ವಿಶ್ವ ಪರಿಸರ ದಿನಾಚರಣೆ ಆಚರಣೆ 

ಕೆಂಭಾವಿ: ಪರಿಸರ ಮೇಲೆ ನಮ್ಮಿಂದಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟುವ ಸದುದ್ದೇಶವೇ ಪರಿಸರ ದಿನಾಚರಣೆ ಹಿಂದಿರುವ ಒಂದು ಉದ್ದೇಶ ಎಂದು ಮುಖ್ಯ ಗುರುಗಳಾದ ಕೆ ಆರ್ ಪಾಟೀಲ್ ಹೇಳಿದರು.
ಪಟ್ಟಣದ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದರು.
         ಇತ್ತೀಚಿಗೆ ವಿಶ್ವ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದು ಮಾನವನ ಜೀವನಕ್ಕೆ ಸವಾಲೋಡ್ಡುವ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ. ಅದಕ್ಕೆ ಕಾರಣ ವಾಹನಗಳಿಂದ ಹೊರ ಹೊಮ್ಮುವ ವಿಷ ಹೊಗೆ, ಅತೀಯಾದ ಪ್ಲಾಸ್ಟಿಕ್ ಬಳಕೆ, ಇವು ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ.
                      ಪರಿಸರ ರಕ್ಷಣೆ ನಮ್ಮೇಲ್ಲರ ಹೊಣೆ ಆದ್ದರಿಂದ ಗಿಡ ಮರಗಳನ್ನು ಬೆಳಸುವ ಮೂಲಕ ಪರಿಸರವನ್ನು ಉಳಿಸಿ ಆದರೆ ಇಂದಿನ ಪೀಳಿಗೆ ದಿನಾಚರಣೆಗಳನ್ನು ಕೇವಲ  ಪೇಸಬುಕ್, ಹಾಗೂ ವ್ಯಾಟಪ್ಸ್‍ಗಳಲ್ಲಿ ಮಾತ್ರ ಆಚರಿಸುತ್ತಿದ್ದಾರೆ ಹೊರೆತು ತಮ್ಮ ಮನೆ ಮುಂದೆ ಒಂದು ಸಸಿಯನ್ನು ನೆಟ್ಟುವ ಕೆಲಸ ಮಾಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.  
ಈ ಸಂದರ್ಭದಲ್ಲಿ ಆನಂದಕುಮಾರ, ಹಾಲಸ್ವಾಮಿ, ಬಸವರಾಜ ಭಂಟನೂರ, ಜಗದೇಶ್ ಇತರರು ಇದ್ದರು.   

Comment

Related News