ವ್ಯಾಪರಸ್ಥರು ಇಲ್ಲದೆ ಹಾಳು ಬಿದ್ದ ವಾಣಿಜ್ಯ ಮಳಿಗೆಗಳು

ಕೆಂಭಾವಿ: ಪಟ್ಟಣದ ಹಿಲ್‍ಟಾಪ್ ರಸ್ತೆ ಪ್ರಥಮ ದರ್ಜೆ ಕಾಲೇಜು ಮುಂಬದಿಯಲ್ಲಿ ಇರುವ ವಾಣಿಜ್ಯ ಮಳಿಗೆಯ ಕೋಣೆಗಳು ಉದ್ಘಾಟನೆಗೊಂಡು 6 ವರ್ಷ ಕಳೆದರೂ ಯಾರೂ ಬಾಡಿಗೆಗೆ ಬಾರದೇ ಹಾಳು ಬಿದ್ದಿವೆ.
ಕೆಂಭಾವಿಯಲ್ಲಿ ಸ್ವರ್ಣ ಜಯಂತಿ ಗ್ರಾಮ ಸ್ವರಾಜ ಯೋಜನೆಯಡಿಯಲ್ಲಿ 2009-10ನೇ ಸಾಲಿನ ಗ್ರಾಮ ಪಂಚಾಯತ್ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. ಇವುಗಳನ್ನು ಅಂದಿನ ಸಣ್ಣ ಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತವಾರಿ ಸಚಿವರಾಗಿದ್ದ, ನರಸಿಂಹನಾಯಕ ( ರಾಜುಗೌಡ) ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ಅವರು 25 ಜನೇವರಿ 2013 ರಂದು ಈ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿದ್ದರು. ಈ ಅವಧಿಯಲ್ಲಿ ಗ್ರಾ. ಪಂ ಅಧ್ಯಕ್ಷರಾಗಿ ಪದ್ಮಾವತಿ ಬಿ ದೇವರಮನಿ ಸೇವೆ ಸಲ್ಲಿಸುತ್ತಿದ್ದರು.
ಈ ಮಳಿಗೆಯು ಪಟ್ಟಣದ ಹೊರವಲಯದಲ್ಲಿ ಜನಸಂದಣಿ ಕಡಿಮೆ ಇರುವ ಪ್ರದೇಶದಲ್ಲಿದ್ದು, ವ್ಯಾಪಾರಸ್ಥರು ಬಾಡಿಗೆ ತಗೆದುಕೊಳ್ಳಲು ಹಿಂಜರಿಯುತ್ತಿದ್ದು, ಈ ಮಳಿಗೆಯ ಎರಡು ಕೋಣೆಗಳನ್ನು ಬಾಡಿಗೆ ಪಡೆಯದೇ ಸಾಮಾಗ್ರಿಗಳನ್ನು ಹಾಗೂ ಭತ್ತದ ಚೀಲಗಳನ್ನು ಹಾಕಲು ಬಳಸಿಕೊಳ್ಳಹತ್ತಿದ್ದಾರೆ. ಹಾಗೂ ಮೇಕೆಗಳ ಕೊಠಡಿಯಾಗಿ ಬಳಕೆ ಹಾಗಹತ್ತಿವೆ. ಇನ್ನೂ ಮುಖ್ಯರಸ್ತೆಯಲ್ಲಿ ಇವುಗಳನ್ನು ನಿರ್ಮಾಣ ಮಾಡಬೇಕಾಗಿತು ಆದರೆ ಸಾಕಷ್ಟು ಗೋಮಾಳಹೊಂದಿದ್ದರು ಅದು ಮಾಯವಾಗಿ ಯಾರು ಜನ ಸಂದಣಿಯಿಲ್ಲದ ಪ್ರದೇಶದಲ್ಲಿ ಇವುಗಳನ್ನು ಕಟ್ಟಿಸಿದ್ದಾರೆ ಇವಗಳನ್ನು ಬಾಡಿಗೆ ಪಡೆಯಲು ಮುಂದೆ ಬರುತ್ತಿಲ್ಲ .
ಈ ಬಗ್ಗೆ ಪುರಸಭೆ ಆಡಳಿತ ಗಮನ ಹರಿಸಿದೇ ಹಾಗೇ ಬೀಗಗಳನ್ನು ಸಹ ಹಾಕದೇ ಬಿಟ್ಟಿರುವುದು ಅವರ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ. ಹೀಗೆಯೇ ಇವು ಖಾಲಿ ಉಳಿದರೆ ಮುಂದಿನ ದಿನಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಅಸ್ಪದ ನೀಡುವ ತಾಣವಾಗಬಹುದು ಎಂದು ಇಲ್ಲಿನ ಸಾರ್ವಜನಿಕರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
“ ಪಟ್ಟಣದಲ್ಲಿ ಜನಸಂದಣಿ ಇಲ್ಲದ ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದರಿಂದ ಬಾಡಿಗೆಯನ್ನು ತಗೆದುಕೊಳ್ಳುಲು ಹಿಂಜರಿಯುತ್ತಿದ್ದಾರೆ.”
– ಕಾಂತಗೌಡ ಪಾಟೀಲ್, ವ್ಯಾಪಾರಸ್ಥರು

Leave a Reply

Your email address will not be published. Required fields are marked *