ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತೆ ಅರಿವು ಕಾರ್ಯಕ್ರಮ 

ಕೆಂಭಾವಿ: ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿ ಕಂಡುಬಂದಲ್ಲಿ ಅದನ್ನು ತಡೆಗಟ್ಟಲು ಓಆರ್‍ಎಸ್ ಕುಡಿಸಲು ಮರೆಯಬಾರದು ಎಂದು ಕಿರಿಯ ಆರೋಗ್ಯ ಸಹಾಯಕ ಶಂಕರ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ ಇವರ ಸಹಯೋಗದಿಂದ  ಸಮೀಪದ ಗೊಡ್ರಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಗೆ ಅತಿಸಾರ ಭೇದಿ ನಿಯಂತ್ರಣ ಹಾಗೂ ಸ್ವಚ್ಚತೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಅತಿಸಾರ ಭೇದಿಯಾದ ಮಕ್ಕಳಿಗೆ ಓಆರ್‍ಎಸ್ ಜನತೆ 14 ದಿನಗಳ ವರೆಗೆ ಜಿಂಕ್ ಮಾತ್ರೆಗಳನ್ನು ನೀಡುವುದರಿಂದ ಮಗುವಿನಲ್ಲಿ ಶಕ್ತಿ ಉತ್ಪತ್ತಿಯಾಗಿ ಮಗು ಚಾಕಚಕ್ಕೆತೆ ಹೊಂದುತ್ತದೆ ಎಂದು ಹೇಳಿದರು. 
ನಂತರ ಸ್ವಚ್ಚತೆ ಅರಿವು ಮೂಡಿಸಿದ ಅವರು ಸಾಬೂನು ಬಳಕೆಯಿಂದ ಸಂಪೂರ್ಣ ಸ್ವಚ್ಚತೆ, ಹೇಗೆ ಕೈ ತೊಳೆದುಕೊಳ್ಳಬೇಕು ಎಂಬುವ ಕುರಿತು ಶಾಲಾ ಮಕ್ಕಳಲ್ಲಿ ಪ್ರಾಯೋಗಿಕತೆ ಮಾಡಿಸಿ ತೋರಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳು ಸೇರಿದಂತೆ ಮುಖ್ಯ ಗುರು ಶರಣು ಗೋಸಲ್, ಶಾಲಾ ಸಿಬ್ಬಂದಿ, ಆಶಾ ಕಾರ್ಯರ್ತೆ ಸಾವಿತ್ರಿ ಇತರರು ಇದ್ದರು. 
 

Comment

Related News