ಎಟಿಎಂಗಳ ಮುಂದೆ ಕ್ಯೂ ನಿಂತ ಜನರು 

ಕೆಂಭಾವಿ: ಪಟ್ಟಣದಲ್ಲಿ ಮೂರು ರಾಷ್ಟ್ರೀಕೃತ ಬ್ಯಾಂಕುಗಳಿದ್ದು ಮೂರು ಬ್ಯಾಂಕುಗಳಲ್ಲಿ ಎಟಿಎಂ ಗಳಿವೆ ಆದರೆ ಮೂರು ಎಟಿಎಂ ಗಳಿದ್ದು ಕೇವಲ ಒಂದರಲ್ಲಿ ಮಾತ್ರ ಹಣ ದೂರಕುತ್ತಿದ್ದು, ಇನ್ನುಳಿದ ಎರಡು ಎಟಿಎಮ್‍ಗಳು ಮಾತ್ರ ನೋಟ್‍ಬ್ಯಾನ್ ಆದಾಗಿನಿಂದ ಬಾಗಿಲು ತೆರದ ಉದಾಹರಣೆಯಂತೂ ತೀರಾ ವಿರಳಾವಾಗಿದೆ.
ಸಾರ್ವಜನಿಕರಿಗೆ ತುರ್ತು ಹಣದ ಅಗತ್ಯವಿದ್ದು, ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೂ ಕೈಗೆ ಸಿಗದ್ದಂತೆ ಆಗಿದೆ. ಪಟ್ಟಣದ ಯಾವ ಎಟಿಎಂ ನೋಡಿದರೂ ನೋ ಕ್ಯಾಷ್, ಮೊದಲೂ ಗ್ರಾಹಕರು ಕಿಸೆಯಲ್ಲಿ ದುಡ್ಡು ಇಲ್ಲದಿದ್ದರೇ  ಚಿಂತನೆಯನ್ನು ಮಾಡದೇ  ತಕ್ಷಣ ಸಿಗುವ ಎಟಿಎಂ ಗಳಿಗೆ ಹೋಗಿ ತಮಗೆ ಬೇಕಾದಷ್ಟು ಹಣವನ್ನು ತಗೆದುಕೊಂಡು ಬರುತ್ತಿದ್ದರು ಆದರೆ ಈಗ ಕಿಸೆ ಖಾಲಿಯಾದರೆ ಹೇಗಪ್ಪ ಅನ್ನುವ ಪರಿಸ್ಥಿತಿ ಬಂದೊದಗಿದೆ.
ಇನ್ನೂ ಕೆಲವು ಎಟಿಎಂಗಳಲ್ಲಿ ಹಣವಿದ್ದರೂ ಮುಂಜಾನೆಯಿಂದಲೇ ಕೆಲವರು ಎಟಿಎಂಗಳಲ್ಲಿ ನಿಂತು ಹಣ ಪಡೆಯಬೇಕಾದ ಅನಿವಾರ್ಯತೆ ಹಾಗೂ ಸರದಿಯಲ್ಲಿ ನಿಂತ ಎಲ್ಲಾ ಗ್ರಾಹಕರಿಗೆ ಹಣ ಸಿಗುತ್ತದೆ. ಎಂಬುವುದು ಗ್ಯಾರಂಟಿಯಿಲ್ಲ. ಶೈಕ್ಷಣಿಕ ವರ್ಷವು ಪ್ರಾರಂಭವಾಗಿದ್ದು ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹೋಗುತಿರುತ್ತಾರೆ. ಆದ್ದರಿಂದ ಯಾರಿಗೂ ಬ್ಯಾಂಕಿಗೆ ಹೋಗಿ ಹಣ ಪಡೆಯಲು ಆಗುತ್ತಿಲ್ಲ. ಎಟಿಎಂಗಳು ಬಂದ ನಂತರ ಯಾರು ಹಣ ತೆಗೆಯಲು ಮತ್ತು ಹಾಕಲು ಬ್ಯಾಂಕ್‍ಗಳಿಗೆ ಹೋಗುತ್ತಿಲ್ಲ. ಆದರೆ ಈಗ ಎಟಿಎಂಗಳಲ್ಲಿ ಹಣ ಸಿಗದೆ ಇರುವುದರಿಂದ ಮತ್ತೆ ಬ್ಯಾಂಕಿನಲ್ಲಿ ಕ್ಯೂ ನಿಂತು ಹಣ ಪಡೆಯಬೇಕಾಗಿದೆ. ಇದರಿಂದಾಗಿ ಗ್ರಾಹಕರು ಸರಕಾರದ ಮೇಲೆ ಸರಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 


 

Comment

Related News