ಪಟ್ಟಣದಲ್ಲಿ ಕಾರ ಹುಣ್ಣಿಮೆ ಹಬ್ಬಕ್ಕೆ ಎತ್ತುಗಳ ಶೃಂಗಾರಕ್ಕೆ ಸಾಮಾನುಗಳ ಮಾರಾಟ

ಕೆಂಭಾವಿ: ಉತ್ತರ ಕರ್ನಾಟಕದ ರೈತರ ಜನಪ್ರೀಯ ಹಬ್ಬಗಳಲ್ಲಿ ಒಂದಾಗಿದ್ದು, ಹಾಗೂ ರೈತರ ಪ್ರಥಮ ಹಬ್ಬವು ಇದಾಗಿದ್ದು,  ಗ್ರಾಮೀಣ ಪ್ರದೇಶಗಳಲ್ಲಿಯು ಕಾರ ಹುಣ್ಣಿಮೆ ಬಂತೆಂದರೆ ಸಾಕು ರೈತರ ಮೊಗದಲ್ಲಿ ಎಲ್ಲಿಲ್ಲದ ಸಂತೋಷ ಮೂಡಿ ಬರುತ್ತದೆ. ಅದರಂತೆಯೇ ಕೃಷಿ ಚಟುವಟಿಕೆಯಲ್ಲಿ ಜೊತೆಗಾರ ಹಾಗೂ ರೈತನ ಸಂಗಾತಿಯಾಗಿರುವ ಬಸವಣ್ಣನ(ಎತ್ತುಗಳ) ಶೃಂಗಾರ ಕಾಯಕದಲ್ಲಿ ರೈತರು ತೊಡಗಿಸಿಕೊಳ್ಳುವ ಮೂಲಕ ಸಂಭ್ರಮದ ಸಡಗರದಿಂದ ಕಾರಹುಣ್ಣಿಮೆಯನ್ನು ಆಚರಿಸುತ್ತಾರೆ.
ಕಾರ ಹುಣ್ಣಿಮೆ ದಿನದಂದು ಬೆಳಗಿನ ಜಾವದಲ್ಲಿ ಎತ್ತುಗಳಿಗೆ ಸ್ನಾನ ಮಾಡಿಸಿ ಮಧು ಮಗನಂತೆ ಸಿಂಗರಿಸುತ್ತಾರೆ. ನಂತರ ರೈತರ ನಿತ್ಯದ ಒಡನಾಡಿಯಾಗಿದ್ದು, ಇದರಿಂದ ಬದಲಾಗುವ ವಾತಾವರಣದಿಂದ ಎತ್ತುಗಳಿಗೆ ಯಾವುದೇ ತೊಂದರೆಯಾಗದಿರಲಿ ಹಾಗೂ ಮಳೆ ಬೆಳೆಯು ಚೆನ್ನಾಗಿ ಆಗುತ್ತದೆ  ಎನ್ನುವುದು ರೈತರ ನಂಬಿಕೆಯಾಗಿದೆ.
ಎತ್ತುಗಳ ಶೃಂಗಾರ: ಕಾರಹುಣ್ಣಿಮೆ ದಿನದಂದು ರೈತರು ಬೆಳಗಿನ ಜಾವದಿಂದಲೇ ಎತ್ತುಗಳಿಗೆ ಎಣ್ಣೆ ಹಚ್ಚಿ ಮತ್ತು ಎತ್ತುಗಳ ಕೋಡುಗಳಿಗೆ ಬಣ್ಣ ಹಚ್ಚಿ ಸಮೀಪದ ಎತ್ತುಗಳನ್ನು ಕೆರೆ ಅಥವಾ ಬಾವಿಯ ತೀರಕ್ಕೆ ಕರೆದ್ಯೊದು ಶುಭ್ರವಾಗಿ ಸ್ನಾನ ಮಾಡಿಸಿ ಅವುಗಳಿಗೆ ಮಗಡ, ಘಂಟೆ, ಹಣೆಕಟ್ಟು, ಕೊರಳುಮಣಿ, ಮಣಿಘಂಟೆ, ಶಂಕದಳ್ಳು, ಇನ್ನೂ ಅನೇಕ ಸಾಮಾಗ್ರೀಗಳಿಂದ ಸಿಂಗಾರಿಸಿ ಅವುಗಳನ್ನು ನೋಡುತ್ತಾ ಮನೆಯವರೆಲ್ಲರೂ ಸಂತೋಷಪಡುತ್ತಾರೆ.
ನಂತರ ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷವಾಗಿ ಸಿದ್ದಪಡಿಸಿದ ಹೋಳಿಗೆ, ಉತ್ತತ್ತಿ, ಬಾಳೆಹಣ್ಣು, ಹಾಗೂ ಹಲವಾರು ಬಗೆಯ ರುಚಿಕರವಾದ ಸಿಹಿಯಾದ ಪದಾರ್ಥಗಳನ್ನು ತಯಾರಿಸಿ ಶೃಂಗಾರಗೊಂಡಿರುವ ಎತ್ತುಗಳಿಗೆ ಪೂಜೆಯನ್ನು ಮಾಡಿ ನೈವೇಧ್ಯವಾಗಿ ನೀಡುತ್ತಾರೆ.
ಕರಿ ಹರಿಯುವುದು: ಸಾಯಂಕಾಲದ ವೇಳೆಯಲ್ಲಿ ಶೃಂಗಾರಿಸಿದ ಎತ್ತುಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಊರಿನ ಅಗಸಿಗೆ ಬಂದು ತಲುಪುತ್ತವೆ. ನಂತರ ಅವುಗಳಿಗೆ ಪೂಜೆ ಸಲ್ಲಿಸಿ ಎತ್ತುಗಳನ್ನು ಕರಿ ಹರಿಯುದಕ್ಕೆ ಬಿಡುತ್ತಾರೆ.
“ ಕಾರ ಹುಣ್ಣಿಮೆಯ ಹಬ್ಬದ ಪ್ರಯುಕ್ತ ಎತ್ತುಗಳಿಗೆ ಅಲಂಕರಿಸುವ ಸಾಮಾನುಗಳನ್ನು ಮಾರಾಟ ಮಾಡಲು ಬೆಳಿಗಿನ ಜಾವ ತಾಳಿಕೋಟೆನಿಂದ ಬಂದಿದ್ದೇನೆ. ಪಟ್ಟಣದಲ್ಲಿ ಸಾಮಾನುಗಳ ಮಾರಾಟ ಬಲು ಜೋರು ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.”
                                                                             ಸುಭಾಷ್ 
                                                                           ಮಾರಾಟಗಾರ  


 

Comment

Related News