ಭರದಿಂದ ಸಾಗಿದ ನಾರಾಯಣಪುರ ಅಗ್ನಿ ದುರಸ್ತಿ ಕಾಲುವೆ.

ಕೆಂಭಾವಿ:ಇತ್ತಿಚಿಗೆ ಎರಡು ತಿಂಗಳ ಹಿಂದೆ ಸಮೀಪದ ಅಗ್ನಿ ಗ್ರಾಮದ ಬಳಿಯ ಕುಸಿತವಾಗಿದ್ದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ದುರಸ್ತಿ ಕಾಮಗಾರಿಯ ಸ್ಥಳಕ್ಕೆ ನಾರಾಯಣಪುರ ಸಿ.ಇ. ಎಚ್ ಕೃಷ್ಣೇಗೌಡ ಅವರು ಭೇಟಿ ನೀಡಿ ಕಾಮಗಾರಿಯ ಉತ್ತಮ ಗುಣಮಟ್ಟ ಕಾಪಾಡಬೆಕೇಂದು ಹೇಳಿದರು. 
ನಾರಾಯಣಪುರ ಎಡದಂಡೆ ನಾಲೆಯ 61.72 ಕೀ.ಮೀಟರ್ ಬಳಿ ಕೇಲ ತಿಂಗಳ ಹಿಂದೆ ಕಾಲುವೆಯು ಬಿರಕು ಬಿಟ್ಟು ಕುಸಿದ ಹಿನ್ನಲೆಯಲ್ಲಿ ಪುನ: ದುರಸ್ತಿ ಕಾರ್ಯ ಭರದಿಂದ ಸಾಗಿದ್ದು. ಕಾಲುವೆಯಲ್ಲಿ ಕುಸಿತವಾಗಿರುವ ಆರ್‍ಸಿಸಿ ಲೈನಿಂಗ ತೆರವು ಕಾರ್ಯ ನಡೆದಿದೆ. ಕುಸಿತದ ಭಾಗದಲ್ಲಿನ ಮಣ್ಣನ್ನು ತೆಗೆದು ಹಾಕಲಾಗುತ್ತಿದ್ದು. ಬಳಿಕ ಬೆಡ್‍ನಿಂದ ತಳಭಾಗದಲ್ಲಿ 1.5 ಮೀಟರನಷ್ಟು ಮಣ್ಣನ್ನು ತೆಗೆದು ಅಲ್ಲಿಂದಲೇ ಮುರುಮ್ ತುಂಬಿಕೊಂಡು ರೂಲಿಂಗ ಮಾಡಲಾಗುವುದು ಎಂದು ತಿಳಿಸಿದರು. 
ಇದಕ್ಕೆ ಬೇಕಾಗುವ ಮುರಮ್ ಸೇರಿದಂತೆ ಇತರ ಸಾಮಗ್ರಿಗಳ ಶೇಖರಣೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು. ಸುಮಾರು ನಾಲ್ಕೂ ವರ್ಷಗಳ ಹಿಂದೆ ಇ.ಆರ್.ಎಮ್ ಯೋಜನೆಯಡಿ ಈ ಮುಖ್ಯ ಕಾಲುವೆಯನ್ನು ನವೀಕರಿಸಲಾಗಿತ್ತು. ಆದರೆ ನವೀಕರಣದ ಬಳಿಕವು ಇಲ್ಲಿನ ಮಣ್ಣಿನ ಪ್ರಭಾವದಿಂದ ಪದೆ ಪದೆ ಇದೇ ಕಿ.ಮೀ. ಭಾಗಗಳಲ್ಲಿ ಕುಸಿತವಾಗುತ್ತಿದ್ದು ಇದಕ್ಕೆ ಶಾಶ್ವತ  ಪರಿಹಾರವನ್ನು ಕಂಡುಹಿಡಿಯಲಾಗುವುದು ಎಂದು ತಿಳಿಸಿದರು. ಕಾರ್ಯನಿರ್ವಾಹಕ ಅಭಿಯಂತರಾದ ಪೋದ್ದಾರ. ಸಹಾಯಕ ಕಾರ್ಯನಿರ್ವಾಹಕ ಹೆಚ್ ರವಿಕುಮಾರ. ಜೆಟ್ಟೆಪ್ಪ. ಅನೀ¯ ಪಾಟೀಲ್ ಇದ್ದರು. 
ಕೋಟ್ 
ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ದುರಸ್ತಿ ಕಾಮಗಾರಿ ಭರದಿಂದ ಹಾಗೂ ಗುಣಮಟ್ಟದಿಂದ ನಡೆಯುತ್ತಿದ್ದು. ಇಪ್ಪತ್ತು ದಿನಗಳಲ್ಲಿ ಕಾಲುವೆ ಕಾಮಗಾರಿ ಪೂರ್ಣಗೊಳ್ಳಲಿದೆ.    
ಹೆಚ್.ಕೃಷ್ಣೇಗೌಡ. ಮುಖ್ಯ ಎಂಜಿನಿಯರ. ನಾರಾಯಣಪುರ 
 

Comment

Related News