ಅಭಿವೃದ್ಧಿಯ ಹರಿಕಾರ, ಸೇವಾ ಮಾಣಿಕ್ಯ ಶ್ರೀ ವಸಂತ ಕುಮಾರ್

ಬೆಂಗಳೂರು ನಗರದ ಹೃದಯ ಭಾಗವಾದ ಬೆಂಗಳೂರು ಮಹಾನರ ಪಾಲಿಕೆಯ ಮುಖ್ಯ ಕಛೇರಿ ಸೇರಿದಂತೆ ವಿಧಾನಸೌಧ,ಚನ್ನಸ್ವಾಮಿ ಕ್ರೀಡಾಂಗಣ,ಕಬ್ಬನ್ ಪಾರ್ಕ್,ಎಸ್,ಆರ್.ನಗರ ಮುಂತಾದ ಭಾಗಗಳು ಸೇರಿದಂತೆ ಆಡಳಿತ ಮತ್ತು ಬೆಂಗಳೂರು ನಗರದ ಶಕ್ತಿ ಕೇಂದ್ರಗಳನ್ನು ಒಳಗೊಂಡ ವಾರ್ಡ್ 110ನೇ ಸಂಪಂಗಿರಾಮ ನಗರ ವಾರ್ಡ್ ಆಗಿದೆ. ಇದರ ಅಧಿಪತಿಯೇ ಬಡವರ ಬಂಧು ಅಭಿವೃದ್ಧಿಯ ಹರಿಕಾರ ದೀನದಲಿತರ ದ್ವನಿ ಜನಮೆಚ್ಚಿದ ನಾಯಕ ಶ್ರೀ ಆರ್.ವಸಂತ ಕುಮಾರ್.ಇವರು ಈಗಾಗಲೇ ಬಿಬಿಎಂಪಿ ಮುಖ್ಯ ಕಛೇರಿಯ ಮುಂದೆ ಸಾರ್ವಜನಿಕರ ಅನುಕೂಲಕ್ಕಾಗಿ ಸ್ಕೈವಾಕ್ ನಿರ್ಮಿಸಿದ್ದಾರೆ.ಕಾಮರಾಜ ರಸ್ತೆ,ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರದ ಕಬ್ಬನ್ ರಸ್ತೆ ಮತ್ತು ಎಸ್.ಆರ್.ನಗರ 1 ನೇ ಮುಖ್ಯ ರಸ್ತೆಗಳಿಗೆ ಡಾಂಬರೀಕರಣ ಮಾಡಿಸಿದ್ದಾರೆ.ಸದ್ಯ 10 ಕೋಟಿಗೂ ಹೆಚ್ಚು ಅನುಧಾನದ ಕಾಮಗಾರಿಗಳು ವಾರ್ಡಿನಲ್ಲಿ ನಡೆಯುತ್ತಿವೆ. ಈಗಾಗಲೇ ಶೇಕಡಾ 60ರಷ್ಟು ಕಾಮಗಾರಿಗಳು ಮುಗಿಯುವ ಹಂತದಲ್ಲಿ ಇದ್ದು, ಈ ವಾರ್ಡಿನಲ್ಲಿ ಅಭಿವೃದ್ದಿ ನಾಗಾಲೋಟದಿಂದ ಸಾಗಿದೆ. ಕಾಂಗ್ರೇಸ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ರಾಜಕಾರಣವನ್ನು ಸಮಾಜ ಸೇವೆ ಎಂದೇ ಭಾವಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಸದಾ ಹೋರಾಟ ಮತ್ತು ಅಭಿವೃದ್ಧಿಯ ಚಿಂತನೆ ಭಾಗದ ಅಭಿವೃದ್ದೀಗಾಗಿ ದಿನದ 24 ಗಂಟೆಗಳು ವಾರದ 7 ದಿನಗಳು ಮತ್ತು ವರ್ಷದ 365 ದಿನಗಳು ತಮ್ಮನ್ನು ತಾವು ರಾಜಕೀಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಶ್ರೀಯತರು ಹಲವಾರು ವರ್ಷದಿಂದ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಬಡ ಮತ್ತು ದಿನದಲಿತ ಮಕ್ಕಳ ಶಿಕ್ಷಣಕ್ಕೆ ಮತ್ತು ಜನರ ವೈಧ್ಯಕೀಯ ಸಮಸ್ಯೆಗಳಿಗೆ ಸದಾ ಸಹಾಯ ಮಾಡುತ್ತಾ ಜನರ ಹೃದಯದ ದೇವರಾಗಿದ್ದಾರೆ. ವಯಸ್ಕರಿಗೆ ಮತ್ತು ಮಹಿಳೆಯರಿಗೆ ಅನಾಥರಿಗೆ ವೈಧ್ಯಕೀಯ ಚಿಕಿತ್ಸೆ ಕೋಡಿಸುತ್ತಾರೆ ಮತ್ತು ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದು ಹೀಗೆ ಹಲವಾರು ಸಮಾಜಯನ್ನು ಸ್ವಂತ ಖರ್ಚಿನಲ್ಲಿ ಹಲವಾರು ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಪಕ್ಷದ ವತಿಯಿಂದ ವಿವಿದ ಜವಾಬ್ದಾರಿಗಳನ್ನು ನಿರ್ವಹಿಸಿ ರಾಜ್ಯ ಮತ್ತು ರಾಷ್ಟ್ರ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜಕೀಯ ಮತ್ತು ಸಮಾಜ ಸೇವೆಯನ್ನು ತಮ್ಮ ಎರಡು ಕಣ್ಣುಗಳಂತೆ ಪಾಲಿಸುತ್ತಾ ನಡೆಯುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಜನತೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸಂಪಂಗಿರಾಮ ನಗರ ಸಾರ್ವಜನಿಕರ ಅನುಕೂಲಕ್ಕಾಗಿ ಬೋರವೆಲ್ ಹಾಕಿಸಿರುವುದು,ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮುಖ್ಯ ರಸ್ತೆಗಳಿಗೆ ಡಾಂಬರೀಕರಣ, ವಾರ್ಡಿನ ಎಲ್ಲ ರಸ್ತೆಗಳ ದುರಸ್ತಿ, ಕೆಲವು ರಸ್ತೆಗಳಿಗೆ ಡಾಂಬರೀಕರಣ ಮತ್ತು ಕೆಲವು ರಸ್ತೆಗಳಿಗೆ ಕ್ರಾಂಕೀಟ್ ಹಾಕಿಸುವುದು,ಗ್ರಂಥಾಲಯಗಳ ಅಭಿವೃದ್ಧಿ, ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಶಾಸಕರ ಮತ್ತು ಸಂಸದರ ಸಹಕಾರ ಮತ್ತು ಸಲಹೆಯನ್ನು ಪಾಲಿಸಿ ರಾಜ್ಯ ಮತ್ತು ಕೇಂದ್ರದ ಜೊತೆಗೆ ಬಿ.ಬಿ.ಎಂ.ಪಿ ಅನುಧಾನವನ್ನು ತರುವುದರಲ್ಲಿ ಅದನ್ನು ಪ್ರಾಮಾಣಿಕವಾಗಿ ಮತ್ತು ಸಮರ್ಪಕವಾಗಿ ಬಳಸುವುದರಲ್ಲಿ ಸ್ಥಳೀಯ ಅಧಿಕಾರಿಗಳ ಜೊತೆಗೆ ಸಹಕಾರ.ಪಕ್ಷಕಿಂತ ಸ್ಥಳೀಯ ಅಭಿವೃದ್ಧಿಯನ್ನು ನಂಬಿರುವ ಇವರು ಭಾಗದ ಜನರೊಂದಿಗೆ ಬೆರೆತು ಕೆಲಸ ಮಾಡುತ್ತಾರೆ. ಸ್ಥಳೀಯ ಗುರು-ಹಿರಿಯರ ಸಲಹೆ ಮಾರ್ಗದರ್ಶನ ಪಡೆಯುತ್ತಾರೆ.ಪ್ರತಿ ದಿನವು ಕ್ಷೇತ್ರದ ದರ್ಶನ ಮಾಡಿ ನಾಗರೀಕರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಅಲ್ಲೇ ಪರಿಹರಿಸುತ್ತಾರೆ.ಸಂಪಂಗಿರಾಮ ನಗರವನ್ನು ಕಸ ಮುಕ್ತ ಪ್ರದೇಶವಾಗಿಸಿದ್ದಾರೆ. ಕುಡಿಯುವ ನೀರು, ಶುದ್ಧ ಕುಡಿಯುವ ನೀರು ಜೊತೆಗೆ ವಿದ್ಯುತ್, ರಸ್ತೆ ಮತ್ತು ಒಳಚರಂಡಿಯಂತಹ ಮೂಲಭೂತ ವ್ಯವಸ್ಥೆಗಳನ್ನು ಸಮಮರ್ಕವಾಗಿ ಒದಗಿಸುತ್ತಾರೆ. ಮಳೆ ಅಥವಾ ಇನ್ನಿತರ ಅಪಘಾತ ಸಮಯದಲ್ಲಿ ಕ್ಷೇತ್ರದಲ್ಲೆ ಇದ್ದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಸ್ಥಳೀಯ ಅಭಿವೃದ್ಧಿಗಾಗಿ ಸದಾ ಕ್ರಿಯಾಶೀಲರಾಗಿ ಹಗಲ-ಇರಳು ದುಡಿಯುವ ಪ್ರಾಮಾಣಿಕ ವ್ಯಕ್ತಿ ಅಂದರೆ ಅದೇ ನಮ್ಮ ಆತ್ಮೀಯ ಶ್ರೀ ವಸಂತ ಕುಮಾರ್. ಜಾತಿ,ಧರ್ಮ ಮೀರಿದ ದೇಶ ಪ್ರೇಮಿ, ಭವಿಷ್ಯದ ವಿಚಾರವಾದಿ,ಪ್ರಾಮಾಣಿಕ ರಾಜಕಾರಣಿ ಮತ್ತು ಜನತೆಯಲ್ಲಿ ಬೆರೆತು ಅವರ ನೋವು ನಲಿವುಗಳನ್ನು ಅರ್ಥೈರಿಸಿಕೊಂಡು,ಬಡವರಿಗೆ, ಅನಾಥರಿಗೆ,ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ದೇವರೆ ಆಗಿದ್ದಾರೆ. ಇಂತಹ ಆದರ್ಶಮಯ ವ್ಯಕ್ತಿಗಳು ಸಿಗುವುದು ವಿರಳ. ಅದಕ್ಕೆ ಇವರನ್ನು ಅಪರೂಪದ ಮಾಣಿಕ್ಯ ಅನ್ನುವುದು. ಎಲ್ಲ ಜಾತಿ ಧರ್ಮದವರನ್ನು ಸಹೋದರ ಭಾವನೆಯಿಂದ ನೋಡುತ್ತಾ ಆದರ್ಶ ಮೆರೆಯುತ್ತಾರೆ. ಇವರನ್ನು ಹತ್ತಿರದಿಂದ ನೋಡಿದವರು ಹೇಳುವ ಪ್ರಕಾರ ಮುಗ್ದ ಮನಸ್ಸಿನ ಪ್ರಗತಿಯ ಚಿಂತಕ, ಭವಿಷ್ಯದ ಕನಸುಗಾರ ಅನ್ನುತ್ತಾರೆ. ಸಂಪಂಗಿರಾಮ ನಗರ ವಾರ್ಡ್ ಆದರ್ಶ ವಾರ್ಡ್ ಮಾಡಬೇಕೆಂಬುದು ಶ್ರೀ ವಸಂತ ಕುಮಾರ್ ಅವರ ಕನಸು, ನನಸಾಗಲೇಂದು ಕನಸಿನ ಭಾರತ ಹಾರೈಸುತ್ತದೆ.

Comment

Related News