸರಿಗಿಡ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *