ಹೇಮರಡ್ಡಿ ಮಲ್ಲಮ್ಮ ಶಾಲಾ ಮೈದಾನದಲ್ಲಿ ವಿಶ್ವ ಯೋಗ ದಿನಾಚರಣೆ

ಕೆಂಭಾವಿ: ನಮ್ಮ ಆರೋಗ್ಯ ನಮಗೆ ಅಮುಲ್ಯವಾದ ವಸ್ತು, ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಆರೋಗ್ಯವಾಗಿರಲು ಬಯಸುತ್ತಾನೆ ಹಾಗಾಗಿ ಉಳಿದ ಯಾವುದೇ ಸಂಪತ್ತಿಗೂ ಆರೋಗ್ಯ ಸಂಪತ್ತು ಮಿಗಿಲಾಗಿದ್ದು ಎಂದು ಮೋಹನರಡ್ಡಿ ಡಿಗ್ಗಾವಿ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಶಾಲಾ ಮೈದಾನದಲ್ಲಿ ವಿಶ್ವ ಯೋಗದಿನ ಅಂಗವಾಗಿ ಕೆಂಭಾವಿಯ ಸಹಜ ಸ್ಥಿತಿ ಯೋಗ,  ಆರ್ಟ ಆಫ್ ಲಿವಿಂಗ್, ಹಾಗೂ ವಿವೇಕ ಜಾಗೃತ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಯೋಗದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಯೋಗವು ಭಾರತಿಯರ ಮನೆಮಾತು ನಮ್ಮ ಪೂರ್ವಜರಾದ ಋಷಿ ಮುನಿಗಳಿಂದ ಬಳುವಳಿಯಾಗಿ ಬಂದಿರುತ್ತದೆ. ವೇದೋಪನಿಷತ್ತಿನಷ್ಟು ಪ್ರಾಚಿನತೆಯ ಇತಿಹಾಸ ನಮ್ಮ ಯೋಗಕ್ಕೆ ಇದೆ ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ಶಿಕ್ಷಕ ಶರಣಯ್ಯ ಸ್ವಾಮಿ ಹಿರೂರ ಮಾತನಾಡಿ ಮನುಷ್ಯನ ಸುಖದ ಮೂಲ ಸದೃಢ ಆರೋಗ್ಯ. ಇದು ಮಾನವನಿಗೆ ಹುಟ್ಟಿನಿಂದಲೇ ನಿಸರ್ಗದತ್ತವಾಗಿ ಬಂದ ಕೊಡುಗೆ. ಅದನ್ನು ಕಾಪಾಡಿಕೊಂಡು ಹೋಗಲು ನಮ್ಮ ಪೂರ್ವಜರು ಕಂಡುಕೊಂಡ ನಿಸರ್ಗದತ್ತ ಮದ್ದು ಈ ಯೋಗ ಎಂದು ಹೇಳಿದರು.
ನಸುಕಿನ 5-30 ರಿಂದ 7 ಗಂಟೆ ವರೆಗೆ ನಡೆದ ಯೋಗ ತರಬೇತಿಯಲ್ಲಿ ಉಸಿರಾಟ ಕ್ರಿಯೇ, ಆಸನಗಳು, ಮುದ್ರೆಗಳು ಕುರಿತು ಪರಿಚಯಾತ್ಮಕ ಶಿಕ್ಷಣವನ್ನು  ಆರ್ಟ ಆಫ್ ಲಿವಿಂಗ್‍ನ ಯೋಗ ಶಿಕ್ಷಕ ಶಿವಾನಂದ ಗುರುಜಿಯವವರು ಯೋಗದ ಪ್ರಾಯೋಗಿಕತೆಯೊಂದಿಗೆ ಹೇಳಿಕೊಟ್ಟರು. ನಂತರ ಶಿಭಿರಾರ್ಥಿಗಳಿಂದ ಸೂಸ್ಥಿರ ಆರೋಗ್ಯ ಸಮೃದ್ಧ ಭಾರತ ನಿರ್ಮಾಣ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ  ಗುಡುದಯ್ಯ ಡಾವಣಗೇರಿ, ಪರ್ವತರಡ್ಡಿ ಯಾಳಗಿ, ಡಾ. ಗುರುಬಸವರಾಜ ಹಿರೆಮಠ, ಡಾ. ಪರ್ವತರಡ್ಡಿ ಗೊರಗೊರಿ,  ಪ್ರಭು ಮನಗೂಳಿ,  ಉಮಾದೇವಿ ಪಾಟೀಲ್, ಶ್ರೀಶೈಲ ಪಾಸೋಡಿ, ಕಲ್ಯಾಣಪ್ಪ ಅಡಕಿ, ಜಯಶ್ರೀ ಹಿರೇಮಠ, ಡಾ. ಶೈಲಾ ಹಿರೇಮಠ, ರಾಜೇಶ್ವರಿ ನವಣಿ,  ನರಸಿಂಹ ವದ್ದೆ,  ರಾಮನಗೌಡ ಬಿರಾದಾರ, ಮಂಜುಳಾ ಹಿರೇಮಠ, ಜ್ಯೋತಿ ಹಿರೇಮಠ, ಸುಜಾತ ಪಾಟೀಲ್, ಈರಮ್ಮ ಹಿರೇಮಠ, ನಂದಮ್ಮ ಹಿರೇಮಠ,  ಶಂಕರಗೌಡ ಬಿರಾದಾರ, ವಿಜಯರಡ್ಡಿ  ಸೇರಿದಂತೆ ಸುಮಾರು 100 ಕ್ಕೂ ಹಚ್ಚು ಜನ ಭಾಗವಹಿಸಿದ್ದರು.
 

Comment

Related News