ಪತ್ರಕರ್ತನ ಜವಾಬ್ದಾರಿಯು ಜೀವಂತಿಕೆಯಾಗಲಿ !

ಪತ್ರಿಕಾ ಬರವಣಿಗೆ ವಸ್ತು ನಿಷ್ಠವಾಗಿರಬೇಕು. ಕಲ್ಪಿತ ಪ್ರಚೋದನಕಾರಿ ಬರಹ ಇರಕೂಡದು . ರಾಷ್ಟ್ರೀಯ ಅಭಿವೃದ್ಧಿ ,ಲೋಕ ಕಲ್ಯಾಣ ಲೋಕ ಹಿತರಕ್ಷಣೆ ಉದ್ದೇಸ ಬೇಕು . ವ್ಯಾಪಾರಿಕರಣ ಎಂದಿಗೂ ಸಲ್ಲದು. ಪತ್ರಿಕೆ ಜನರ ಬೆಂಬಲದಿಂದ ನಡೆಯ ಬೇಕು ರಾಷ್ಟ್ರದ ಧರ್ಮದರ್ಶಿಯಾಗಿಕೆಲಸ ಮಾಡಬೇಕು . ಜನರ ಅಭಿಪ್ರಾಯ, ಅಭಿರುಚಿ ತಿಳಿದು ಕೊಂಡು ಜನರು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಭಗವಹಿಸುವಂತೆ ಪ್ರೇರೆಪಿಸಬೇಕು, ನಿರ್ಭಿತವಾಗಿ ,ನಿಷ್ಪಕ್ಷಪಾತವಾಗಿಬಹಿರಂಗ ಸಂವಾದದ ವೇದಿಕೆ ಯಾಗಬೇಕು. ಪ್ರಜೆಗಳಲ್ಲಿ ಸಾಮರಸ್ಯ ಐಕ್ಯತೆ ಬೆಳೆಸಬೇಕು. ಸತ್ಯದ ಅನ್ವೇಷಣೆ ಮೂಲಕ ಪತ್ರಿಕೆ ಜೀವಂತಿಕೆ ಕಾಪಾಡಬೇಕು . ಅಂದು ಪತ್ರಿಕೋದ್ಯಮ ಪ್ರಜಾಪ್ರಭುತ್ವದ ರಕ್ಷಕ ಎಂಬ ಮಾತಾಗಿತ್ತು.ಪತ್ರಿಕೋದ್ಯಮದಲ್ಲಿ ನಿಜವಾಗಲೂ ಧ್ವನಿ ಎತ್ತಲು ನಮಗೆ ಅವಕಾಶವಿದೆಯಾ? ಅವಕಾಶ ವಿದ್ದರೂ ಅದನ್ನು ನಮ್ಮ ಜನರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ? ಎಂಬುದು ಗೊಂದಲ ವಿಚಾರ ,ಪತ್ರಿಕೊದ್ಯಮ ಒಂದು ರೀತಿಯಲ್ಲಿ ನಮ್ಮ ಆಸೆ ಆಕಾಂಕ್ಷೆಗಳನ್ನ ಹೇಳಿಕೊಳ್ಳಲು ಅವಕಾಶ ಮಾಡಿಕೊಟ್ಟರು ಎಲ್ಲೋ ಒಂದು ಕಡೆ ನಮ್ಮನ್ನು ಪರೋಕ್ಷ ವಾಗಿ ಆಳುವ ಸರಕಾರಗಳು ಹಿಡಿತಲ್ಲಿಟ್ಟುಕೊಂಡಿದೆ ಎಂಬುದು ನನ್ನ ಅಭಿಪ್ರಾಯ. ಒಂದು ಕಾಲದಲ್ಲಿ ಪತ್ರಿಕಾ ರಂಗದಲ್ಲಿ ಬ್ರಾಹ್ಮಣರೇ ಹೆಚ್ಚು ಹೀಗೆ ಆಯಕಟ್ಟಿನ ಜಾಗಗಳಲ್ಲಿ ಅವರೇ ಹೆಚ್ಚಾಗಿರುವುದರಿಂದ ಉಳಿದ ಜಾತಿಯ ಪತ್ರಕರ್ತರು ಅವರ ಕೈಕೆಳಗೆ ದುಡಿಯ ಬೇಕೇ ಹೋರತು ತಮಗನ್ನಿಸಿದಂತೆ ಬರೆಯಲು ಸಾಧ್ಯವಿಲ್ಲ. ಎನ್ನುತ್ತಿದ್ದರು. ಪತ್ರಿಕೋದ್ಯಮ ದಲ್ಲಿ ದಲಿತರಿಗೆ ಹೆಚ್ಚಿನ ಅವಕಾಶ ದಕ್ಕೂತ್ತಿರಲಿಲ್ಲ. ಇಂದಿಗೂ ದಲಿತರ ಸಂಖ್ಯೆ ಕಡಿಮೆ ಯಾದರೂ ಸಹ ಅಹಿಂದ ವರ್ಗಗಳ ಹಲವಾರು ಮಂದಿ ಮಾಧ್ಯಮ ಲೋಕಕ್ಕೆ ನುಗ್ಗಿದ್ದಾರೆ. ಕಾಲಬದಲಾದಂತೆ ಎಲ್ಲಾ ರಂಗಗಳಲ್ಲೂ ಬದಲಾವಣೆಗಳು ಆಗುತ್ತಿರುತ್ತವೆ. ಮಾಧ್ಯಮ ರಂಗದಲ್ಲಿರುವ ಪ್ರಮುಖ ಟಿ.ವಿಗಳು ಮತ್ತು ಪತ್ರಿಕೆಗಳ ಆಯಕಟ್ಟಿನ ಜಾಗಗಳಿಗೆ ಯಾರು ಬಂದು ರೂರಬೇಕು ಎಂಬುದನ್ನು ರಾಜಕೀಯ ಪಕ್ಷಗಳ ನಾಯಕರು ನಿರ್ಧರಿಸ ತೋಡಗಿದ್ದಾರೆ. ಇದು ನಮ್ಮ ದುರಂತ ಎನ್ನ ಬೇಕೋ ಪ್ರಜಾಪ್ರಭುತ್ವದ ದುರಂತ ವೆನ್ನಬೇಕೋ. ಅನಾದಿ ಕಾಲದಿಂದಲೂ ಪತ್ರಿಕೋದ್ಯಮ ಅನ್ನುವುದು ಜನತೆಯ ಅಭಿಪ್ರಾಯಗಳನ್ನೆ ಆಧಾರ ವಾಗಿಟ್ಟುಕೊಂಡು ಧ್ವನಿಯೆತ್ತುವ ಮೂಲಕ ಗೆದ್ದು ಬಂದಂಥದ್ದು ಜನರ ಪರ ಮತ್ತು ವಿರೋಧವಾಗಿ ವಾದ ಮಾಡಿ ನ್ಯಾಯ –ಅನ್ಯಾಯಗಳ ಬಗ್ಗೆ ವಾದ ಮತ್ತು ಪ್ರತಿವಾದ ನಡೆದರೂ ಎಷ್ಟರ ಮಟ್ಟಿಗೆ ಅದರ ಸದ್ಬಳಕೆ ಯಾಗುತ್ತಿದೆ? ತಾಂತ್ರಿಕ ಬೆಳವಣಿಗೆ ಗಳಿಂದ ಸಾರ್ವಜನಿಕರಿಗೆ ನೇರವಾಗಿ ಧ್ವನಿಯೆತ್ತುವ ಅವಕಾಶ ಲಭಿಸಿದ್ದರೂ ಒಂದು ರೀತಿಯಲ್ಲಿ ಪ್ರಭಾವಶಾಲಿಗಳಿಗೆ , ಸರಕಾರಕ್ಕೆ ಹೆದರುತ್ತ ಹೇಳಬೇಕಾದದುನ್ನು ಹೇಳದೇ ಹಿಂಜರಿಯುತ್ತಿರುವ ಜನರು ಇದ್ದರೆ  ಮೊನ್ನೆ ಹಿರಿಯ ಸಾಹಿತಿ ಬಂಜಗೇರೆ ಜಯ ಪ್ರಕಾಶರಂಥವರು ಪತ್ರಿಕಾರಂಗ ದಕುತಿತು ತೀವ್ರ ಕಳವಳ ವ್ಯಕ್ತ ಪಿಡಿಸಿದರು. ನಮ್ಮ ಸಂವಿಧಾನ ರಕ್ಷಕರೇ ಪತ್ರಕರ್ತರ ರು. ಅವರಿಂದಲು ಇಂದಿನ ಮೌಲ್ಯಗಳಿಗೆ ಅಪಾಯ ವಾಗುತ್ತಿದೆ. ಪತ್ರಿಕೆಗಳಿಗೂ ತಿಳಿಯುವ ಮುನ್ನವೇ ಜನರಿಗೆ ಸಂಪೂರ್ಣ ಮಾಹಿತಿ ತಲುಪಿರುತ್ತದೆ. ಇಂಥ ವೇಗದಲ್ಲಿ ಓಡುತ್ತಿರುವ ಸಮಾಜದಲ್ಲಿ ಪತ್ರಿಕೆಗಳಿಗೆ ಉಳಿಗಾಲವಿಲ್ಲ ಪತ್ರಿಕೆಗಳಿಗೆ ಮಾತಿನಂತೆ ,ಮಾಹಿತಿ ಸಂಗ್ರಹಕ್ಕಲ್ಲದೆ,ಬೇರೆ ವಿಚಾರಗಳಿಗಾಗಿಯೇ ಪತ್ರಿಕೆಗಳನ್ನು ಪ್ರಕಟಿಸುತ್ತಿರುವುದು ವಿಷಾದಕರ ಸಂಗತಿ.
 ಪ್ರತಿ ವರ್ಷ ಜುಲೈ 1 ರಂದು ಪತ್ರಿಕೋದ್ಯಮ ದಿನವನ್ನಾಗಿ ಆಚರಿಸಿ ಸ್ವೀಟ್ ತಿಂದು .ಚಪ್ಪಾಳೆ ಹೊಡೆದು ಸುಮ್ಮನಾದರೆ ಎಷ್ಟೋ ಸಂಗತಿಗಳು ಹಾಗೇಯೇ ಉಳಿದು ಬಿಡುತ್ತವೆ . ಪತ್ರಿಕೋದ್ಯಮ ದಿನ ಬಂತೆಂದರೆ ಸಾಕು “ ಮಂಗಳೂರು ಸಮಾಚಾರ” ಎಂಬುದು ಕರ್ನಾಟಕದ ಮೊದಲ ಕನ್ನಡ ಪತ್ರಿಕೆ ಎಂಬ ಅದೇ ಭಾಷಣ ಕೇಳಿ ಸುಮ್ಮನಾಗುವುದಲ್ಲ. ಬದಲಿಗೆ ಇಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಯುವ ಪತ್ರಕರ್ತರಿಗೆ ತಿಳಿಸಿ ಹೇಳಬೇಕಿದೆ. ಈಗ ಪತ್ರಿಕೋದ್ಯಮದಲ್ಲಿರುವ ಬಹಳ  ಟಿoಣioಟಿs          ಹೊಗಲಾಡಿಸಬೇಕಿದೆ. 

ಜಾಗತೀಕರಣದ ಭರಾಟೆ ಮಾಧ್ಯಮ ವನ್ನು ಯಾವ ಮಟ್ಟಿಗೆ ತಟ್ಟಿದೆ ಎಂದರೆ ,ರೀ ಮಾಧ್ಯಮ ರಂಗಕ್ಕೆ ಬಂದಿದ್ದೇನೆ. ವಸ್ತು ಸ್ಥಿತಿಯನ್ನು ಜನರಿಗೆ ಹೇಳುತ್ತೇನೆ ಎಂದು ಎದೆ ತಟ್ಟಿಕೊಂಡು ಧೈರ್ಯದಿಂದ ಹೇಳುವ ಪತ್ರಕರ್ತರ ಸಂಖ್ಯೆಯೇ ಕಡಿಮೆಯಾಗಿದೆ. ಕೇಳಿದರೆ ಏನು ಮಾಡೋದು? ಮೊದಲು ನಾವು ಉಳಿದು ಕೊಳ್ಳಬೇಕು ನಮ್ಮ ಸಂಸ್ಥೆಯ ಮಾಲೀಕರು ಉಳಿದುಕೊಳ್ಳಬೇಕು. ನಂತರ ಜನರ ಬಗ್ಗೆ ಯೋಚಿಸಬಹುದು ಎಂಬ ಮಾತೆ ಹೆಚ್ಚಾಗಿ ಕೇಳಿ ಬರುತ್ತದೆ. 
ಅಂದರೆ ಮಾಧ್ಯಮ ರಂಗವೈ ದುಡ್ಡಿನ ಹಿಂದೆ ಬಿದ್ದಿದೆ .ಯಾವ ಮಟ್ಟಿಗೆ ಎಂದರೆ ಸಂಪಾದಕೀಯ ವಿಭಾಗ ಮಾಧ್ಯಮದ ಮೇಲೆ ಹಿಡಿತ ವಿಟ್ಟುಕೊಂಡಿತ್ತು . ಈಗ ಜಾಹಿರಾತು ವಿಭಾಗದ ಮುಖ್ಯಸ್ಥ ರ  ಕೈಗೊಂಬೆಗಳಂತಾಗಿ ಹೋಗಿದ್ದಾರೆ. ಇಂತಹವರನ್ನು ಕಲಿಯುಗದ ಸತ್ಯ ಹರಿಶ್ಚಂದ್ರ ಅಂತ ಬರೆಯಬೇಕು . ಮೋದಿ ಜಿಂದಾಬಾದ್, ಸಿದ್ದರಾಮಯ್ಯ ಜಿಂದಾಬಾದ್ , ದೇವೆಗೌಡ ಜಿಂದಾಬಾದ್, ಯಡಿಯೂರಪ್ಪ ಜಿಂದಾಬಾದ್, ಅಂತ ನೇರವಾಗಿ ಹೇಳದೆ ಇರಬಹುದು ,ಆದರೆ ಅದೇ ಅರ್ಥ ಬರುವರಿಗೆ ಬರೆಯಿರಿ ಎಂದು ಜಾಹೀರಾತು ವಿಭಾಗದವರು ಹೇಳುತ್ತಾರೆ . ಅದಕ್ಕೆ ಪೂರಕವಾಗಿ ಸಂಪಾದಕೀಯ ವಿಭಾಗದವರು ವರ್ತಿಸುತ್ತಾರೆ.ಹೀಗಾಗಿ ನಿಮಗೆ ನೆನಪಿನಲ್ಲಿರಲಿ ಇವತ್ತು ಮೋಜಕ ಮೀಡಿಯಾಗಳು ಅಂತೇ ನಿವೆ? ಇದರಲ್ಲಿ ನೂರಕ್ಕೆ ತೊಂಬತೈದು ಪರ್ಸೆಂಟು ಮೀಡಿಯಾಗಳು ಪಕ್ಕಾ ವ್ಯಾಪಾರಿ ಸಂಸ್ಥೆಗಳು ,ವ್ಯಾಪಾರಂ ದ್ರೋಹ ಚಿಂತಂ . ಎಂಬ ಗಾದೆಯೇ ಇಲ್ಲವೇ? ವ್ಯಾಪಾರದಲ್ಲಿ ಅದಲ್ಲಿ ಸಹಜ ಹೀಗಾಗಿ ನಿಮಗೆ ಬರುತ್ತಿರುವ ಸುದ್ಧಿಗಳೆಲ್ಲವೂ ನಿಜ ಎಂದು ಕೊಳ್ಳಬೇಡಿ ಆ ಸುದ್ಧಿಯಾದ ಲಾಭಕ್ಕಾಗಿಯೇ ಪ್ರಕಟವಾಗಬಹುದು. ಯಾರನ್ನೋ ಮೇಲೆ ತರಲು ಇನ್ಯಾರನ್ನೋ ಕೆಳಕ್ಕೆ ತಳ್ಳಲು ಪ್ರಕಟವಾಗುತ್ತಿರ ಬಹುದು ಹೀಗಾಗಿ ಜಾಗತೀಕ ರಳಾದ ಈ ದಿನಗಳಲ್ಲಿ ಮಾಧ್ಯಮ ಸ್ವಾತಂತ್ರ ಎಂದರೆ ಯಾವ ಕಡೆಯಿಂದ ನಗಬೇಕು , ಮೂಂಚೆ ಪತ್ರಕರ್ತರಮೇಲೆ ಸಣ್ಣದೊಂದು ಹಲ್ಲೆಯಾದರೆ ಸಾಕು ಇಡೀ ಮಾಧ್ಯಮ ಲೋಕವೇ ಮೇಲೆದ್ದು ನಿಂತು ಬಿಡುತ್ತಿತ್ತು. ಆದರೆ ಈಗ ಸುಮ್ಮನೆ ಒಂದು ರೌಂಡು ನೋಡಿದಂತೆ ಮಾಡಿ ಸುಮ್ಮನಾಗಿ ಬಿಡುತ್ತದೆ. ನಾನು ಮಾಧ್ಯಮ ರಂಗಕ್ಕೆ ಬಂದು ಜಗತ್ತನ್ನೆ ಬದಲಿಸುತ್ತೇನೆ. ಎಂಬ ಭ್ರಮೆಯೊಂದಿಗೆ ಯಾರು ಈ ಲೋಕಕ್ಕೆ ನುಗ್ಗಲು ಸಾಧ್ಯವಿಲ್ಲ. ನಮ್ಮ ಒಂದು ವರದಿ ವ್ಯವಸ್ಥೆಯನ್ನು ಬದಲಿಸುತ್ತದೆ ಎಂದರೆ ಬೇರೆ ಮಾತು. ಆದರೆ ಬದಲಾವಣೆ ಎಂಬುದು ವ್ಯಾಪಾರ ಬಾಗವಾದರೆ ಇಂತಹ ಬದಲಾವಣೆಗೆ ಸಾಮಾಜಿಕ ಕಾಳಜಿ ಎಂಬುದು ಇಲ್ಲವಾದರೆ ಮಾಧ್ಯಮ ರಂಗಕ್ಕೆ ಪಾವಿತ್ರ್ಯವೇ ಇಲ್ಲದಂತಾಗುತ್ತದೆ.ಇವತ್ತು ಜನ ರಾಜಕಾರಣಿಗಳನ್ನು ಯಾಕೆ ಕೆಟ್ಟದಾಗಿ ನೋಡುತ್ತಾರೆ. ಸಹಜವಾಗಿಯೇ ಬಹುತೇಕರು ಸ್ವಜನ ಪಕ್ಷಪಾತ ಮಾಡುತ್ತಾರೆ. ಹೀಗಾಗಿ ಅವನಾ? ಅಯ್ಯೋ ಅವರು ಗೆದ್ದರೂ ಒಂದೇ ಸೋತರೂ ಒಂದೇ ಬಿಡ್ರಿ. ಗೆದ್ದರೆ ತಮ್ಮ –ತಮ್ಮ ಹಿಂಬಾಲಕರ ಮನೆ ಉದ್ಧಾರವಾಗುವಂತೆ ಮಾಡುತ್ತಾರೆ. ಸೋತರೆ ಮತ್ತೋಬ್ಬರು ಬಂದು ಅದೇ ಕೆಲಸ ಮಾಡುತ್ತಾರೆ ಎಂದು ಬಿಡುತ್ತಾರೆ. ಒಂದು ಕಾಲದಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ನೆಲೆಯಾಗಿದ್ದು ಈ ಭಾವನೆ ಇವತ್ತು ಮಾಧ್ಯಮ ಲೋಕದ ಮೇಲೆ ಆವರಿಸಿದೆ. ಅಯ್ಯೋ ಆ ಪೇಪರಾ? ಆ ಜೀವಿಯಾ ? ಅದು ಇಂತಹವರ ಪರವಿಂದು ಜನನಿರರ್ಗಳವಾಗಿ ಮಾತನಾಡುತ್ತಾರೆ. ಹಲವು ವರ್ಷಗಳ ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ. ಮಾಧ್ಯಮ ಲೋಕದ ಜನರೆಂದರೆ ಅವರನ್ನು ಗೌರವದಿಂದ ನೋಡುವ ಕಾಲವಿತ್ತು .ಆದರೆ ಈಗ ರೀ ನೀವೇನೇ ಮಾಡಿದರೂ ಅವರು ಇಂತಹವರ ಪರವಾಗಿಯೇ ಬರೆಯುತ್ತಾರೆ. ಇಂತಹವರ ವಿರುದ್ಧವಾಗಿಯೇ ಬರೆಯುತ್ತಾರೆ ಎಂದು ಸುಲಭವಾಗಿ ಜನ ತೀರ್ಪು ನೀಡುತ್ತಾರೆ. ಇವತ್ತು ಮಾಧ್ಯಮ ಎಂಬುದು ರಂಗವಾಗಿಲ್ಲ ಬದಲಿಗೆ ಉದ್ಯಮವಾಗಿದೆ. ಈ ಪ್ರಶ್ನೆಯನ್ನು ಪ್ರಾಮಾಣಿಕವಾಗಿ ಆತ್ಮಾವ ಲೋಕನ ಮಾಡಲೇಬೇಕಾದ ಅಗತ್ಯವಿದೆ. ಇಂದಿನ ಜನತೆ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಅವಲೋಕನ ಮಾಡಿ ಸಮಾಜದ ಸುಧಾರಣೆಯ ಕಡೆ ಕೆಲಸ ಮಾಡುವ ಪತ್ರಿಕೆಗಳು ಯಾವುದು ಉಳಿದಿಲ್ಲ. ಬದಲಾಗಿ ರಸಭರಿತವಾದ ಮಸಾಲೆ ಸುದ್ಧಿಗಳ ಕಡೆ ಕೇಂದ್ರಿಕರಿಸುತ್ತಿರುವ ಒಂದಿಷ್ಟು ಮಾಧ್ಯಮಗಳು ರಾರಾಜಿಸುತ್ತಿವೆ. ಇದೇ ರೀತಿಯಲ್ಲಿ ಪತ್ರಿಕೋದ್ಯಮ ಮುಂದುವರೆದರೆ ಇನ್ನು  ದಶಕಗಳಲ್ಲಿ ಪತ್ರಿಕೋದ್ಯಮವೂ ಕೇವಲ ಉದ್ಯಮಕ್ಕಷ್ಟೇ ಸೀಮಿತವಾಗಿ ಅದರ ಮೌಲ್ಯ ಕಳೆದುಕೊಂಡು  ನೆಲಕ್ಕಚ್ಚಲಿದೆ. ಹಾಗಾಗದಿರಲು ಬಿಡರೋಣ ಈ ಪತ್ರಿಕೋದ್ಯಮ ದಿನದಿಂದಲೆ ಈ ದಿನದ ಮೌಲ್ಯವನ್ನು ಉಳಿಸಲು ಪ್ರಯತ್ನಿಸೋಣ.
                                                           ದಯಾನಂದ ಎಂ
                                                           ಪತ್ರಕರ್ತರು 

Comment

Related News