ಅಮೃತ ಮಹೋತ್ಸವಕ್ಕೆ ಸಜ್ಜಾದ ಕೋಟುಮಚಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ನರೇಗಲ್ಲ : ಸ್ವಾತಂತ್ರ್ಯ ಪೂರ್ವದಿಂದ ಸತತ ಅಭಿವೃದ್ಧಿ ಪಥದತ್ತ ಸಾಗುತ್ತಾ ಬಂದಿರುವ ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ.2ರ 75 ವರ್ಷಗಳ ಸಾರ್ಥಕ ಸೇವಾ ಅವಧಿ ಪೂರೈಸುತ್ತಿರುವ ಈ ಸಂಘ ಅಮೃತ ಮಹೋತ್ಸವಕ್ಕೆ ಸಜ್ಜಾಗಿ ಮಧು-ವರರರಂತೆ ಅಲಂಕೃತಗೊಂಡಿದೆ.

ದೇಶದಲ್ಲಿ ಕರ್ನಾಟಕ ರಾಜ್ಯ ಸಹಾಕರ ಸಂಘದ ಉಗಮ ಕಾರಣವಾಗಿರುವುದು ಕನ್ನಡಿಗರಾದ ನಮಗೆ ಹೆಮ್ಮೆ ತರುವಂತಹದು. ಪ್ರಥಮವಾಗಿ 1904ರಲ್ಲಿ ಇದೇ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾಗಿ ಅಸ್ತಿತ್ವಕ್ಕೆ ಬಂದಿತು.

ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಕ್ಕೆ ಅಪಾರ ಸೇವೆ ನೀಡಿದವರು. ಸನ್. 1942ರಲ್ಲಿ ಕೋಟುಮಚಗಿ ಗ್ರಾಮದ ಹಿರಿಯ ಮನೆತನದ ದಿ. ಚನ್ನಬಸನಗೌಡ ಈಶ್ವರಗೌಡ ಸೋಮನಗೌಡ್ರ ಹಾಗೂ ವೇ.ಮೂ ಫಕೀರಯ್ಯ ಹಿರೇಮಠ, ದಿ. ಶಂಕ್ರರಾವ್ ಕುಲಕರ್ಣಿ ವೀರಬಸಪ್ಪನವರ ನೆಗಲಿ ಸೇರಿದಂತೆ ಗ್ರಾಮದ ಹಿರಿಯರು ವಿಚಾರ ಮಾಡಲಾಗಿತು. ಆದರೆ, ಕೆಲವೇ ತಿಂಗಳಲ್ಲಿ ಸಮೀಪದ ಮುಂಡರಗಿಯ ಹನಮಂತ ಕುರಡಗಿ, ಕೆ.ಎಚ್. ಪಾಟೀಲ ಹಾಗೂ ಸ್ವ ಗ್ರಾಮದ ಚನ್ನಬಸನಗೌಡ ಸೋಮನಗೌಡ್ರ ನೇತೃತ್ವದಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಬಾಗಲಕೋಟಿ ಜಿಲ್ಲೆಗೆ ಬಂದಾಗ ಚನ್ನಬಸನಗೌಡ ಸೋಮನಗೌಡ್ರ ಅವರು ತಮ್ಮ ಸ್ವತಃ ಹಣದಲ್ಲಿ ಸಂಘ ಹೋರಾಟ ಮಾಡಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸನ್.1942ರಲ್ಲಿ ಈ ಸಂಘಕ್ಕೆ ಚನ್ನಬಸವೇಶ್ವರ ಸಹಕಾರ ಸಂಘ ಎಂಬ ನಾಮಕರಣ ಮಾಡಲಾಯಿತು. 195ರಲ್ಲಿ ಸಹಕಾರ ಸಂಘಕ್ಕೆ ಒಂದು ಗೋಡನಾ ಉದ್ಘಾಟನೆಗೆ ಅಂದಿನ ಶಾಸಕ ಜ್ಞಾನದೇವ ದೊಡ್ಡಮೇಟಿ ಹಾಗೂ ಎಂ.ಎಲ್.ಸಿ. ಎಚ್.ಕೆ. ಪಾಟೀಲ ಬಂದಿದ್ದರು.

ನಂತರ 2001ರಲ್ಲಿ ಪ್ರಕಾಶ ಕುಲಕರ್ಣಿ ಅವರನ್ನು ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರ್ನಾಗಿ ನೇಮಕ ಮಾಡಲಾಯಿತು. ಅವರ ಅಧ್ಯಕ್ಷತೆ ವಹಿಸಿಕೊಂಡ ಸಂದರ್ಭದಲ್ಲಿ ಬೀಕರ ಬರಗಾಲ ಇತ್ತು. ಈ ಸಮಯದಲ್ಲಿ ರಾಜ್ಯ ಸರ್ಕಾರ ಸಹಕಾರ ಸಂಘದಲ್ಲಿ ಬಡ್ಡಿ ಸಂಪೂರ್ಣ ಮನ್ನಾ ಎಂಬ ಆದೇಶ ಹೊರಡಿಸಿತ್ತು. ಆದರೆ, ರೈತರು ಅಸಲು ಮರುಪಾವತಿ ಮಾಡಿದರೆ ಮಾತ್ರ ಬಡ್ಡಿ ಮನ್ನಾ ಎಂಬ ಆದೇಶವಾಗಿತ್ತು. ರೈತರು ಅಸಲು ಕೊಡುವಷ್ಟು ಸಾಮಥ್ರ್ಯವಿದಿಲ್ಲ. ಅದಕ್ಕೆ ಸಂಘದ ಅಧ್ಯಕ್ಷ ಪ್ರಕಾಶ ಕುಲಕರ್ಣಿ ಹಾಗೂ ಪ್ರಕಾಶ ಮುಧೋಳ ಮತ್ತು ನಿರ್ದೇಶಕರು ಸೇರಿಕೊಂಡು ಪ್ರಕಾಶ ಕುಲಕರ್ಣಿ ಅವರ ಸ್ವತಃ 10 ಲಕ್ಷ ರೂಗಳಲ್ಲಿ ಬಳಕೆ ಮಾಡಿಕೊಂಡು ರೈತರ ಬಡ್ಡಿ ಮನ್ನಾ ಮುಟ್ಟಿಸಲಾಯಿತು. ಅಂದು ಚನ್ನಬಸವೇಶ್ವರ ಸಹಕಾರ ಸಂಘವು ಆರ್ಥಿಕವಾಗಿ ಬಹಳ ಕಷ್ಟದಲ್ಲಿ ಇತ್ತು. ಆದರೆ, ಇಂದು ಕೋಟುಮಚಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗದಗ ಜಿಲ್ಲೆಯಲ್ಲಿ ಉತ್ತಮ ಸಹಕಾರ ಸಂಘ ಎಂಬ ಪ್ರಶಸ್ತಿ ಪಡೆದುಕೊಂಡಿದೆ.

ನೂತನ ಕಟ್ಟಡಕ್ಕೆ ಅನುದಾನದ ಮಾಹಿತಿ :
2017ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಳೀಯ ಶಾಸಕರಾಗಿದ್ದ ಜಿ.ಎಸ್. ಪಾಟೀಲ ಅವರು ತಮ್ಮ ಶಾಸಕರ ಅನುದಾನ 5ಲಕ್ಷ ರೂ.ಗಳನ್ನು ಬಿಡುಗಡೆಗೊಳ್ಳಿಸಿದರು. ಜಿಲ್ಲೆಯ ಸಚಿವರಾಗಿದ್ದ ಎಚ್.ಕೆ. ಪಾಟೀಲ ಅವರು ಸುವರ್ಣಾ ಗ್ರಾಮ ಯೋಜನೆಯಲ್ಲಿ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದರು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಹಣವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉಳಿದ 20 ಲಕ್ಷ ರೂ.ಗಳನ್ನು ಬಳಕೆ ಮಾಡಿಕೊಂಡು ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಸಂಘ ಪ್ರಾರಂಭವಾದಾಗ ಸಂಘದಲ್ಲಿ ಕೇವಲ 110 ಸದಸ್ಯರು ಇದ್ದರು. 2019ರಲ್ಲಿ ಒಟ್ಟು ಸದಸ್ಯರ ಸಂಖ್ಯೆ 526 ಇದೆ. 2017-18ರಲ್ಲಿ ವಿತರಣೆ ಮಾಡಲಾದ ಸಾಲದಲ್ಲಿ 1 ಕೋಟಿ 30 ಲಕ್ಷ ರೂ. ಲಾಭ ಪಡೆದುಕೊಂಡಿದೆ ಎಂದು ಪ್ರಾ.ಕೃ.ಪ.ಸ.ಸಂ.ನಂ 2ರ ಅಧ್ಯಕ್ಷ ಪ್ರಕಾಶ ಕುಲಕರ್ಣಿ ತಿಳಿಸಿದರು.

ನಾಳೆಯ ಕಾರ್ಯಕ್ರಮದ ಸಾನ್ನಿಧ್ಯವನ್ನು ಗಂಗಾಧರಯ್ಯ ಹಿರೇಮಠ, ಫಕ್ಕೀರಯ್ಯ ಹಿರೇಮಠ ವಹಿಸಲಿದ್ದಾರೆ. ಮಾಜಿ ಶಾಸಕ ಜಿ.ಎಸ್. ಪಾಟೀಲ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಪ್ರಾ.ಕೃ.ಪ.ಸ.ಸಂ.ನಂ 2ರ ಅಧ್ಯಕ್ಷ ಪ್ರಕಾಶ ಕುಲಕರ್ಣಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಮೃತ ಮಹೋತ್ಸವದ ಸವಿನೆನಪಿನ ಕ್ಯಾಲೆಂಡರನ್ನು ಗದಗ ಶಾಸಕ ಎಚ್.ಕೆ. ಪಾಟೀಲ ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ ರೈತರಿಗೆ ಸಾಲ ಮನ್ನಾ ಚೆಕ್‍ನ್ನು ಧಾರವಾಡ ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ ವಿತರಣೆ ಮಾಡಲಿದ್ದಾರೆ. ಜಿ.ಪಂ ಅಧ್ಯಕ್ಷ ವಿ.ಪಿ. ಬಳಿಗೇರ, ಜಿ.ಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಕೆ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಜಿ.ಪಂ ಸದಸ್ಯ ಸಿದ್ದಲಿಂಗೇಶ ಪಾಟೀಲ, ತಾ.ಪಂ ಅಧ್ಯಕ್ಷ ಮೋಹನ ದುರಗಣ್ಣವರ, ತಾ.ಪಂ ಉಪಾಧ್ಯಕ್ಷೆ ಸುಜಾತಾ ಖಂಡು, ತಾ.ಪಂ ಸದಸ್ಯ ವಿದ್ಯಾಧರ ದೊಡ್ಡಮನಿ, ಧಾರವಾಡ ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ಕಲಗುಡಿ, ಕೃಷ್ಣಗೌಡ ಪಾಟೀಲ, ಶಿವಾಜಿರಾವ ಕುಲಕರ್ಣಿ, ಎ.ಪಿ.ಎಂ.ಸಿ. ಸದಸ್ಯ ಶಿವಪುತ್ರಪ್ಪ ಇಟಗಿ, ಪ್ರಾ.ಕೃ.ಪ.ಸ.ಸಂ ನಂ.1 ಅಧ್ಯಕ್ಷ ಸಂಗಪ್ಪ ಗಾಣಗೇರ, ಮುನಿಯಪ್ಪ, ಎಸ್.ಬಿ. ಹಿರೇಮಠ, ಎಂ.ಎಸ್. ಯರಗಲ್ಲ, ಎಸ್.ಬಿ. ಕೊಣ್ಣೊರ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ಸಿಕಂದರ ಎಂ. ಆರಿ

Leave a Reply

Your email address will not be published. Required fields are marked *