ಸೂಪರ್ ಅಚೀವರ್ಸ್ ಸಿರೀಸ್ I – ಪ್ರಶಸ್ತಿ ಗೆ ಆಯ್ಕೆ

ಜನ ಮನ ಫೌಂಡೇಶನ್ (ರಿ)ನ ಅಡಿಯಲ್ಲಿ ನೀಡಲಾಗುವ 2019 ರ ಸೂಪರ್ ಅಚೀವರ್ಸ್ ಸಿರೀಸ್ I ಅವಾರ್ಡ್ ಗೆ ಸಾಹಿತ್ಯ ಸಂಘಟಕ ಕ್ಷೇತ್ರದಲ್ಲಿ ಶ್ರೀ ಸಂತೋಷ್ ಬಿದರಗಡ್ಡೆ ಮತ್ತು ಬಾಲವಿಕಾಸ ಅಕಾಡೆಮಿಯ ಫೆಲೋಶಿಪ್ ಅವಾರ್ಡ್ ವಿನ್ನರ್ ಆದ ಶ್ರೀಮತಿ ಸುಲಕ್ಷಣ ಶಿವಪುರ್ ಅವರು ಆಯ್ಕೆಯಾಗಿದ್ದಾರೆ ಎಂದು ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಅಂಬಿಕಾ ಹಂಚಾಟೆಯವರು ಮಾಹಿತಿಯನ್ನು ಪ್ರಕಟಣೆ ಪಡಿಸಿರುತ್ತಾರೆ.

ಸಮಯದ ಅಭಾವ ಕೆಲಸದ ಒತ್ತಡದ ಮಧ್ಯದಲ್ಲೂ ಏನೆಲ್ಲ ಒಬ್ಬ ವ್ಯಕ್ತಿ ಸಾಧನೆ ಮಾಡಲು ಸಾಧ್ಯ ಮತ್ತು ಅಂತಹ ವಿಶೇಷ ವ್ಯಕ್ತಿಗಳಿಗಾಗಿಯೇ ಅವರ ಕಾರ್ಯವೈಖರಿಯನ್ನು ಗಿರುತಿಸಿ ನೀಡಲಾಗುವ ಪ್ರಶಸ್ತಿಯೇ ಈ ಸೂಪರ್ ಅಚೀವರ್ಸ್ ಅವಾರ್ಡ್ .

ಹೌದು! ಕೇವಲ ವೃತ್ತಿಯಲ್ಲಿ ಮಾತ್ರವಲ್ಲದೆ, ಪ್ರವೃತ್ತಿಯಲ್ಲೂ ಅದರಲ್ಲೂ ಒಂದಕ್ಕಿಂತ ಹೆಚ್ಚಿನ ಹವ್ಯಾಸಗಳಲ್ಲಿ /ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆಯ ಹಾದಿಯಲ್ಲಿ ನಡೆಯುವ ಸಾಧಕರನ್ನು ಗುರುತಿಸಿ ಅವರ ಕಾರ್ಯಗಳು ಯಾವ ರೀತಿ ಇತರರಿಗೂ ಮಾದರಿಯಾಗುವಂತೆ ಇವೆ ಎಂಬುದನ್ನು ಜನತೆಯ ಮುಂದೆ ನಿದರ್ಶಿಸುವದೇ ಈ ಸೂಪರ್ ಅಚೀವರ್ಸ್ ಸೀರಿಸ್ 01 ನ ವೈಶಿಷ್ಟ್ಯತೆ . ಮತ್ತು ವಿಜೇತರ ವಿವರ ಈ ಕೆಳಗಿನಂತಿದೆ.

ಶ್ರೀ ಸಂತೋಷ್ ಬಿದರಗಡ್ಡೆ

ವಿವರಣೆ : ಮೂಲತಃ ದಾವಣಗೆರೆ ಜಿಲ್ಲೆಯವರಾದ ಸಂತೋಷ್ ಬಿದರಗಡ್ಡೆಯವರು 14 ವರುಷಗಳಿಂದ ಬಾದಾಮಿಯಲ್ಲೂ ,ಪ್ರಸ್ತುತ ಹಾನಗಲ್ ತಾಲೂಕಿನ ಹೊಸಪೇಟೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು ತಮ್ಮ ಶಿಕ್ಷಕವೃತ್ತಿಯ ಸೇವೆಗೆ ಮೂರು ಬಾರಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಹಾಗೂ ಒಂದು ಬಾರಿ ಉತ್ತಮ ಉತ್ತಮ ಮಾರ್ಗದರ್ಶಕ ಪ್ರಶಸ್ತಿಯನ್ನು ಜೊತೆಗೆ ಸಾಹಿತ್ಯದ ಅಭಿರುಚಿ ಹೊಂದಿರುವ ಇವರು 2001 ರಿಂದ ಅನೇಕ ಕವನ , ಕವಿತೆ ,ಲೇಖನಗಳನ್ನು ಬರೆದಿರುತ್ತಾರೆ .2008 ರಿಂದ ತಮ್ಮನ್ನು ತಾವು ಸಾಹಿತ್ಯರಂಗದಲ್ಲಿ ತೊಡಗಿಕೊಂಡಿದ್ದು ನಾಡಿನ ಅನೇಕ ಸಾಹಿತ್ಯ ಸಂಘ ಸಂಸ್ಥೆಗಳಲ್ಲಿ ಸಾಹಿತ್ಯ ಸಂಘಟನಾಕಾರನಾಗಿ ಕಾರ್ಯ ನಿರ್ವಹಿಸಿ ಅನೇಕ ಗೌರವ ಸನ್ಮಾನಗಳನ್ನು ಪಡೆದಿರುತ್ತಾರೆ .ಹಾವೇರಿ ಜಿಲ್ಲೆಯ ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದಲ್ಲಿ ಜಿಲ್ಲಾ ಅಧ್ಯಕ್ಷರಾಗಿ 2017 ರಿಂದ ಇಲ್ಲಿಯವರೆಗೆ 60 ಕಾರ್ಯಕ್ರಮಗಳನ್ನು ನೀಡಿರುತ್ತಾರೆ .ಹಾಗೂ ಸ್ಕೌಟ್ ಮತ್ತು ಗೈಡ್ಸ್ ನಲ್ಲಿಯು ಉತ್ಸುಕರಾದ ಇವರು 06 ತಿಂಗಳಿನಿಂದ ಸ್ಕೌಟರ್ ಆಗಿಯೂ ಮುನ್ನಡೆಯುತ್ತಿದ್ದಾರೆ .

ಶ್ರೀಮತಿ ಸುಲಕ್ಷಣ ಬಸವರಾಜ್ ಶಿವಪುರ್

ವಿವರಣೆ : ಶ್ರೀಮತಿ ಸುಲಕ್ಷಣ ಬಸವರಾಜ್ ಶಿವಪುರ್ ,ರಾಮನಗರದ ಹೆಲ್ತ್ ಅಂಡ್ ಪಿ.ಡಬ್ಲ್ಯೂ ಆಫೀಸ್ ನಲ್ಲಿ ಡಿಸ್ಟ್ರಿಕ್ ಪ್ರೋಗ್ರಾಮ್ ಮ್ಯಾನೇಜರ್ ಆಗಿ ಕಾರ್ಯನಿರ್ವಾಹೊಸುತ್ತಿದ್ದಾರೆ .ತಮ್ಮ ವೃತ್ತಿ ಬದುಕಿನಲ್ಲಿ ಸ್ಟೇಟ್ ಮಿಶನ್ ಡೈರೆಕ್ಟರ್ ಇವರಿಂದ ಫೆಲೋಶಿಪ್ ಅವಾರ್ಡ್ ಮತ್ತು ಬಾಲ ವಿಕಾಸ ಅಕಾಡೆಮಿ ಧಾರವಾಡ ಇವರಿಂದ ಸಹ ಫೆಲೋಶಿಪ್ ನ್ನು ಪಡೆದಿರುತ್ತಾರೆ ಹಾಗೂ ಅನೇಕ ವರ್ಕ್ ಶಾಪ್ಗಳಲ್ಲಿ ಭಾಗಿಯಾಗಿರುವ ಇವರು ಆಹಾರ/ತಿಂಡಿ ತಿನಿಸುಗಳ ಬಗ್ಗೆ ಮತ್ತು ಅವುಗಳ ಪೌಷ್ಟಿಕಾಂಶಗಳ ಸಂಪೂರ್ಣ ರೀಸರ್ಚ್ ಮಾಡಿರುವ ಇವರ ಕಾರ್ಯವನ್ನು ಬಾಲವಿಕಾಸ ಅಕಾಡೆಮಿ ಮೆಚ್ಚಿ ಗೌರವ ಪುರಸ್ಕಾರವನ್ನು ಮಾಡಿದೆ .ಮಾತ್ರವಲ್ಲದೆ ಕನ್ನಡ ಸಾಹಿತ್ಯದಲ್ಲಿ ಅಂತರಂಗದ ಅಲೆಗಳು ಬ ಕವನಸಂಕಲನ ಪ್ರಕಟಿಸಿದ್ದಾರೆ ಮತ್ತು ಹಿಂದಿ ಸಾಹಿತ್ಯದಲ್ಲಿ ಸಹಾನಾತ್ ಮೇ ಸೀಮಾ ಪಾರ್ಕರ್ ಎಂಬ ಕಾದಂಬರಿಯನ್ನು ಬರೆದು ನಗದು ಬಹುಮಾನವನ್ನು ಸಹ ಪಡೆದಿರುತ್ತಾರೆ ಜೊತೆಗೆ 1000 ಹಿಂದಿ ಶಾಯರಿಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ

Leave a Reply

Your email address will not be published. Required fields are marked *