ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ಕಾಂಗ್ರೇಸ್ ಪಕ್ಷದ ಮತದಾರರು ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ

ಕೆಂಭಾವಿ:ಚುನಾವಣೆಯಲ್ಲಿ ಮತದಾರರು ತಾವೇ ಸ್ಪರ್ಧಿಸಿದ ರೀತಿಯಲ್ಲಿ ಕೆಲಸ ಮಾಡಿದ್ದರ ಫಲವಾಗಿ ಇಂದು ಶಹಾಪೂರ ಮತಕ್ಷೇತ್ರದಲ್ಲಿ  ದಾಖಲೆಯ ಅಂತರದ ಜಯ ಗಳಿಸಲು ಸಾಧ್ಯವಾಗಿದೆ ಇದಕ್ಕೆ ತಮಗೆ ಎಷ್ಟೆ ಅಭಿನಂದನೆಗಳನ್ನು ಸಲ್ಲಿಸಿದರೂ ಕಮ್ಮಿನೆ ಎಂದು ಶಾಹಾಪೂರ ಕ್ಷೇತ್ರದ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಆವರಣದಲ್ಲಿ ಶನಿವಾರ ಶಾಸಕ ದರ್ಶನಾಪೂರ ರವರು ಹಮ್ಮಿಕೊಂಡ ಕಾಂಗ್ರೇಸ್ ಪಕ್ಷದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ತಮ್ಮ ಅಭಿಮತವನ್ನು ವ್ಯಕ್ತಪಡಿಸುತ್ತಾ ಕ್ಷೇತ್ರದಲ್ಲಿ ಸುಮಾರು ಐದು ವರ್ಷಗಳಿಂದ ಕೆಂಭಾವಿ-ಶಾಹಪೂರ ವಲಯಗಳಲ್ಲಿ ಕುಡಿಯುವ ನೀರಿನ ಯೋಜನೆಗಳು, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಇತ್ಯಾದಿ ಮೂಲಭೂತ ಸೌಲಭ್ಯಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.  ಮತದಾರ ಪ್ರಭುಗಳಾದ ತಮ್ಮ ಭಾವನೆಗೆ ದಕ್ಕೆ ತರದಹಾಗೆ ಹಣಕಾಸಿನ ಲಭ್ಯತೆ ಆಧಾರದ ಮೇಲೆ ತಮ್ಮ ವಿಶ್ವಾಸ ಉಳಿಸುವಂತÀ ಕೆಲಸ ಮಾಡುವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಯಚೂರು ಸಂಸದ ಬಿ,ವಿ ನಾಯಕ ಮಾತನಾಡಿ ರಾಜ್ಯದಲ್ಲಿ ಐದು ವರ್ಷ ಕಾಂಗ್ರೇಸ್ ಆಡಳಿತಾವಧಿಯಲ್ಲಿ ಸಿದ್ಧರಾಮಯ್ಯನವರ  ಸರಕಾರ ಸಾಮಾಜಿಕ ನಾಯ್ಯ ನಿಷ್ಠೆಯಲ್ಲಿ ಹಿಂದೆಂದೂ ಕಾಣದ ಅಭಿವೃದ್ದಿ ಮಾಡಿದೆ, ಆದರೂ ರಾಜ್ಯದಲ್ಲಿ ನಿರಿಕ್ಷಿತ ಮಟ್ಟದಲ್ಲಿ ಸ್ಥಾನಗಳು ಬರದೆ ಇರುವುದರಿಂದ ಕೋಮುವಾದಿ ಬಿಜೆಪಿ ಪಕ್ಷವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅನಿವಾರ್ಯವಾಗಿ ಜಾತ್ಯಾತೀತ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರಕಾರ ರಚನೆಮಾಡಬೇಕಾಯಿತು. ಎರಡು ಪಕ್ಷಗಳ ಸಹಕಾರ ಮನೋಭಾವದಿಂದ ಕೆಲಸ ಮಾಡುವುದರ ಮೂಲಕ ಜನರ ನಿರೀಕ್ಷೆಗೆ, ಪ್ರೀತಿ ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ ಎಂದ ಅವರು ಕ್ಷೇತ್ರದಲ್ಲಿ ಈ ಬಾರಿ ವಿರೋಧದ ಅಲೆ ಇದ್ದರೂ ದರ್ಶನಾಪೂರರವರು ಅತ್ಯಂತ ಬಹುಮತದಿಂದ ಆರಿಸಿ ಬಂದದು ಇದು  ಸಂತಸದ ವಿಷಯವೆ ಸರಿ. ಕೆಂಭಾವಿ ಪುರಸಭೆ ಅಭಿವೃದ್ಧಿ, ಈ ಭಾಗದ ಏತ ನೀರಾವರಿ ಇತ್ಯಾದಿಯಾಗಿ ಕ್ಷೇತ್ರದ ಅಭಿವೃದ್ದಿಗೆ ದರ್ಶನಾಪೂರ ರವರೊಂದಿಗೆ ಕೆಲಸ ಮಾಡಲು ನಾವೆಲ್ಲಾ ಇರುತ್ತೇವೆ ಎಂದು ಹೇಳಿದರು.
ಕೆಂಭಾವಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಂಗನಗೌಡ ಮಾಲಿ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ದರ್ಶನಾಪೂರವರಿಗೆ ರವರಿಗೆ ಹೇಮರಡ್ಡಿ ಮಲ್ಲಮ್ಮ ಟ್ರಸ್ಟ ವತಿಯಿಂದ ಬೆಳ್ಳಿ ಖಡ್ಗ  ಹಾಗೂ ಕೆಂಭಾವಿ ವಲಯ ಎಸ್ಸಿ ಘಟಕದವತಿಯಿಂದ ಮುಖಂಡ ಲಾಲಪ್ಪ ಹೊಸಮನಿ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಲಾಯಿತು. ಕೆಂಭಾವಿ ವಲಯ ಕೃಷಿ ಪ್ರಾ. ಸಹಕಾರಿ ಸಂಘ, ಶಾಲಾ ಕಾಲೇಜು ಶಿಕ್ಷಕರ ಸಂಘ, ಮಹಿಳಾ ಸ್ವಸಹಾಯ ಸಂಘ, ಕಂದಾಯ ಇಲಾಖೆ, ಮಲ್ಲಿಕಾರ್ಜುನ ಸೌಹಾರ್ಧ ಸಹಕಾರಿ ಸಂಘ, ಬಸವ ಸೌಹಾರ್ಧ ಪತ್ತಿನ ಸಂಘ, ಹಮಾಲರ ಸಂಘ, ಸೇರಿದಂತೆ ವಿವಿಧ ಗ್ರಾಮಗಳು ಹಾಗೂ ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲಾಯಿತು.  
ಮುಖಂಡರಾದ ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪೊ.ಪಾಟೀಲ್, ನಿಂಗನಗೌಡ ದೇಸಾಯಿ ಹದನೂರ, ವಿನೋದ್ ಪಾಟೀಲ್, ರಾಜಶೇಖೃಗೌಡ ವಜ್ಜಲ್, ಶಂಕ್ರಣ್ಣ ವಣಕ್ಯಾಳ್, ಬಸಣ್ಣ ಸಾಹು ಬೂದೂರ, ಸಂಗನಗೌಡ ವಜ್ಜಲ್, ಶರಣಪ್ಪ ಸಲದಾಪೂರ, ಈರಣ್ಣಗೌಡ ಮಲ್ಲಾಬಾದಿ, ಬಸನಗೌಡ ಯಡಿಯಾಪೂರ,  ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ, ಶಾಂತಗೌಡ ಬಿರಾದಾರ, ಶರಣಬಸವ ಡಿಗ್ಗಾವಿ, ಸಂಗನಗೌಡ ಮರಡ್ಡಿ, ಬಸನಗೌಡ ಹೊಸಮನಿ, ಚನ್ನಾರಡ್ಡಿ ಮುದನೂರ, ವೈಟಿ ಪಾಟೀಲ್, ಸಿದ್ದನಗೌಡ ಕರಡಕಲ್, ಭಿಮನಗೌಡ ಪೊ.ಪಾಟೀಲ್, ಮಲ್ಕನಗೌಡ ಪಾಟೀಲ್, ಅಯ್ಯನಗೌಡ ಲಕ್ಕೂಂಡಿ, ಶಾಂತಗೌಡ ಪೊ.ಪಾಟೀಲ್ ಮಾಳಹಳ್ಳಿ, ಮಲ್ಲರಡ್ಡಿ ಹತ್ತಿಕುಣಿ, ಅಮ್ಮಣ್ಣ ಧರಿ, ಕ್ಷೇತ್ರದ ಕಾಂಗ್ರೇಸ್ ಪಕ್ಷಕ ಮುಖಂಡರು ಸೇರಿದಂತೆ ಕೆಂಭಾವಿ ವಲಯದ ಸಾವಿರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.   ಇದಕ್ಕೂ ಮುಂಚೆ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ಹಾಗೂ ಸಂಸದ ಬಿವಿ ನಾಯಕ ರವರಿಗೆ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಕ್ಷದ ಕಾರ್ಯಕರ್ತರಿಂದ ಮೆರವಣಿಗೆ ಮಾಡಲಾಯಿತು. 

Comment

Related News