ಬೋಧನಗೆ ಅಗತ್ಯ ಶಿಕ್ಷಕರನ್ನು ನೇಮಿಸಿ: ಪಾಲಕರ ಒತ್ತಾಯ

ಕೆಂಭಾವಿ: ಕಳೆದ ಒಂದು ವಾರದಿಂದ ಪಟ್ಟಣದ ವಿವಿಧೆಡೆ ನಡೆಯುತ್ತಿದ್ದ ಹತ್ತನೆ ತರಗತಿ ಪೂರಕ ಪರೀಕ್ಷೆ ಗುರುವಾರ ಕೊನೆಗೊಂಡಿತು. ಪಟ್ಟಣದ ಬಾಲಕರ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಾಗೂ ಹೇಮರೆಡ್ಡಿ ಮಲ್ಲಮ್ಮ ಪ್ರೌಢ ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಮೂರು ಕೇಂದ್ರಗಳಲ್ಲಿ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆದರು ಎಂದು ಪರೀಕ್ಷಾ ಮೇಲ್ವಿಚಾರಕರು ತಿಳಿಸಿದರು. ಗುರುವಾರ ಹಿಂದಿ ವಿಷಯದ ಪರೀಕ್ಷೆ ನಂತರ ಹೊರಗೆ ಬಂದ ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪತ್ರಿಕೆ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು.
ವಿದ್ಯಾರ್ಥಿಗಳಲ್ಲಿ ಆತಂಕ-ಈ ಬಾರಿಯ ಪೂರಕ ಪರೀಕ್ಷೆಯನ್ನು ಜಿಲ್ಲಾಡಳಿತ ಅತೀ ಸೂಕ್ಷವಾಗಿ ಪರಿಗಣಿಸಿ ಸಿಸಿ ಟಿವಿ ಕಣ್ಗಾವಲಿನಲ್ಲಿ ಎಲ್ಲ ಪರೀಕ್ಷಾಕೇಂದ್ರಗಳಲ್ಲಿ ಪರೀಕ್ಷೆ ನಡೆಸಿದ್ದು ಇದು ಹಲವು ವಿದ್ಯಾರ್ಥಿಗಳಲ್ಲಿ ಅಸಮಧಾನ ಮೂಡಿದೆ.ಪರೀಕ್ಷೆಯಲ್ಲಿ ನಕಲು ತಡೆಯಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದು ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 3 ರಿಂದ 4 ಜನ ವಿವಿಧ ಹಂತದ ಜಾಗೃತ ದಳ ತಪಾಸಣೆ ನಡೆಸಿ ಅಕ್ರಮ ನಡೆಯದಂತೆ ಕ್ರಮ ಕೈಗೊಂಡಿತ್ತು.
ಪ್ರತಿ ವರ್ಷ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಕೊನೆಯ ಸ್ಥಾನ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಯಾದಗಿರಿ ಜಿಲ್ಲೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಜಿಲ್ಲಾಡಳಿತ ಹಲವು ಧಿಟ್ಟ ಕ್ರಮ ಕೈಗೊಂಡಿದೆಯಾದರೂ ನಿತ್ಯನಡೆಯುವ ವಿವಿಧ ವಿಷಯದ ಪಾಠ ಬೋಧನಗೆ ಅಗತ್ಯ ಶಿಕ್ಷಕರನ್ನು ನೇಮಿಸಬೇಕೆಂಬುದು ಹಲವು ಪಾಲಕರ ಒತ್ತಾಸೆಯಾಗಿದೆ.
ಬಸ್ಸಿನ ಕೊರತೆ-ಪೂರಕ ಪರೀಕ್ಷೆ ಬರೆಯಲು ಪಟ್ಟಣದ ವಿವಿಧ ಪರೀಕ್ಷಾ ಕೇಂದ್ರಕ್ಕೆ ವಲಯದ ಹಲವು ಗ್ರಾಮದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯ ಇಲ್ಲದೆಅನಿವಾರ್ಯವಾಗಿ ಖಾಸಗಿ ಟಂಟಂ ಹಾಗೂ ಕ್ರೂಸರ್ ವಾಹನಗಳಲ್ಲಿ ಆಗಮಿಸುತತ್ತಿದ್ದ  ದೃಶ್ಯ ಸಾಮಾನ್ಯವಾಗಿತ್ತು.

Comment

Related News