ನಗನೂರ ಗ್ರಾಮದಲ್ಲಿ ಸಾಮೂಹಿಕ ಮದುವೆ ಹಿನ್ನಲೆಯಲ್ಲಿ ಶಾಲೆಗೆ ಅನಧಿಕೃತ ರಜೆ

ಕೆಂಭಾವಿ: ನಗನೂರ ಗ್ರಾಮದಲ್ಲಿ ಸಾಮೂಹಿಕ ವಿವಾಹ ಹಿನ್ನಲೇಯಲ್ಲಿ ್ಲ ಇಂದು ಸೋಮವಾರ ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಗೆ ಅನಧಿಕೃತ ರಜೆ ಶಾಲೆ ನಡಿಸದೆ ಇಬ್ಬರೂ ಶಿಕ್ಷಕರು ರಜೆ ಚೀಟಿ ಬರೆದು ಹಾಜರಿ ಪುಸ್ತಕದಲ್ಲಿಟ್ಟು ರಜೆ ಕೂಡ ಹಾಜರಿಯಲ್ಲಿ ನಮೂದಿಸದೇ ಹಾಗೆ ಬಿಟ್ಟು ಹೋಗಿದ್ದಾರೆ. ಶಾಲೆಯಲ್ಲಿ ಇದ್ದ ಇಬ್ಬರ ಶಿಕ್ಷಕರಿಗೆ ಕೇಳಿದರೆ ನಮಗೆ  ಲಿಖಿತ ರೂಪದಲ್ಲಿ ಪ್ರಭಾರವಹಿಸಿಲ್ಲ. ಆದ ಕಾರಣ ನಾವು ಹಾಜರಿಯಲ್ಲಿ ರಜೆಯನ್ನು ನಮೂದಿಸಿಲ್ಲ ಎಂದು ಹೇಳುತ್ತಾರೆ.
 ಈ ಶಾಲೆಯಲ್ಲಿ 1 ರಿಂದ 7 ತರಗತಿಯವರೆಗೆ ಶಾಲೆ ನಡೆಯುತ್ತಿದ್ದು, 360 ಮಕ್ಕಳಿದ್ದು, ಗ್ರಾಮದ ಮಧ್ಯದಲ್ಲಿಯೇ ಈ ಶಾಲೆಯಿದೆ. ಈ ಶಾಲೆಯ ಸ್ಥತಿ ಹೀಗಾದರೆ ಒಳಗೆ ಇದ್ದ ಶಾಲೆಗಳ ಗತಿ ಅದೋಗತಿಗೆ ಹೋಗಿದೆ. ಇದರ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಎಷ್ಟು ಗಮನ ಹರಿಸುತ್ತಾರೆ ಎಂಬುದಕ್ಕೆ ಇದೆ ಸಾಕ್ಷಿಯಾಗಿದೆ. ಇಂದು ಈ ಗ್ರಾಮದಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಉದ್ಘಾಟನೆಗೆ ಜಿಲ್ಲಾಧಿಕಾರಿಗಳು, ಸಂಸದರು, ಶಾಸಕರು, ಜಿ.ಪಂ ಉಪಾಧ್ಯಕ್ಷರು, ಕಾರ್ಯಕ್ರಮಕ್ಕೆ  ಬರುತ್ತಾರೆ ಹಾಗೂ ನಮ್ಮ ಶಾಲಾ ಆವರಣದ ಮುಂದೆಯೇ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯುತ್ತಿದೆ ಎಂದು ಗೊತ್ತಿದ್ದರೂ ಶಿಕ್ಷಕರು ಗೈರಾಜರಿಯಿದ್ದು, ಸ್ಥಳಿಯ ಸಾಂದರ್ಭಿಕ ರಜೆ ಮಾಡದೇ ಇರುವುದು ಸರಿಯಲ್ಲ.
 ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಉಪನಿದೇರ್ಶಕರಿಗೆ , ದೂರು ಹೋದ ಪ್ರಯುಕ್ತ  ಶಾಲೆಯು ನಡೆಯದೆ ಇರುವುದು ಶಿಕ್ಷಕರು ಗೈರಾಜರಿಯಾಗಿದ್ದು ನಾನು ನೋಡಿದ್ದೇನೆ ಹಾಜರಿ ಪುಸ್ತಕದಲ್ಲಿ ನಮೂದಿಸಿಲ್ಲ. ಕಾರಣ ವರದಿ ಮಾಡುತ್ತೇನೆ ಎಂದು ಸಮೂಹ ಸಂಪನ್ಮೂಲ ಆಧಿಕಾರಿ ಸಿದ್ದಣ್ಣ ಧನಗೊಂಡ ( ಸಿ ಆರ್ ಪಿ)  ಶಾಲೆಗೆ ಭೇಟಿಕೊಟ್ಟು ಮಾಧ್ಯಮದವರಿಗೆ ತಿಳಿಸಿದ್ದಾರೆ.  
“ ಸ್ಥಳೀಯ ರಜೆ ಮಾಡಬೆಕಾಗಿತ್ತು ಆದರೆ ಸ್ಥಳೀಯ ರಜೆ ಮಾಡದೇ ಅನಧಿಕೃತವಾಗಿ ಗೈರಾಜರಿ ಹಾಗಿ ಗ್ರಾಮದಲ್ಲಿ ಕಾರ್ಯಕ್ರಮ ಇದ್ದಾಗ ಈ ಪ್ರಕಾರ ಮಾಡುವುದು ಸರಿಯಲ್ಲ. ಸಿ ಆರ್ ಪಿ ಯವರಿಂದ ವರದಿ ಕೇಳಿದ್ದೆನೆ ಹಾಗೂ ಮುಖ್ಯ ಶಿಕ್ಷಕಿ ಶಾಲಾ ಪ್ರಾರಂಬವಾದಗನಿಂದಲೂ ಗೈರಾಜರಿಯಾಗಿದ್ದು ಮಿಂಚಿನ ಸಂಚಾರ ತಂಡ ವರದಿ ಮಾಡಿದೇ ಇನ್ನೂ ಉಪನಿದೆರ್ಶಕರಿಂದ  ಕ್ರಮ ಕೈಗೊಂಡಿಲ್ಲ”
                                                                ನಾಗರತ್ನ 
                                                            ಕೇತ್ರ ಶಿಕ್ಷಣಾಧಿಕಾರಿ     
 

Comment

Related News