ಕೆಂಭಾವಿ ಸಮೀಪ ನಗನೂರ ಗ್ರಾಮದ ಶ್ರೀ ಶರಣಬಸವೇಶ್ವರ ದಾಸೋಹ ಮಠದಲ್ಲಿ ನಡೆದ 16 ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ

ಕೆಂಭಾವಿ.: ಪ್ರತಿ ವರ್ಷ ಬಹು ದೊಡ್ಡ ಮಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಬಡ ಕುಡುಂಬಗಳ ಆರ್ಥಿಕ ಹೊರೆಯನ್ನು ತಡೆಯುವುದರೊಂದಿಗೆ ದಾಸೋಹ ಮಠದ ಪೀಠಾಧಿಕಾರಿಗಳಾದ ಪೂಜ್ಯ ಶರಣಪ್ಪ ಶರಣರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದು ಶಹಾಪುರ ಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು. 
ಪಟ್ಟಣದ ಸಮೀಪ ನಗನೂರ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ದಾಸೋಹ ಮಠದಲ್ಲಿ ಹಮ್ಮಿಕೊಂಡ 16 ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  ಸಾಮೂಹಿಕ ಮದುವೆಗಳನ್ನು ಹಮ್ಮಿಕೊಳ್ಳುವದರಿಂದ ಸಾಮರಸ್ಯ ವೃದ್ಧಿಯಾಗುತ್ತದೆ. ನಮ್ಮ ನಾಡು ಶರಣರ ನಾಡು, ಬೃಹತ್ತ ಪ್ರಮಾಣದಲ್ಲಿ ಸಾಮೂಹಿಕ ಮದುವೆಗಳನ್ನು ಏರ್ಪಡಿಸುವುದರ ಮೂಲಕ ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಜಾತಿ ಪದ್ದತಿಗೆ ಕಡಿವಾಣ ಹಾಕಿದಂತಾಗಿದೆ. ಇಂದು ಹಿಂದುಳಿದ ವರ್ಗಗಳ ಅನೇಕ ಜ್ಯೋಡಿಗಳ ಪವಿತ್ರ ಬಂಧನವನ್ನು ಏಪೃಡಿಸಿರುವುದು ಪೂಜ್ಯ ಶರಣಪ್ಪ ಶರಣರ, ನಗನೂರ ಹಾಗೂ ಖಾನಾಪುರ ಜನರ ಶ್ರೇಷ್ಠ ಸಾಧನೆ ಎಂದು ಬಣ್ಣಿಸಿದರು.
ಕಾರ್ಯಕ್ರಮ ಭಾಗವಹಿಸಿ  ಮಾತನಾಡಿದ ಲೋಕಸಭಾ ಸದಸ್ಯ ಬಿ.ವಿ ನಾಯಕ್ ಮಠ ಮಾನ್ಯಗಳಲ್ಲಿ ಇಂಥಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಜನತೆಯಲ್ಲಿ ಶಾಂತಿ ಸೌಹಾರ್ಧತೆ, ಸಾಮರಸ್ಯ ಮೂಡುತ್ತದೆ. ಸಾಮೂಹಿಕ ಮದುವೆಗಳನ್ನು ಮಾಡುವದರಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು,  ಎಂದು ಹೇಳಿದರು. 
ಕಾರ್ಯಕ್ರಮದ ಪ್ರಾಸ್ತಾವಿಕ ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ್ ಮಾತನಾಡಿದರು. ಸಹಾಯಕ ಆಯುಕ್ತ ಶಂಕ್ರಣ್ಣ.ಎನ್ ವಣಿಕ್ಯಾಳ ಮಾತನಾಡಿದರು. ಈ ಸಂದರ್ಭದಲ್ಲಿ 67 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೀರಭದ್ರ ಶಿವಾಚಾರ್ಯರು, ಸನ್ನಿಧಾನವನ್ನು ಮರುಳಾರಾಧ್ಯ ಶಿವಾಚಾರ್ಯರು, ಸಮ್ಮುಕವನ್ನು ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಸೂಗುರೇಶ್ವರ ಶಿವಾಚಾರ್ಯರು ವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ದಾಸೋಹ ಮಠದ ಪೂಜ್ಯ ಶರಣಪ್ಪ ಶರಣರು ವಹಿಸಿದ್ದರು.  ಚಾಮನಾಳದ ಸಿದ್ದಲಿಂಗ ಮಠದ ಬಸಯ್ಯ ಸ್ವಾಮಿಗಳು, ನಗನೂರಿನ ಖಂಡಪ್ಪ ತಾತ, ಸ.ಕ.ಇ ಉಪ ನಿರ್ಧೇಶಕ ಸುಬ್ರ ನಾಯಕ, ಯಾದಗಿರಿ ಜಿಪಂ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ, ನಗನೂರ ತಾಪಂ ಸದಸ್ಯ ಶ್ವೇತಾ ಗುರುನಾಥ ಅಪ್ಪಾಗೋಳ್, ನ್ಯಾಯವಾದಿ ಹಣಮೆಗೌಡ ಮರಕಲ್, ಗ್ರಾಪಂ ಅಧ್ಯಕ್ಷ ಶಾಂತಣ್ಣ ಚನ್ನೂರು, ಶಿವರಾಜ್ ಸಾಹು ಬೂದೂರ, ಎಸ್.ಎಸ್ ದೇಸಾಯಿ, ಅಶೋಕ ಗೂಗಲ್, ಹಳ್ಳೆಪ್ಪ ಹವಲ್ದಾರ, ಶರಣಪ್ಪ ದೇಶಪಾಂಡೆ, ಭೋಜಪ್ಪಗೌಡ ಪೊ.ಪಾಟೀಲ್, ಜಗದೀಶ ಶರಣರು, ಶ್ರೀಮಂತ ತಿಪ್ಪಶೆಟ್ಟಿ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.


 

Comment

Related News