ಗೊಡ್ರಿಹಾಳ್ ಗ್ರಾಮದಲ್ಲಿ ನಡೆದ ಕ್ಷಯ ರೋಗ ನಿರ್ಮೂಲನ ಅಭಿಯಾನ

ಕೆಂಭಾವಿ: ಕ್ಷಯ ರೋಗಕ್ಕೆ ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ. ಸರಕಾರದಿಂದ ಉಚಿತ ಔಷಧಿ ಸಿಗುತ್ತಿದ್ದು, ದೀರ್ಘಕಾಲದ ಚಿಕಿತ್ಸೆಯಿಂದ ರೋಗ ಸಂಪೂರ್ಣ ಗುಣಪಡಿಸಲು ಸಾಧ್ಯ ಎಂದು ಕಿರಿಯ ಆರೋಗ್ಯ ಸಹಾಯಕ ಶಂಕರಗೌಡ ಬಿರಾದಾರ ಹೇಳಿದರು.
ಸಮೀಪದ ಗೊಡ್ರಿಹಾಳ್ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಯಾದಗಿರಿ ಇವರ ಸಹಯೋಗದಲ್ಲಿ ನಡೆದ ಕ್ಷಯ ರೋಗ ನಿರ್ಮೂಲನ ಅಭಿಯಾನದ ಸಂದರ್ಭದಲ್ಲಿ ನಾಗರೀಕರಿಗೆ ಕ್ಷಯ ರೋಗ ಲಕ್ಷಣ ಕುರಿತು ಅರಿವು ಮೂಡಿಸಿದ ಅವರು ಪ್ರತಿಯಬ್ಬರಿಗೂ ಆರೋಗ್ಯವೆ ಭಾಗ್ಯ, ಮನುಷ್ಯನಿಗೆ ಆರೋಗ್ಯಕ್ಕಿಂತ ಇನ್ನೊಂದು ಭಾಗ್ಯವಿಲ್ಲ. ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಪ್ರತಿ ಕ್ಷಯ ರೋಗಿಗೆ ಪೌಷ್ಠಿಕ ಆಹಾರದ ಸಲುವಾಗಿ ಸರಕಾರದಿಂದ ಮಾಸಿಕ ಐದು ನೂರು ಸಹಾಯ ಧನ ನೀಡಲಾಗುತ್ತಿದ್ದು ಸರಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿ ಹೇಳಿದರು. ಅಭಿಯಾನದಲ್ಲಿ ಆಶಾ ಕಾರ್ಯಕರ್ತೆ ಸಾವಿತ್ರಿ, ಸೇರಿದಂತೆ ಇತರರು ಇದ್ದರು.
 

Comment

Related News