ನೀರು ಇಂಗಿಸಲು ‘ಇಂಗುಗುಂಡಿ’ ನಿರ್ಮಾಣ


By Editor
04:00:25 AM / Sun, Jan 21st, 2018
ಕಲಬುರ್ಗಿ: :

‘ಉದ್ಯೋಗ ಖಾತರಿ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಕಲಬುರ್ಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಅಂತರ್ಜಲಮಟ್ಟ ತೀವ್ರವಾಗಿ ಕುಸಿದಿದೆ. ಹೀಗಾಗಿ ಅಂತರ್ಜಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೆರೆ ದಂಡೆಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ.

ಕೆರೆ ದಂಡೆಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ, ನೀರು ಇಂಗಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ತಾಲ್ಲೂಕು ಪಂಚಾಯಿತಿ ಯಶಸ್ವಿಯಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ತಾಲ್ಲೂಕಿನ ಭೀಮಳ್ಳಿ, ಭೂಪಾಲ ತೆಗನೂರ, ಡೊಂಗರಗಾಂವ್, ಹರಸೂರ, ಕವಲಗಾ (ಬಿ), ಮರಗುತ್ತಿ, ಮೇಳಕುಂದಾ (ಬಿ), ನಾಗೂರ, ಓಕಳಿ, ಪಟ್ಟಣ, ಸಣ್ಣೂರ, ತಾಜಸುಲ್ತಾನಪುರ ಹಾಗೂ ಹತಗುಂದ ಗ್ರಾಮಗಳ ಕೆರೆ ದಂಡೆಗಳಲ್ಲಿ ಇಂಗುಗುಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಈಗ ಆ ಗುಂಡಿಗಳೆಲ್ಲವೂ ಮಳೆ ನೀರಿನಿಂದ ಭರ್ತಿಯಾಗಿವೆ.

ಮಾರ್ಚ್‌ನಿಂದ ಮೇ ಅಂತ್ಯದವರೆಗೆ 49,294 ಮಾನವ ದಿನಗಳನ್ನು ಬಳಕೆ ಮಾಡಿಕೊಂಡು ಇಂಗುಗುಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಾರ್ಮಿಕರಿಗೆ ₹1.10 ಕೋಟಿ ಕೂಲಿ ಪಾವತಿಸಲಾಗಿದೆ. ಈ ಯೋಜನೆಯಿಂದ ಗುಳೆ ತಪ್ಪಿಸುವ ಜತೆಗೆ ಸ್ಥಳೀಯವಾಗಿ ಉದ್ಯೋಗ ನೀಡಿರುವುದರಿಂದ ಗ್ರಾಮಸ್ಥರೂ ಖುಷಿಯಾಗಿದ್ದಾರೆ.

Leave A Comment

ಬೆಂಗಳೂರು

ಬೆಂಗಳೂರು:

ಬೆಂಗಳೂರು:

‘ನಮ್ಮ ಮೆಟ್ರೊ’ದಿಂದಲೇ ಫೀಡರ್‌ ಬಸ್‌ ಸೇವೆಗೆ ಚಿಂತನೆ

By Editor
04:00:25 AM / Sun, Jan 21st, 2018
ಬೆಂಗಳೂರು:

ಬೆಂಗಳೂರು:

ಕೊರೆವ ಚಳಿಗೂ ಜಗ್ಗದ ರೈತರು

By Editor
04:00:25 AM / Sun, Jan 21st, 2018