ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ನಡೆದ ಮಾಸಿಕ ಹುಣ್ಣಿಮೆ ಶಿವಾನುಭವ ಚಿಂತನ ಕಾರ್ಯಕ್ರಮವನ್ನು ಶಿಕ್ಷಕಿ ಜಯಶ್ರೀ ಹಿರೇಮಠ ಉದ್ಘಾಟಿಸಿದರು.

ಕೆಂಭಾವಿ: ಜೀವನವೆಂಬುವು ಋಣದ ರತ್ನದ ಗಣಿ ಇದ್ದಹಾಗೆ. ಇಲ್ಲಿ ಜೀವಿಸುವ ಪ್ರತಿಯೊಬ್ಬರೂ ಒಂದಿಲ್ಲ ಒಂದು ರೀತಿಯಲ್ಲಿ ಋಣದಲ್ಲಿಯೇ ಜಿವಿಸುತ್ತಿದ್ದಾರೆ ಎಂದು ಸಾಹಿತಿ ನಿಂಗನಗೌಡ ದೇಸಾಯಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ನಡೆದ ಮಾಸಿಕ ಹುಣ್ಣಿಮೆ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ತಂದೆ, ತಾಯಿ, ಗುರು, ಸಮಾಜ ಸೇರಿದಂತೆ ನಿಸರ್ಗದ ಋಣದಲ್ಲಿಯೇ ಬದುಕುತ್ತಿದ್ದು, ಮಠ ಮಾನ್ಯಗಳಲ್ಲಿ ನಡೆಯುವ ಇಂತಹ ಆದ್ಯಾತ್ಮಿಕ ಚಿಂತನ, ಸತ್ಸಂಗಗಳಲ್ಲಿ ಭಾಗವಹಿಸುವುದರ ಮೂಲಕ ದಾನ, ಧವರ್i, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳುವುದರೊಂದಿಗೆ ನಮ್ಮ ಕರ್ತವ್ಯಗಳ ಅರಿವು ಮಾಡಿಕೊಂಡು ನಡೆಯುವುದರ ಮೂಲಕ ಋಣ ಮುಕ್ತನಾಗಲು ಸಾಧ್ಯ ವೆಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕಿ ಜಯಶ್ರೀ ಹಿರೇಮಠ ಇಂದಿನ ಆಧುನಿಕ ಭರಾಟೆಯಲ್ಲಿ ಮಕ್ಕಳನ್ನು ಸಂಸ್ಕಾರಯುತ ನಡೆಯತ್ತ ಕರೆದೊಯ್ಯಲು ಮಾತೆಯರ ಜವಬ್ಧಾರಿ ಹೆಚ್ಚಿನದಿದೆ ಎಂದು ಹೇಳಿದರು.
ಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಪುಟ್ಟರಾಜ ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಯಮನೇಶ ಯಾಳಗಿ, ಯಂಕನಗೌಡ ಪೊ.ಪಾಟೀಲ್, ಸೋಮನಾಥ ಯಾಳಗಿ, ಮಡಿವಾಳಪ್ಪಗೌಡ ಪಾಟೀಲ್, ಮಹಾದೇವಪ್ಪ ವಜ್ಜಲ್, ನಿಜಗುಣಿ ಬಡಿಗೇರ, ರಾಜಶೇಖರ ಹಿರೇಮಠ ಸೇರಿದಂತೆ ಇತರರು ಭಾಗವಹಿಸಿದ್ದರು.
 

Comment

Related News