ಪವನ ಕುಲ್ಕರ್ಣಿಯವರಿಗೆ ಪ್ರಶಸ್ತಿ ಪ್ರಧಾನ

ಕೆಂಭಾವಿ: ಬೆಂಗಳೂರು ಪತ್ರಕರ್ತರ ವೇದಿಕೆಯು ಪತ್ರಿಕಾ ದಿನಾಚರಣೆಯ ಅಂಗವಾಗಿ ಕೊಡಮಾಡುವ 2018 ನೇ ಸಾಲಿನ ಪ್ರತಿಷ್ಠಿತರಾಜ್ಯಮಟ್ಟದ “ಹೂಗಾರ ಸ್ಮಾರಕ” ಮಾಧ್ಯಮ ಪ್ರಶಸ್ತಿಯನ್ನು ಕೆಂಭಾವಿಯ ವರದಿಗಾರ ಪವನ ಕುಲ್ಕರ್ಣಿಯರಿಗೆನೀಡಿ ಗೌರವಿಸಲಾಯಿತು.
ಜುಲೈ 1 ರಂದುರವಿವಾರ ಬೆಂಗಳೂರಿನ ರವೀಂದ್ರಕಲಾಕ್ಷೇತ್ರದ ನಯನ ಸಭಾಂಗಣದಲ್ಲಿನಡೆದಪತ್ರಿಕಾ ದಿನಾಚರಣೆಯ ಸಮಾರಂಭದಲ್ಲಿಪ್ರಜಾವಾಣಿವರದಿಗಾರ ಪವನ ಕುಲ್ಕರ್ಣಿಯವರಿಗೆ ಪ್ರಶಸ್ತಿ ಪ್ರಧಾನ ಮಾಡಿಗೌರವಿಸಲಾಯಿತು.ಕಾರ್ಯಕ್ರಮದಲ್ಲಿ  ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ, ಪತ್ರಕರ್ತ ವೇದಿಕೆಯರಾಜ್ಯಾಧ್ಯಕ್ಷ ಮಹೇಶಬಾಬು ತುರುವೆ, ರಾಘವೇಂದ್ರಗಂಗಾವತಿ, ಶಿವಬಾಲಸ್ವಾಮಿ, ಮಹಾಂತೇಶ ಹಿರೇಮಠ, ಬಸವರಾಜ ಸಿನ್ನೂರ ಸೇರಿದಂತೆಇತರರು ಸಾಕ್ಷಿಯಾದರು.
ಬೆಂಗಳೂರು ಪತ್ರಕರ್ತರ ವೇದಿಕೆಯುಕೊಡಮಾಡಲಾದ ಈ ಬಾರಿಯ ಹೂಗಾರ ಸ್ಮಾರಕ ಪ್ರಶಸ್ತಿಯು ಯಾದಗಿರಿಜಿಲ್ಲೆಯಕೆಂಭಾವಿಯ ಪತ್ರಕರ್ತ  ಪವನ ಕುಲ್ಕರ್ಣಿಯವರಿಗೆಲಭಿಸಿದ್ದಕ್ಕಾಗಿ, ಯಾದಗಿರಿಜಿಲ್ಲಾ ಪತ್ರಕರ್ತ ಸಂಘದಅಧ್ಯಕ್ಷ ಸಂಜೀವರಾವ್‍ಕುಲ್ಕರ್ಣಿ ಹಾಗೂ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು, ಕೆಂಭಾವಿ ವಲಯದ ಮಾಧ್ಯಮ ಮಿತ್ರರುಅಭಿನಂದಿಸಿದ್ದಾರೆ.

Comment

Related News