ಕೆಂಭಾವಿಯ ರೇವಣಸಿದ್ದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅದ್ಯಕ್ಷ ವಿನೋದ ಪಾಟೀಲ ಅವರಿಗೆ ಸನ್ಮಾನಿಸಿ ಗೌರವಿಸಲಾ

ಕೆಂಭಾವಿ :  ಪಟ್ಟಣದ ರೇವಣಸಿದ್ದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ  ಕೆಂಭಾವಿ ಪಟ್ಟಣಕ್ಕೆ ಬೇಟಿ ನೀಡಿದ ಜಿ.ಪಂ  ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅದ್ಯಕ್ಷ ವಿನೋದ ಪಾಟೀಲ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. 
ಇದೆ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘಗಳು ಬಡವರಿಗೆ ವರವಾಗಬೇಕು. ಬಡವರಿಗೆ ಆರ್ಥಿಕ ಬಲವರ್ಧನೆಗೆ ನೆರವಾಗುವುದರ ಮೂಲಕ ಸ್ವಸಹಾಯದ ಪರಿಕಲ್ಪನೆ ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದ ಅವರು ಮುಂಬರುವ ದಿನಗಳಲ್ಲಿ ಜಿಪಂ ವತಿಯಿಂದ  ಸಂಘಕ್ಕೆ ಅಗತ್ಯ ನೆರವು ನೀಡುವ ಕುರಿತು ಬರವಸೆ ನೀಡಿದರು, 
ಸಂಘದ ಅಧ್ಯಕ್ಷ ಮಾಳಪ್ಪ ಬಿ. ಸುಂಕದ, ಪಧಾದಿಕಾರಿಗಳಾದ ಬಸವರಾಜ ಪೂಜಾರಿ ಯಾಳಗಿ, ನಿಂಗಣ್ಣ ಮೇಟಿ, ರಾವುತಪ್ಪ ಮಾಳಹಳ್ಳಿ,  ತಿರುಪತಿ ಪಾಟೀಲ ಇತರರು ಇದ್ದರು.

Comment

Related News