ಸರ್ಕಾರಿ ಶಾಲೆಯಲ್ಲಿ ಒಬ್ಬರೇ ಶಿಕ್ಷಕರು

ಕೆಂಭಾವಿ: ಜಿಲ್ಲೆಯ ಬಹತೇಕ ಇರುವ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿದ್ದರು ಕಲಿಸುವ ಶಿಕ್ಷಕರಿಲ್ಲದಿರುವದು ಜಿಲ್ಲೆಗೆ ಒಂದು ಅಪಮಾನದ ಕಿರ್ತೀ ಎನ್ನುವಂತಾಗಿದೆ ದಿನೇ ದಿನೇ ಜಿಲ್ಲೆಯಲ್ಲಿ ಶಿಕ್ಷಣದಿಂದ ಅನಕ್ಷರತೆಯ ಕಡೆಗೆ ಜಿಲ್ಲೆಯ ವಿಧ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಶಿಕ್ಷಕರೆ ಇಲ್ಲದ ಪಾಠಶಾಲೆಯಲ್ಲಿ ವಿಧ್ಯಾರ್ಥಿಗಳು ಕಲಿಕೆಯ ಗುಣಮಟ್ಟ ಸುದಾರಿಸುವದು ಹೇಗೆ ಎಂಬ ಬೀತಿಯಲ್ಲಿ ಹನವುಳ್ಳ ಪಾಲಕರು ಖಾಸಗಿ ಶಾಲೆಗಳತ್ತ ಮುಖಮಾಡಿದ್ದಾರೆ ಇದಕ್ಕೆ ತಾಜಾ ಉದಾಹರಣೆ ಎಂಬತೆ ಸುರಪುರ ತಾಲೂಕಿನ ಗೌಡಗೇರಾ ಗ್ರಾಮದಲ್ಲಿ ಸುಮಾರು 540 ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಒಬ್ಬ ಶಿಕ್ಷಕರು ಮಾತ್ರ ಇದ್ದು, ಇದು ಕಲಿಕೆಯ ಮೇಲೆ ಪ್ರಭಾವ ಬೀರಿದ್ದು ಸುಳ್ಳಲ್ಲ .
ಈ ಶಾಲೆಯಲ್ಲಿ 1 ರಿಂದ 8 ನೇ ತರಗತಿಯವರಗೆ ಇದ್ದು, 1ನೇ ತರಗತಿಯಲ್ಲಿ 20ವಿದ್ಯಾರ್ಥಿಗಳಿದ್ದು, ಇನ್ನೂ ಪ್ರವೇಶಗಳು ನಡೆದಿವೆ. 2ನೇ ತರಗತಿಗೆ 76 ಮಕ್ಕಳು, 3ನೇ ತರಗತಿಗೆ 58 ಮತ್ತು 4ನೇ ತರಗತಿಗೆ 85 ಹಾಗೂ 5ನೇ ತರಗತಿಗೆ 75 ಮತ್ತು 6ನೇ ತರಗತಿಯಲ್ಲಿ 80 ಮತ್ತು 7ನೇ ತರಗತಿಗೆ 68 ಹಾಗೂ 8ನೇ ತರಗತಿಗೆ 78 ಒಟ್ಟು ಸೇರಿ 540 ವಿದ್ಯಾರ್ಥಿಗಳಿದ್ದಾರೆ.
ಪ್ರಾಥಮಿಕ ಶಿಕ್ಷಣದ ಹಂತವೇ ಮಕ್ಕಳ ಬುನಾದಿಗೆ ಅಡಿಪಾಯವಾಗುಬೇಕು ಆದರೆ ಮಕ್ಕಳ ಕಲಿಕೆಯ ಹಂತದ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಯ ಮೇಲೆ ಹೊಡೆತ ಬೀಳುವ ಸಂಭವವಿದೆ. ಪ್ರಾಥಮಿಕ ಶಿಕ್ಷಣ ಮಕ್ಕಳ ಪಾಲಿಗೆ ಮಹತ್ವದಾಗಿದ್ದು, ಆದರೆ ಇದನ್ನೇ ಶಿಕ್ಷಣ ಇಲಾಖೆ ಕಡೆಗಣನೆ ಮಾಡುತ್ತಿರುವುದು ತುಂಬಾ ಅಘಾತಕಾರಿ ಸಂಗತಿಯಾಗಿದೆ.
ಮಕ್ಕಳ ಸಂಖ್ಯಾಗನುಗುಣವಾಗಿ ಒಟ್ಟು 13 ಶಿಕ್ಷಕರು ಇರಬೇಕಾದ ಶಾಲೆಯಲ್ಲಿ ಕೇವಲ ಒಬ್ಬ ಶಿಕ್ಷಕರು ಮಾತ್ರ ಇದ್ದಾರೆ. ಹೀಗಾಗಿ ಮಕ್ಕಳಿಗೆ ಭೋಧನೆ ಮಾಡಲು ಆಗುತ್ತಿಲ್ಲ. ಕೇವಲ ಒಬ್ಬ ಶಿಕ್ಷಕರಿದ್ದು, 1 ನೇ ತರಗತಿ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಸಿಕೊಳ್ಳುವುದು ಯಾವಾಗ? ಮೇಲಾಧಿಕಾರಿಗಳ ಸಭೆ ಕರೆದಾಗ ಹಾeರಾಗುವುದು ಹೇಗೆ, 8ನೇ ತರಗತಿ ಕಲಿತ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರವನ್ನು ನೀಡುವುದು ಯಾವಾಗ? ಹಾಗೂ ವಿಧ್ಯಾರ್ಥಿಗಳಿಗೆ ಪಾಠ ಭೋಧನೆ ಮಾಡುವುದು ಯಾವಾಗ? ಹೀಗಾಗಿ ವಿದ್ಯಾರ್ಥಿಗಳಿಗೆ ಭೋಧನೆ ಮಾಡಲು ಆಗುತ್ತಿಲ್ಲ. ಹಾಗೂ ಅನಿರ್ವಾಯ ಸಂಧರ್ಭಗಳಲ್ಲಿ ಶಿಕ್ಷಕರು ರಜೆಯನ್ನು ಹಾಕಿದರೆ ಶಾಲೆಯ ವಿದ್ಯಾರ್ಥಿಗಳಿಗೆ ರಜೆಯನ್ನು ನೀಡಬೇಕಾಗುತ್ತದೆ. ಆದ್ದರಿಂದ ಶಾಲೆಯಲ್ಲಿ ಮಕ್ಕಳು ಸುಮ್ಮನೇ ಕುಳಿತುಕೊಂಡು ವಾಪಸ್ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾಲಕರ ಆಕ್ರೋಶಕ್ಕೆ ಎಡೆಮಾಡಿಕೊಡುತ್ತಿದೆ.
ಶಾಲೆಯಲ್ಲಿ ವಿಷಯವಾರು ಶಿಕ್ಷಕರು ಯಾರು ಇಲ್ಲದೇ ಇರುವುದರಿಂದ ವಿಜ್ಞಾನ, ಗಣಿತ ಹಿಂದಿ, ದೈಹಿಕಶಿಕ್ಷಣ, ಹಾಗೂ ಇಂಗ್ಲೀಷ್ ಅದರಲ್ಲಿಯೂ ಮಕ್ಕಳ ಪಾಲಿನ ಕಬ್ಬಿಣ ಕಡಲಾದ ವಿಜ್ಷಾನ ಮತ್ತು ಗಣಿತ ಶಿಕ್ಷಕರು ಇಲ್ಲವೇ ಇಲ್ಲ. ಈ ಸಮಸ್ಯೆ ಹೀಗೆ ಮುಂದೆವರಿದರೆ ಮುಂದಿನ ದಿನಮಾನಗಳಲ್ಲಿ ಗಂಭಿರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಶಿಕ್ಷಕರ ಕೊರತೆ ನೀಗಿಸುವಲ್ಲಿ ಶಿಕ್ಷಣ ಇಲಾಖೆ ವಿಳಂಬ ಮಾಡಿದರೇ ಪಾಲಕರು ಮತ್ತು ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಇದಾಗುವ ಮುನ್ನವೇ ಶಿಕ್ಷಕರನ್ನು ನೇಮಿಸಿ ಮಕ್ಕಳ ಕಲಿಕೆಗೆ ಅವಕಾಶ ಮಾಡುವುದು ತುಂಬಾ ಅಗತ್ಯವಿದೆ.
“ ಈಗಾಗಲೇ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ವಿಷಯವಾರು ಶಿಕ್ಷಕರನ್ನು ಒದಗಿಸಬೇಕೆಂದು ವರಧಿ ತಿಳಿಸಿದ ಹಿನ್ನಲೆಯಲ್ಲಿ ನಾಲ್ಕು ಜನ ನಿಯೋಜತ ಶಿಕ್ಷಕರನ್ನು ನೇಮಿಸಿದ್ದು ಅದರಲ್ಲಿ ಕೇವಲ ಒಬ್ಬರು ಕೆಲಸಕ್ಕೆ ಹಾಜರಾಗಿದ್ದಾರೆ ಇನ್ನೂಳಿದ್ದ ಮೂರ ಜನ ಶಿಕ್ಷಕರು ಬರಬೇಕು “
ಡಿ. ಬಿ. ಜೋಷಿ
ಶಾಲಾ ಮುಖ್ಯಗುರುಗಳು ಗೌಡಗೇರಾ

Leave a Reply

Your email address will not be published. Required fields are marked *