ಪಧವೀದದರ ಮತದಾನಕ್ಕೆ ಮಣ್ಣು ಹಾಕಿ ತಾತ್ಕಲಿಕ ನಿರ್ಮಿಸಿದ ರ್ಯಾಂಪ್

ಕೆಂಭಾವಿ: ಪಟ್ಟಣದನಲ್ಲಿ ಇಂದು ನಡೆಯುವ ಈಶಾನ್ಯ ಪಧವೀಧರ ಮತಕ್ಷೇತ್ರದ  ಮತಗಟ್ಟೆ 70  ನಾಡಕಛೆರಿ ಹಿಂದುಗಡೆ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿತವಾದ ಮತಗಟ್ಟೆಗೆ ಅಂಗವಿಕಲರು, ವಯೋವೃದ್ದರು  ಹೋಗಲು ರಸ್ತೆಯು ಸರಿಯಿಲ್ಲ. ಜಾಲಿ ಗಿಡಗಳು ರಸ್ತೆಯನ್ನು ಆವರಿಸಿಕೊಂಡಿದ್ದು  ಹಾಗೂ ರ್ಯಾಂಪ್ ವ್ಯವಸ್ಥೆಯು ಸರಿಯಿಲ್ಲ. ಕೇವಲ ತಾತ್ಕಲಿಕವಾಗಿ ಕೆಂಪು ಮಣ್ಣು ಹಾಕಿ ರ್ಯಾಂಪ್ ಮತ್ತು ರಸ್ತೆ ನಿರ್ಮಾಣ ಮಾಡಿದ್ದಾರೆ. ಅದು ಸರಿಯಾಗಿ ಸುಸಜ್ಜಿತವಾಗಿ ಇರುವುದಿಲ್ಲ. 
ಮತಗಟ್ಟೆ ಸ್ಥಾಪಿಸುವಾಗ ಸಂಬಂಧಪಟ್ಟ ಅಧಿಕಾರಿಗಳು ನೋಡಿ ಇಲ್ಲಿ ವ್ಯವಸ್ಥೆ ಸರಿ ಇದೇಯೋ ಇಲ್ಲವೂ ಎಂದು ಯೋಚಿಸಿ ನೋಡಿ ಸ್ಥಾಪನೆ ಮಾಡಬೇಕು. ಇಲ್ಲಿ ವಿದ್ಯುತ್ ವ್ಯವಸ್ಥೆಯಿಲ್ಲ. ಶೌಚಾಲಯ ವ್ಯವಸ್ಥೆಯಿಲ್ಲ. ಕುಡಿಯಲು ನೀರಿಯಿಲ್ಲ. ಕಟ್ಟಟವು ಕೂಡ  ಮಳೆ ಬಂದರೆ ತ್ರೀವ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಇಂದು ಸಾಯಂಕಾಲ ಮತಗಟ್ಟೆಗೆ ಭೇಟಿಕೊಟ್ಟಾಗ ಮತಗಟ್ಟೆ ಅಧಿಕಾರಿಗಳು ಬ್ಯಾಲೇಟ್ ಪೇಪರ್ ಗತಿ ದೇವರೆ ಬಲ್ಲ. ರಾತ್ರಿ ಮಳೆ ಬರಬಾರದು ಎಂದು ದೇವರಲ್ಲಿ ಬೇಡಿಕೊಳ್ಳ ಹತ್ತಿದ್ದೆವೆ ಎಂದು ಹೇಳಿದರು.
ಈ ಮೊದಲು ಈ ಮತಗಟ್ಟೆ ಬೇರೆ ಕಡೆ ಇತ್ತು. ಪಟ್ಟಣದ  ಮಧ್ಯದಲ್ಲಿ ಮತಗಟ್ಟೆ ಇತ್ತು. ಆದರೆ ಇದನ್ನು ಈ ಬಾರಿ ಏಕಾ ಏಕಿ ಸ್ಥಳಾಂತರ ಮಾಡಿರುವುದರಿಂದ ಮತದಾರರಿಗೂ ತೊಂದರೆ ಹಾಗೂ ಅಧಿಕಾರಿಗಳಿಗೂ ತೊಂದರೆಯಾಗುತ್ತದೆ. ಪಟ್ಟಣದಲ್ಲಿ ಸಾಕಷ್ಟು ಕಟ್ಟಡಗಳಿದ್ದವು. ನಾಡಕಛೆರಿ, ಪುರಸಭೆ ಕಾರ್ಯಾಲಯಾ, ಮತಗಟ್ಟೆ ಸ್ಥಾಪನೆ ಮಾಡಿದ್ದರೆ ಮತದಾರರಿಗೂ ಅನುಕೂಲವಾಗುತ್ತಿತ್ತು. ಸುರಕ್ಷತೆಯು ಇರುತ್ತಿತ್ತು. ಎಂದು ಪಧವೀಧದರ ಮತದಾರರ ಅಂಬೋಣವಾಗಿದೆ.
ಮತದಾರರ ಯಾದಿಯಲ್ಲಿ ಗೊಂದಲ:ಸಾಕಷ್ಟು ನಿರದ್ಯೋಗಿಗಳ ಹೆಸರುಗಳನ್ನು ನೋಂದಾಯಿಸಿದರು ಬಂದಿಲ್ಲ. ಹಿಂದಿನ ಮತದಾರರು ಹೆಸರು ಮುಂದೆವರಿಯುತ್ತದೆ ಎಂದು ನವೀಕರಿಸಿಲ್ಲ. ಪಧವೀಧದರಿದ್ದರು ಮತದಾನದಿಂದ ವಂಚಿತರಾಗಿದ್ದೇವೆ.ಕೆಂಭಾವಿ ವಲಯದಲ್ಲಿ ಸುಮಾರು ಸಾವಿರ ಮತದಾರರಿದ್ದರು ಕೇವಲ 248 ಮಾತ್ರ ಮತದಾರರ ಯಾದಿಯಲ್ಲಿ ಬಂದಿವೆ ಎಂದು ಉದಯ್ ಕುಲ್ಕರ್ಣಿ ಹೇಳುತ್ತಾರೆ.
ಈ ಕಾಲೇಜಿನಲ್ಲಿ ಕೊಣೆಗಳಿಗೆ ವಿದ್ಯುತ್ ವ್ಯವಸ್ಥೆ, ರ್ಯಾಂಪ್ ವ್ಯವಸ್ಥೆ ಇರಲಿಲ್ಲ. ತಾತ್ಕಲಿಕ ವ್ಯವಸ್ಥೆ ಮಾಡಿಕೊಂಡಿದ್ದೆವೆ. ಬೆಳಿಗ್ಗೆ 7 ಗಂಟೆಯಿಂದ 5 ಗಂಟೆವರೆಗೆ ಮತದಾನ ನಡೆಯಲಿದೆ.
                                                              ಕಲ್ಲಪ್ಪ  ಕಂದಾಯ ನೀರಿಕ್ಷಕ 

 
 

Comment

Related News