ಶರಣಬಸವೇಶ್ವರ ಮಠದಲ್ಲಿ ವಿವಾಹ ನೊಂದಣಿ ಕಾರ್ಯ ಪ್ರಾರಂಭ 

ಕೆಂಭಾವಿ:ಪಟ್ಟಣ ಸಮೀಪದ ನಗನೂರು ಗ್ರಾಮದ ಮಹಾ ದಾಸೋಹಿ ಶರಣಬಸವೇಶ್ವರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಹಮ್ಮಿಕೊಂಡಿರುವ 16ನೇ ವರ್ಷದ ಸರಳ ಸಾಮೂಹಿಕ ವಿವಾವಹಗಳು ಜೂನ್ 18 ರಂದು ನಡೆಯಲಿದ್ದು, ವಿವಾಹ ನೊಂದಣಿ ಕಾರ್ಯ ಈಗಾಗಲೆ ಪ್ರಾರಂಭವಾಗಿದ್ದು,  ಜೂನ್ 15 ನೊಂದಣಿಗೆ ಕೊನೆಯ ದಿನವಾಗಿರುತ್ತದೆ ಎಂದು ಮಠದ ಪೀಠಾಧಿಪತಿ ಶರಣಪ್ಪ ಶರಣರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಒಂದು ಸಾವಿರ ಸಾಮೂಹಿಕ ವಿವಾಹದ ಗುರಿ ಹೊಂದಿದ್ದು, ಸಾಮೂಹಿಕ ವಿವಾಹದಲ್ಲಿ ಭಾಗವಹಿಸಲಿರುವ ವಧುವರರ ಜಾತಿ ಪ್ರಮಾಣ ಪತ್ರ, ವಯಸ್ಸು ದೃಡಿಕರಣ, ಆಧಾರಕಾರ್ಡ, ಆದಾಯ ಪ್ರಮಾಣ ಪತ್ರ, ಭಾವಚಿತ್ರ  ಸೂಕ್ತ ಧಾಖಲಾತರಿಗಳೊಂದಿಗೆ ನಿಗದಿತ ದಿನಾಂಕದೊಳಗೆ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ.

Comment

Related News