ಆಧಾರ್ ನೋಂದಣಿ, ತಿದ್ದುಪಡಿಗೆ ನೂಕುನುಗ್ಗಲು: ದಿನಕ್ಕೆ 20 ಜನರ ನೋಂದಣಿ

ಸರ್ಕಾರದ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆದಾರ್ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಆಧಾರ್ ಕಾರ್ಡ್ ಪಡೆದಿದ್ದರೂ ಸಹ ಕೆಲವೊಮ್ಮೆ ಹೆಸರು, ವಿಳಾಸ ಅಥವಾ ಇನ್ಯಾವುದೋ ಮಾಹಿತಿ ತಪ್ಪಾಗಿ ನಮೂದಾಗಿರುತ್ತದೆ. ಇಂತಹ ಸಮಯದಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳುವುದು ಬಹಳ ಮುಖ್ಯ. ಆದರೆ, ನರೇಗಲ್ಲ ಪ.ಪಂ ವ್ಯಾಪ್ತಿಯಲ್ಲಿನ ಜನರಿಗೆ ಆಧಾರ ತಿದ್ದುಪಡಿ ದೊಡ್ಡ ತಲೆನೋವಾಗಿದೆ. ಉಪ ತಹಸೀಲ್ದಾರ್ ಕಚೇರಿಯಲ್ಲಿನ ಆಧಾರ್ ನೋಂದಣಿ ಕೇಂದ್ರ ಸ್ಥಗೀತವಾಗಿ ಮೂರು ತಿಂಗಳು ಕಳೆದಿದ್ದು, ಕಳೆದೊಂದು ತಿಂಗಳಿನಿಂದ ಅಂಚೆ ಕಚೇರಿಯಲ್ಲಿ ವಾರದ ಎರಡು ದಿನ ಸೋಮವಾರ ಮತ್ತು ಗುರುವಾರ ಮಾತ್ರ ನೋಂದಣಿ ಮಾಡಲಾಗುತ್ತಿದೆ.

ಆಧಾರ್ ನೋಂದಣಿ, ತಿದ್ದುಪಡಿಗಾಗಿ ಜನರು ನರೇಗಲ್ಲನ ಅಂಚೆ ಕಚೇರಿಯ ಮುಂದೆ ಸೋಮವಾರ ಮತ್ತು ಗುರುವಾರ ಬೆಳಗ್ಗೆಯಿಂದ ಸಾಲಿನಲ್ಲಿ ನಿಂತರೂ ಒಂದು ದಿನಕ್ಕೆ 20 ಜನರ ನೋಂದಣಿ, ತಿದ್ದುಪಡಿಯಷ್ಟೇ ಮಾಡುವುದರಿಂದ ಜನರು ಕಚೇರಿಯ ಮುಂದೆ ಕಾಯ್ದು ಕಾಯ್ದು ಸುಸ್ತಾಗುವುದು ಅನಿವಾರ್ಯವಾಗಿದೆ.

ಈ ಹಿಂದೆ ಆಧಾರ್ ನೋಂದಣಿ ಮಾಡಿಸುವ ಸಂದರ್ಭದಲ್ಲಿ ಹತ್ತು ಹಲವು ತಪ್ಪು ಮಾಹಿತಿಗಳು ಸೇರ್ಪಡೆಯಾಗಿವೆ. ಹೆಸರು, ವಿಳಾಸ, ವಯಸ್ಸು, ಮೊಬೈಲ್ ಸಂಖ್ಯೆ ಸೇರಿದಂತೆ ಇತರೆ ಮಾಹಿತಿಗಳು ತಪ್ಪಾಗಿ ನಮೂದಾಗಿವೆ ಹಾಗೂ ಮದುವೆಯಾದ ಮಹಿಳೆಯರ ಆಧಾರ್‍ನಲ್ಲಿ ತಂದೆಯ ಹೆಸರು, ತವರು ಮನೆ ವಿಳಾಸವಿದೆ. ಅದನ್ನು ಬದಲಾಯಿಸುವುದು ಸೇರಿದಂತೆ ಇತರೆ ತಿದ್ದುಪಡಿಗಳಿವೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆಧಾರ್ ನೋಂದಣಿಯಾಗಿದ್ದು, ಅವರ ಆಧಾರ್ ಕಾರ್ಡನಲ್ಲಿ ಇಂಗ್ಲಿಷ್‍ನಲ್ಲಿ ಮಾತ್ರ ಹೆಸರಿದೆ. ಆದರೆ, ಆರ್‍ಟಿಇ ಹಾಗೂ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹೆಸರಿರಬೇಕು. ಇಲ್ಲದಿದ್ದರೆ ಹೆಸರು ಸೇರ್ಪಡೆಯಾಗುತ್ತಿಲ್ಲ.

ಗೊಂದಲದಲ್ಲಿ ಪಾಲಕರು:- ಆರ್‍ಟಿಇಯಲ್ಲಿ ಅರ್ಜಿ ಸಲ್ಲಿಸಲು ಮ.20 ರಿಂದ ಪ್ರಾರಂಭವಾಗಲಿದ್ದು, ಆಧಾರ್ ಆಧಾರ್ ಕಾರ್ಡ್‍ನಲ್ಲಿ ಕನ್ನಡದಲ್ಲಿ ಹೆಸರು ತಿದ್ದುಪಡಿಗೆ ಮುಂದಾಗುತ್ತಿದ್ದಾರೆ. ಆರದೆ, ಆದಾರ್ ತಿದ್ದುಪಡಿ ಸಮಯದಲ್ಲಿ ಮಕ್ಕಳ ಬೆರಳಿನ ಗುರುತು(ಬಯೋ ಮೇಟ್ರಿಕ್) ಹೊಂದಾಣಿಕೆಯಾಗುತ್ತಿಲ್ಲ. ಹೊಂದಾಣಿಕೆಯಾದರೂ ಸಹ ಹೊಸದಾಗಿ ಆಧಾರ್ ಕಾರ್ಡ ಬರುತಿಲ್ಲ. ಆನ್ ಲೈನ್‍ನಲ್ಲಿ ಪರೀಕ್ಷಿಸಿದರೆ, ನಿಮ್ಮ ತಿದ್ದುಪಡಿ ರಿಜೇಕ್ಟ್ ಆಗಿದೆ ಎಂದು ತೋರಿಸುತ್ತಿದೆ. ಆದಾರ್ ಕೇಂದ್ರದ ಅಧಿಕಾರಿಗಳನ್ನು ಕೇಳಿದರೆ. ಆಧಾರ್ ಟೂಲ್ ಪ್ರೀ ನಂ 1947 ಗೇ ಕರೆ ಮಾಡಿ ಅಥವಾ ಮತ್ತೊಮ್ಮೆ ತಿದ್ದುಪಡಿ ಮಾಡಿಸಿಕೊಳ್ಳಿ ಎಂದು ಉತ್ತರಿಸುತ್ತಾರೆ. 1947ಗೆ ಕರೆ ಮಾಡಿದರೆ ನೀಡು ಡಯಲ್ ಮಾಡಿದ ಸಂಖ್ಯೆ ಅಸ್ಥಿತ್ವದಲಿಲ್ಲ ಎಂದು ಉತ್ತರಿಸುತ್ತಿದೆ. ಮತ್ತೊಮ್ಮೆ ತಿದ್ದುಪಡಿಗೆ ಮತ್ತೆ ಸಾಲು ನಿಲ್ಲುವ ಪರಿಸ್ಥಿತಿ. ಇದರಿಂದಾಗಿ ಮಕ್ಕಳ ಹೆಸರನ್ನು ಪಡಿತರ ಚೀಟಿ ಹಾಗೂ ಆರ್‍ಟಿಇನಲ್ಲಿ ನೋಂದಾಯಿಸಲು ಸಾಧ್ಯವಾಗುತಿಲ್ಲ ಎಂಬ ಅಳಲು ಪಾಲಕರದ್ದು.

ಈ ಹಿಂದೆ ನರೇಗಲ್ಲನ ಉಪ ತಹಸೀಲ್ದಾರ್ ಕಚೇರಿಯಲ್ಲಿನ ಆಧಾರ್ ನೋಂದಣಿ ಕೇಂದ್ರದಲ್ಲಿ ನರೇಗಲ್ಲ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ ಸೇರಿದಂತೆ 37 ಗ್ರಾಮಗಳ ಜನರು ಆಧಾರ್ ತಿದ್ದುಪಡಿಗಾಗಿ ಬರುತ್ತಿದ್ದರು. ನಂತರ ಗ್ರಾ.ಪಂ ಕಚೇರಿಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿತ್ತು. ಆದರೆ, ಗ್ರಾ.ಪಂ ಆಧಾರ್ ನೋಂದಣಿ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಆಧಾರ್ ನೋಂದಣಿ, ತಿದ್ದುಪಡಿ ದೊಡ್ಡ ತಲೆ ನೊವಾಗಿ ಪರಿಣಮಿಸಿದೆ.

ನರೇಗಲ್ಲನ ಉಪ ತಹಸೀಲ್ದಾರ್ ಕಚೇರಿಯ ಆಧಾರ್ ನೋಂದಣಿ ಕೇಂದ್ರ ತಾಂತ್ರಿಕ ಕಾರಣಗಳಿಂದ ಬಂದ್ ಆಗಿತ್ತು. ಕಳೆದ ಎರಡು ದಿನಗಳ ಹಿಂದೆ ಸರಿ ಮಾಡಲಾಗಿತ್ತಾದರೂ, ಮತ್ತೆ ಪ್ರಿಂಟರ್‍ನ ಯಂತ್ರ ಕೆಟ್ಟಿದ್ದು, ಆಧಾರ್ ಪ್ರಾಧಿಕಾರದಿಂದ ದುರಸ್ಥಿಯಾಗಬೇಕು. ದುರಸ್ಥಿಗಾಗಿ ಈಗಾಗಲೇ ಮೇಲಾಧಿಕಾರಿಗಳ ಗಮಕ್ಕೆ ತಂದಿದ್ದು. ಆದಷ್ಟು ಬೇಗನೇ ಆಧಾರ್ ನೋಂದಣಿ ಪ್ರಾರಂಭಿಸಲಾಗುವುದು. ಗುರುಸಿದ್ದಯ್ಯ ಹಿರೇಮಠ ತಹಸೀಲ್ದಾರ್‍ರು ಗಜೇಂದ್ರಗಡ.

ಆಧಾರ್‍ನಲ್ಲಿ ನನ್ನ ಹೆಸರು ತಪ್ಪಾಗಿ ನಮೂದಾಗಿದೆ. ಅದನ್ನು ತಿದ್ದುಪಡಿಮಾಡಲು ಗುರುವಾರ ಬೆಳಗ್ಗೆಯೇ ಅಂಚೆ ಕಚೇರಿಗೆ ಬಂದಿದ್ದೆ. ಆದರೆ, ಕೇವಲ 20 ಜನರಿಗೆ ಮಾತ್ರ ಅವಕಾಶವಿದ್ದು, ಮತ್ತೆ ಸೋಮವಾರ ಬರುವಂತೆ ತಿಳಿಸಿದ್ದಾರೆ. ಆದ್ದರಿಂದ ಈ ಹಿಂದೆ ಖಾಸಗಿಯವರಿಗೂ ಆಧಾರ್ ನೋಂದಣಿಗೆ ಅವಕಾಶವನ್ನು ನೀಡಿದಲ್ಲಿ, ತಿದ್ದುಪಡಿ, ನೋಂದಣಿ ಸಮಸ್ಯೆ ಬಗೆಹರಿಲಿದೆ. ರಾಮಣ್ಣ ಹಾಳಕೇರಿ ಹಿರಿಯ ನಾಗರಿಕರು ನರೇಗಲ್ಲ

Leave a Reply

Your email address will not be published. Required fields are marked *