ಬೆಂಗಳೂರು:

ಚಳಿಯಲ್ಲೇ ರಾತ್ರಿ ಕಳೆದ ಮಹಾದಾಯಿ ಹೋರಾಟಗಾರರು

By Editor
04:01:45 AM / Sun, Jan 21st, 2018

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು 20 ದಿನಗಳೊಳಗೆ ಮಹದಾಯಿ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ನೀಡಿದ್ದ ವಾಗ್ಧಾನ ಈಡೇರಿಲ್ಲವೆಂದು ರೈತ ಸೇನಾ ಕರ್ನಾಟಕ ಕಾರ್ಯಕರ್ತರು ನಗರದ ಮಲ್ಲೇಶ್ವರ ಬಿಜೆಪಿ ಕಚೇರಿ ಮುಂಭಾಗ ದಲ್ಲಿ ಶನಿವಾರ ಆರಂಭಿಸಿದ ಅನಿರ್ದಿಷ್ಟ ಪ್ರತಿಭಟನೆ ಭಾನುವಾರ 2 ನೇ ದಿನಕ್ಕೆ ಕಾಲಿಟ್ಟಿದೆ.

ರಾತ್ರಿ ಬಿಜೆಪಿ ಕಚೇರಿ ಮುಂಭಾಗದಲ್ಲೇ ರೈತರು ಮಲಗುವ ಮೂಲಕ ಹೋರಾಟ ಮುಂದುವರಿಸಿದರು. ಚಳಿಯಲ್ಲೇ ಹಸಿರು ಶಾಲುಗಳನ್ನುಹೊದ್ದುಕೊಂಡು ಹಲವರು ಮಲಗಿದ್ದ ದೃಶ್ಯ ಕಂಡು ಬಂದಿತು.

ಸ್ಥಳೀಯರು ಹೊದಿಕೆಗಳನ್ನು ತಂದು ಕೆಲ ಮಹಿಳೆಯರಿಗೆ ನೀಡಿ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದರು.

ಗಾರ್ಮೆಂಟ್ಸ್‌ ಉದ್ಯಮಿಯೊಬ್ಬರು ಭಾನುವಾರ ಬೆಳಗ್ಗೆ ಉಪಹಾರ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಆಟೋ ಡ್ರೈವರ್‌ಗಳು ಬನ್‌ ನೀಡಿ ಹೋರಾಟಗಾರರಿಗೆ ಬೆಂಬಲ ಸೂಚಿಸಿದರು.

ಯಡಿಯೂರಪ್ಪ ಅವರು ಕೊಟ್ಟ ಭರವಸೆಯಂತೆ ಮಹದಾಯಿ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡುವವರೆಗೂ ನಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Leave A Comment

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
04:01:45 AM / Sun, Jan 21st, 2018
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
04:01:45 AM / Sun, Jan 21st, 2018
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
04:01:45 AM / Sun, Jan 21st, 2018
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
04:01:45 AM / Sun, Jan 21st, 2018
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
04:01:45 AM / Sun, Jan 21st, 2018
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
04:01:45 AM / Sun, Jan 21st, 2018