ಪತ್ರಕರ್ತ ಪವನ ಕುಲ್ಕರ್ಣಿ.

ಕೆಂಭಾವಿ: ಬೆಂಗಳೂರು ಪತ್ರಕರ್ತರ ವೇದಿಕೆ ಕೊಡಮಾಡುವ 2018 ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ “ಹೂಗಾರ ಸ್ಮಾರಕ” ಮಾಧ್ಯಮ ಪ್ರಶಸ್ತಿಗೆ ಕೆಂಭಾವಿ ಪಟ್ಟಣದ ಪ್ರಜಾವಾಣಿ ಪತ್ರಿಕೆಯ ವರದಿಗಾರ ಪವನ ಕುಲ್ಕರ್ಣಿಯವರು ಭಾಜನರಾಗಿದ್ದು ವಲಯದ ಪತ್ರಿಕಾ ಬಳಗದಲ್ಲಿ ಸಂತಸ ತಂದಿದೆ.
ಜುಲೈ 1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಪತ್ರಿಕಾ ದಿನಾಚರಣೆಯ ಸಮಾರಂಭದಲ್ಲಿ ವರದಿಗಾರ ಪವನ ಕುಲ್ಕರ್ಣಿಯವಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುತ್ತಿದ್ದು, ಸಮಾರಂಭದಲ್ಲಿ ದೂರದರ್ಶನ ಕೇಂದ್ರದ ಹಿರಿಯ ನಿರ್ಧೇಶಕ ಮಹೇಶ ಜ್ಯೋಶಿ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಚ್ ದೊರೆಸ್ವಾಮಿ, ನಿವೃತ್ ಪೊಲೀಸ್ ಕಮಿಶನರ್ ಜ್ಯೋತಿಪ್ರಕಾಶ್ ಮಿರ್ಜಿ, ಮಹಿಳಾ ಆಯೋಗದ ಅಧ್ಯಕ್ಷೆ ಕೆ.ಜಿ. ನಾಗಲಕ್ಷ್ಮೀಬಾಯಿ ಹಾಗೂ ಇತರರು ಸಾಕ್ಷಿಯಾಗಲಿದ್ದಾರೆ.
ಹೂಗಾರ ಸ್ಮಾರಕ ಪ್ರಶಸ್ತಿಗೆ ಪವನ ಕುಲ್ಕರ್ಣಿಯವರು ಭಾಜನರಾಗಿದ್ದಕ್ಕೆ ಯಾದಗಿರಿ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಸಂಜೀವರಾವ್ ಕುಲ್ಕರ್ಣಿ ಹಾಗೂ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು, ಕೆಂಭಾವಿ ವಲಯದ ಮಾಧ್ಯಮ ಮಿತ್ರರು ಹರ್ಷ ವ್ಯಕ್ತಪಡಿಸಿದ್ದಾರೆ.
 

Comment

Related News