ಏಷ್ಯಾದಲ್ಲಿ ಬೆಂಗಳೂರು ಅತಿ ಅಗ್ಗದ ನಗರವಾದರೆ, ಸಿಂಗಪುರ್ ದುಬಾರಿ ನಗರಿ

ಬೆಂಗಳೂರು, ಮಾ.24-ಏಷ್ಯಾ ಖಂಡದಲ್ಲಿ ಉದ್ಯಾನನಗರಿ ಬೆಂಗಳೂರು ಅಗ್ಗದ ನಗರಗಳಲ್ಲೊಂದು ಎಂದು ಗುರುತಿಸಿಕೊಂಡಿದ್ದು, ಸಿಂಗಪುರ್ ಅತ್ಯಂತ ದುಬಾರಿ ನಗರವಾಗಿ ಪರಿಗಣಿಸಲ್ಪಟ್ಟಿದೆ. ಜೀವನ ವೆಚ್ಚಗಳ ಆಧಾರದ ಮೇಲೆ 133 ದೇಶಗಳಲ್ಲಿನ ನಗರಗಳಲ್ಲಿ ಬೆಂಗಳೂರು 129ನೇ ಸ್ಥಾನ ಪಡೆದಿದೆ. ವಿಶ್ವದ ಅತ್ಯಂತ ದುಬಾರಿ ನಗರ ಎಂದೇ ಗುರುತಿಸಲ್ಪಟ್ಟಿರುವ ಸಿಂಗಪುರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಎಕೊನಾಮಿಸ್ಟ್ ಇಂಟಲಿಜೆನ್ಸ್ ಯೂನಿಟ್‍ನ ವಲ್ರ್ಡ್‍ವೈಡ್ ಕಾಸ್ಟ್ ಆಫ್ ಲೀವಿಂಗ್ ಸರ್ವೆ-2018ರ ಪ್ರಕಾರ ಏಷ್ಯಾದ 10 ಅಗ್ಗದ ನಗರಗಳಲ್ಲಿ ಚೆನ್ನೈ(126), ನವದೆಹಲಿ(124) ಹಾಗೂ ಮುಂಬೈ (121) ಸ್ಥಾನಪಡೆದಿದೆ. ಸಮರ ಸಂತ್ರಸ್ತ ಸಿರಿಯಾದ ಡಮಾಸ್ಕಸ್, ವೆನಿಜುವೆಲಾದ ರಾಜಧಾನಿ ಕ್ಯಾರಾಕಾಸ್, ಕಝಕ್‍ಸ್ತಾನ್‍ನ ಹಿಂದಿನ ರಾಜಧಾನಿ ಅಲ್‍ಮಟಿ, ನೈಜೀರಿಯಾದ ಲಾಗೋಸ್ ನಗರಗಳೂ ಕೂಡ ಅಗ್ಗದ ನಗರಗಳ ಸ್ಥಾನದಲ್ಲಿವೆ.

Leave a Reply

Your email address will not be published. Required fields are marked *