ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಮಾರ್ಟಿನ್ ಲೂಥರ್ ಶಾಲೆಯ ಯಶೋಗಾಥೆ


By Editor
04:06:14 AM / Sun, Jan 21st, 2018
ಬೆಂಗಳೂರು:

ಹನುಮಂತನಗರ, ಗಿರಿನಗರ ಮಧ್ಯೆ ಇರುವ ನಾಗೇಂದ್ರ ಬ್ಲಾಕ್‌ನಲ್ಲಿ ೧೯೯೨ರಲ್ಲಿ ಚಿಕ್ಕದೊಂದು ಕಟ್ಟಡದ ನಾಲ್ಕೇ ನಾಲ್ಕು ಕೊಠಡಿಗಳಲ್ಲಿ ೪೦ ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಮಾರ್ಟಿನ್‌ಲೂಥರ್ ಇಂಗ್ಲಿಷ್ ಶಾಲೆ ಹಾಗೂ ಪಬ್ಲಿಕ್ ಶಾಲೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಶಾಲೆಗೆ ಸುಸಜ್ಜಿತವಾದ ಎರಡು ಭವ್ಯ ಕಟ್ಟಡಗಳಿವೆ. ೧೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶಿಸ್ತು, ಸಮಯಪಾಲನೆ, ಓದಿನಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ವಿನೂತನ ಕ್ರಮದಿಂದಾಗಿ ಶಾಲೆ ಪ್ರತಿ ವರ್ಷ ಉತ್ತಮ ಫಲಿತಾಂಶವನ್ನೂ ಗಳಿಸುತ್ತಿದೆ. ಎಸ್.ಎಸ್.ಎಲ್.ಸಿ. ಆರಂಭಗೊಂಡ ಮೊದಲ ವರ್ಷ ೯೮-೯೯ರಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ ಶಾಲೆ, ಆನಂತರದ ವರ್ಷಗಳಲ್ಲೂ ತನ್ನ ದಾಖಲೆಯ ಓಟ ಮುಂದುವರಿಸಿದೆ.

ಅನುಭವದಿಂದ ಕಲಿಕೆ ಸಾಧ್ಯ ಎಂಬ ಧ್ಯೇಯವಾಕ್ಯದೊಂದಿಗೆ ಜಾತಿ, ಮತ, ಧರ್ಮದ ಭೇದವಿಲ್ಲದೆ, ಮೇಲು ಕೀಳೆಂಬ ತಾರತಮ್ಯವಿಲ್ಲದೆ, ಬಡವ - ಬಲ್ಲಿದರೆಲ್ಲರಿಗೂ ಸಮಾನ ಶಿಕ್ಷಣ ನೀಡುವ ಗುರಿಯಿಂದ ಕಾರ್ಯನಿರ್ವಹಿಸುತ್ತಿರುವ ಗಿರಿನಗರ ಎಜುಕೇಷನಲ್ ಟ್ರಸ್ಟ್, ತನ್ನ ಮಾರ್ಟಿನ್ ಲೂಥರ್ ಶಾಲೆಯಲ್ಲಿ ಸ್ಟೇಟ್ ಸಿಲಬಸ್ ಮತ್ತು ಕೇಂದ್ರೀಯ ಶಿಕ್ಷಣ ಪದ್ಧತಿಯ ಐ.ಸಿ.ಎಸ್.ಸಿ. ಮಾನ್ಯತೆ ಪಡೆದ ಪಬ್ಲಿಕ್ ಶಾಲೆಗಳೆರನ್ನೂ ಯಶಸ್ವಿಯಾಗಿ ನಡೆಸುತ್ತಿದೆ.

ಸ್ಕೌಟ್ಸ್, ಗೈಡ್ಸ್ ಹಾಗೂ ಶಾಲೆಯ ಬ್ಯಾಂಡ್‌ಸೆಟ್ ತಂಡಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ಹೆಸರಿದೆ. ವಿವಿಧ ಉತ್ಸವಗಳಲ್ಲಿ ಪಾಲ್ಗೊಂಡ ಮಾರ್ಟಿನ್‌ಲೂಥರ್ ಶಾಲೆಯ ಮಕ್ಕಳು ಹಲವಾರು ಪ್ರಶಸ್ತಿ ಪಾರಿತೋಷಕ ಬಾಚಿಕೊಂಡಿದ್ದಾರೆ. ೨೦೦೨ರಲ್ಲಿ ಛತ್ತೀಸಘಡದಲ್ಲಿ ನಡೆದ ಜಾಂಬೂರಿಯಲ್ಲೂ ಈ ಶಾಲೆಯ ಬ್ಯಾಂಡ್‌ಸೆಟ್ ತಂಡ ಪಾಲ್ಗೊಂಡು ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿದೆ.

Leave A Comment

ಟಾಪ್ ಸುದ್ಧಿಗಳು

ಬೆಂಗಳೂರು:

ಟಾಪ್ ಸುದ್ಧಿಗಳು

‘ನಮ್ಮ ಮೆಟ್ರೊ’ದಿಂದಲೇ ಫೀಡರ್‌ ಬಸ್‌ ಸೇವೆಗೆ ಚಿಂತನೆ

By Editor
04:06:14 AM / Sun, Jan 21st, 2018
ಬೆಂಗಳೂರು:

ಬೆಂಗಳೂರು:

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಮಾರ್ಟಿನ್ ಲೂಥರ್ ಶಾಲೆ

By Editor
04:06:14 AM / Sun, Jan 21st, 2018
ದಾವೋ (ಫಿಲಿಪ್ಪೀನ್ಸ್‌):

ದಾವೋ (ಫಿಲಿಪ್ಪೀನ್ಸ್‌):

ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ

By Editor
04:06:14 AM / Sun, Jan 21st, 2018
ಬೆಂಗಳೂರು:

ಬೆಂಗಳೂರು:

ವಿಮಾನ ಪ್ರಯಾಣ ದರ ಇಳಿಕೆ

By Editor
04:06:14 AM / Sun, Jan 21st, 2018
ನವದೆಹಲಿ:

ನವದೆಹಲಿ:

ಕೇಂದ್ರ ಬಜೆಟ್ 2018:

By Editor
04:06:14 AM / Sun, Jan 21st, 2018
ಮುಂಬೈ:

ನವದೆಹಲಿ:

ಯಶಸ್ವಿ ವರ್ಷಕ್ಕೆ ಜಯದ ವಿದಾಯ

By Editor
04:06:14 AM / Sun, Jan 21st, 2018

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
14:36:32 PM / Thu, Dec 28th, 2017
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
14:36:32 PM / Thu, Dec 28th, 2017
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
14:36:32 PM / Thu, Dec 28th, 2017
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
14:36:32 PM / Thu, Dec 28th, 2017
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
14:36:32 PM / Thu, Dec 28th, 2017
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
14:36:32 PM / Thu, Dec 28th, 2017