ಚಂದ್ರಕಾಂತ ಹುಕ್ಕೇರಿ ಇವರ 58 ನೇ ಹುಟ್ಟು ಹಬ್ಬ

ಚಿಕ್ಕೋಡಿ :  ಪಟ್ಟಣದ ಸಮಾಜ ಸೇವಕರು ಹಾಗೂ ಲೆಕ್ಕಶಾಸ್ತ್ರ ತಜ್ಞರು ಆದ ಚಂದ್ರಕಾಂತ ಹುಕ್ಕೇರಿ ಇವರ 58 ನೇ ಹುಟ್ಟು ಹಬ್ಬವನ್ನು ಬಸವ ಸರ್ಕಲ್ ಹತ್ತಿರ ಇರುವ ಸರಕಾರಿ ವಸತಿ ನಿಲಯದಲ್ಲಿ ಇವರ ಅಭಿಮಾನಿಗಳು ಹಾಗೂ ಮಾನವ ಬಂಧುತ್ವ ವೇದಿಕೆಯ ಚಿಕ್ಕೋಡಿ ತಾಲೂಕಾ ಘಟಕದ ಪದಾಧಿಕಾರಿಗಳು ಆಚರಿಸಿದರು.
ಚಂದ್ರಕಾಂತ ಹುಕ್ಕೇರಿ ಇವರಿಗೆ ಹುಟ್ಟು ಹಬ್ಬದ ನಿಮಿತ್ಯ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಈ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆಯ ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾದ ಜೀವನ ಮಾಂಜರೇಕರ ಉಧ್ಘಾಟಿಸಿದರು. ಚಂದ್ರಕಾಂತ ಇವರ ಆಯುರಾರೋಗ್ಯಕ್ಕಾಗಿ ಗಣ್ಯ ಮಾನ್ಯರಿಂದ ಮೇಣದಬತ್ತಿ ಹಚ್ಚಿ ಶುಭಾಶಯಗಳನ್ನು ಕೋರಿದರು. ವಸತಿ ನಿಲಯದ ಮಕ್ಕಳಿಗೆ ನೋಟಬುಕ್ಕ ಪೆನ್ ಮತ್ತು ಸಿಹಿ ಹಂಚಲಾಯಿತು. ಈ ಸಂಧರ್ಭದಲ್ಲಿ ಚಂದ್ರಕಾಂತ ಹುಕ್ಕೇರಿ ಮಕ್ಕಳನ್ನುಧ್ಧೇಶಿಸಿ ಮಾತನಾಡಿ, ತಾವೆಲ್ಲರೂ ನನ್ನ ಹಾಗೆ ಬಡತನದಲ್ಲಿಯೇ ಇದ್ದವರು, ನಮ್ಮ ಕಾಲದಲ್ಲಿ ಬಡವರಿಗೆ ಶಿಕ್ಷಣ ಪಡೆಯಲು ಅವಕಾಶ ಇರಲಿಲ್ಲ ಕಾರಣ ನಾನು ಶಿಕ್ಷಣದಿಂದ ವಂಚಿತನಾಗಿದ್ದೇನೆ, ಆದರೆ ಈಗ ಸರಕಾರದಿಂದ ಬಡಜನರಿಗಾಗಿ ಸಾಕಷ್ಟು ಸೌಲಭ್ಯಗಳಿವೆ ಅವುಗಳ ಸದುಪಯೋಗ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಸ್ಥಾನಗಳನ್ನು ಗಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜೀವನ ಮಾಂಜರೇಕರ ಮಾತನಾಡಿ ಚಂದ್ರಕಾಂತ ಇವರು ತಮ್ಮ ಜೀವನದಲ್ಲಿ ಎಂದಿಗೂ ಅಡಂಬರವಾದ ಬದುಕನ್ನು ಮಾಡಲಿಲ್ಲ, ಯಾವಾಗಲೂ ಹಳೆಯದನ್ನು ಮರೆಯದೇ ಬಡ, ದೀನ, ದಲಿತ ಜನರಲ್ಲಿ ಭೇಧ-ಭಾವ ಮಾಡದೇ ಪ್ರೀತಿಯಿಂದ ಬದುಕುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಶ್ರೀ ಅಲ್ಲಮಪ್ರಭು ಅನ್ನದಾನ ಸಮಿತಿಯ ಮೂಲಕ ಹತ್ತು ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತ ಚಿಕ್ಕೋಡಿ ಭಾಗದಲ್ಲಿಯೇ ಮಾದರಿಯಾಗಿದ್ದಾರೆ. ಇವರ ಜೀವನದ ಅನುಭವದ ಮಾತುಗಳು ಹೊಸ ಪೀಳಿಗೆಗೆ ಆದರ್ಶಗಳಾಗಿವೆ ಎಂದು ಹೇಳಿದರು.
ಉದಯ ವಾಘಮೋರೆ ಮಾತನಾಡಿ ಚಂದ್ರಕಾಂತ ಹುಕ್ಕೇರಿಯವರು ಮನುಕುಲಕ್ಕೆ ಒಬ್ಬ ಮಾದರೀ ವ್ಯಕ್ತಿಗಳಾಗಿದ್ದಾರೆ. ಇವರ ಜೀವನದುದ್ದಕ್ಕೂ ಸಮಾಜದ ಏಳ್ಗೆಗಾಗಿ ಉತ್ತಮ ಕಾರ್ಯಗಳನ್ನೇ ಮಾಡಿದ್ದಾರೆ ವಿನಹ ತಮ್ಮ ಸ್ವಾರ್ಥಕ್ಕಾಗಿ ಏನೂ ಬಯಸಿದವರಲ್ಲ, ಈ ಕಾರಣದಿಂದ ಭಗವಂತನು ಇವರಿಗೆ ಉತ್ತಮ ಆರೋಗ್ಯವನ್ನು ಕೊಟ್ಟಿದ್ದಾನೆ. ಇವರ ಹಲವಾರು ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ನಾವು ಬಾಳಿದರೆ, ನಮ್ಮ ಜೀವನದಲ್ಲಿ ನಾವೂ ಸಹ ಒಬ್ಬ ಆದರ್ಶಪ್ರಾಯರಾಗಿ ಬದುಕಿ ಸಾರ್ಥಕ ಜೀವನ ಪಡೆಯಬಹುದಾಗಿದೆ, ಇವರು ಶತಾಯುಷಿಗಳಾಗಿ ಬಾಳಲು ನಾವೆಲ್ಲರೂ ಪರಮಾತ್ಮನಲ್ಲಿ ಪ್ರಾರ್ಥಿಸೋಣ ಎಂದರು.
ಈ ಸಂಧರ್ಭದಲ್ಲಿ ರಾಹುಲ ಮಾಳಗೆ, ವೆಂಕಟೇಶ ಕುರಣೆ, ರಾಹುಲ ರಜಪೂತ, ಪ್ರೀತಮ್ ಸೊಲ್ಲಾಪುರೆ, ಕಿರಣ ಆಲೂರೆ, ರೋಹಿತ ಜಯಕರ, ಅಜಿಂಕ್ಯ ಗಂಥಡೆ, ವಸತಿ ನಿಲಯದ ಸಿಬ್ಬಂದಿ ಹಾಗೂ ಹಲವಾರು ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.   


 

Comment

Related News