ಕೊಪ್ಪಳದ ಅಶೋಕ ಸರ್ಕಲ್ ನಲ್ಲಿ ಸಂಸದ ಸಂಗಣ್ಣ ಕರಡಿ ಅವರ ನೇತೃತ್ವದಲ್ಲಿ ಪ್ರತಿಭಟನೆ

ರಾಜ್ಯ ದ ಮುಖ್ಯ ಮಂತ್ರಿ ಗಳಾದ ಕುಮಾರಸ್ವಾಮಿ ಯವರು , ಪುಣ್ಯ ಭೂಮಿ ಹಾಸನದಲ್ಲಿ ಅಧಿಕಾರಕ್ಕಾಗಿ
“ದಂಗೆ ಏಳಿ” ಎಂಬ ಹಿಂಸೆಯ ಪ್ರಚೋದನೆದಾಯಕ ಹೇಳಿಕೆ ನೀಡಿ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಚಾರವೇಸಗಿದ್ದಾರೆ ಹಾಗೂ ವಿರೋಧ ಪಕ್ಷದ ನಾಯಕರು ಮಾಜಿ ಮುಖ್ಯಮಂತ್ರಿ ಗಳಾದ ಹಾಗೂ ರಾಜ್ಯಾಧ್ಯಕ್ಷರಾದ
ಶ್ರೀ ಬಿ.ಎಸ್. ಯಡಿಯೂರಪ್ಪ ನವರ ಮನೆಯ ಮುಂದೆ ಗೂಂಡಾವರ್ತನೆ ತೋರಿದ ಕಾಂಗ್ರೆಸ್ ನ ಪದಾಧಿಕಾರಿಗಳು ರಾಜ್ಯದ ಜನರಿಗೆ ಅವಮಾನಿಸಿದ್ದಾರೆ .
ಇವೇಲ್ಲವನ್ನ ವಿರೋಧಿಸಿ, ರಾಜ್ಯ ದ ಮುಖ್ಯಮಂತ್ರಿ ಮತ್ತು ರಾಜ್ಯದ ಭಂಡ ಸರ್ಕಾರದ ವಿರುದ್ಧ ಕೊಪ್ಪಳದ ಅಶೋಕ ಸರ್ಕಲ್ ನಲ್ಲಿ ಸಂಸದ ಸಂಗಣ್ಣ ಕರಡಿ ಅವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಜಿಲ್ಲಾಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ, ಅಮರೇಶ ಕರಡಿ, ರಾಜು ಬಾಕಳೆ,ಚಂದ್ರಶೇಖರ ಹಲಗೇರಿ,ಸೇರಿದಂತೆ ಇತರರು ಇದ್ದರು.
ವರದಿ-ಕನಸಿನ ಭಾರತ, ಕೊಪ್ಪಳ

Leave a Reply

Your email address will not be published. Required fields are marked *