ಗಜೇಂದ್ರಗಡ:

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ


By Editor
04:13:20 AM / Sun, Jan 21st, 2018

ಪಟ್ಟಣದ ಬಸ್ ನಿಲ್ದಾಣ ನವೀಕರಣಗೊಳ್ಳುತ್ತಿರುವ ಕಾರಣ ಈಗ ಜೋಡಿ ರಸ್ತೆಯೇ ಬಸ್ ನಿಲ್ದಾಣವಾಗಿದ್ದು, ಇದರಿಂದ ನಿತ್ಯ ಪ್ರಯಾಣಿಕರು ಪರದಾಡುವಂತಾಗಿದೆ.

ಬಸ್ ನಿಲ್ದಾಣ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ನಿಲ್ದಾಣದ ಒಳಗೆ ವಾಹನಗಳು ಹೋಗದಂತೆ ತಡೆಯಲು ನಿಲ್ದಾಣದ ಎರಡೂ ದ್ವಾರಗಳಿಗೆ ಮುಳ್ಳು ಹಾಕಲಾಗಿದೆ. ಹೀಗಾಗಿ, ಬಸ್‌ಗಳು ಅನಿವಾರ್ಯವಾಗಿ ಜೋಡಿ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ. ಜೋಡಿ ರಸ್ತೆಯಲ್ಲಿ ದೂಳು ತುಂಬಿದ್ದು, ಬಸ್‌ಗಳ ನಿಲುಗಡೆಯಿಂದ ಅದರ ಪ್ರಮಾಣ ಮತ್ತಷ್ಟು ಹೆಚ್ಚಿ ಪ್ರಯಾಣಿಕರು ಹಾಗೂ ಸುತ್ತಲಿನ ವ್ಯಾಪಾರಿಗಳಿಗೆ ತೊಂದರೆಯಾಗಿದೆ.

ಜೋಡಿ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಮತ್ತು ಖಾಸಗಿ ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಬಸ್‌ ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತಾಗಿದೆ. ಇದರಿಂದ ಪ್ರಯಾಣಿಕರು ತಾವು ಹಿಡಿಯಬೇಕಾದ ಬಸ್ ಹುಡುಕುವಲ್ಲಿ ಸುಸ್ತಾಗುವಂತಾಗಿದೆ. ಅದರಲ್ಲೂ ವೃದ್ಧರು, ಮಹಿಳೆಯರು, ಅಂಗವಿಕಲ ಪಾಡು ಹೇಳತೀರದು. ಜೋಡಿ ರಸ್ತೆ ದಾಟುವಾಗ ಅವರು ಜೀವ ಕೈಯಲ್ಲಿ ಹಿಡಿದುಕೊಂಡಿರುತ್ತಾರೆ.

ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗ ಇಲ್ಲದ ಕಾರಣ ನಿಲ್ದಾಣದ ಬಾಗಿಲಿಗೆ ಹಾಕಿದ ಮುಳ್ಳುಗಳ ಬದಿಯಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಯಾವ ಬಸ್ ಎಲ್ಲಿ ನಿಲ್ಲುತ್ತದೆ? ಯಾವ ಕಡೆಗೆ ಹೋಗುತ್ತದೆ? ಎಂಬುದು ಪ್ರಯಾಣಿಕರಿಗೆ ಗೊತ್ತಾಗುವುದಿಲ್ಲ. ನಿಲ್ದಾಣದ ಅಧಿಕಾರಿ ಕೂಡ ನಿಲ್ದಾಣದ ಬಾಗಿಲ ಬಳಿ ಹಾಕಿದ ಮುಳ್ಳುಗಳ ಬದಿಯಲ್ಲಿ ಕೂರುವುದು ಅನಿವಾರ್ಯವಾಗಿದೆ.

Leave A Comment

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
04:13:20 AM / Sun, Jan 21st, 2018
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
04:13:20 AM / Sun, Jan 21st, 2018
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
04:13:20 AM / Sun, Jan 21st, 2018
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
04:13:20 AM / Sun, Jan 21st, 2018
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
04:13:20 AM / Sun, Jan 21st, 2018
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
04:13:20 AM / Sun, Jan 21st, 2018