ಸಾರಿಗೆ ಬಸ್ಸ್‍ನಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ

ಬೇಸಿಗೆ ದಾಹ ಹೆಚ್ಚುತ್ತಿರುವುದನ್ನು ಕಂಡು ಮಾನವೀಯತೆ ಮೆರೆದು ಅನೇಕ ಸಂಘ ಸಂಸ್ಥೆಗಳು ಅಲ್ಲಲ್ಲಿ ಅರವಟ್ಟಿಗೆ ಇಟ್ಟು ಜನತೆಯ ನೀರಿನ ದಾಹ ತೀರಿಸುವುದು ಸರ್ವೆಸಾಮಾನ್ಯ, ಆದರೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಚಾಲಕ, ನಿರ್ವಾಹಕರು ತಮ್ಮ ಬಸ್ ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ತಣ್ಣನೆ ನೀರಿನ ವ್ಯವಸ್ಥೆ ಕಲ್ಪಸಿ ದಾಹ ತೀರಿಸುವ ನಿಟ್ಟಿನಲ್ಲಿ ಮಾನವೀಯತೆ ಮೆರೆದು ಪ್ರಯಾಣಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯಾದಗಿರಿ ವಿಭಾಗದ ಶಹಾಪುರ ಘಟಕದ ಶಹಾಪೂರ ಕೆಂಭಾವಿ ರೂಟ್ ನಂ 48 ರ ಚಾಲಕ ಭೀಮರಾಯ ಮತ್ತು ನಿರ್ವಾಹಕ ಭೀಮರಾಯ ಶಳ್ಳಗಿ ಇವರು ಈ ಪುಣ್ಯದ ಕಾರ್ಯಕ್ಕೆ ಮುಂದೆಬಂದಿದ್ದು, ಪ್ರತಿನಿತ್ಯ ಬೆಳಿಗ್ಗೆ ಘಟಕದಿಂದ ಬಸ್ ಬಿಡುವಾಗ 20 ಲೀ ಕ್ಯಾನ್‍ನಲ್ಲಿ  ಶುದ್ಧ ಕುಡಿಯುವ ನೀರನ್ನು ತುಂಬಿಕೊಂಡು ಕ್ಯಾನ್‍ಗೆ ಹಸಿ ಅರಿವೆ ಸುತ್ತಿ ನೀರು ಸದಾ ತಣ್ಣಗಿರುವುಂತೆ ಕಾಯ್ದುಕೊಳ್ಳಲಾಗುತ್ತದೆ. ಮದ್ಯಾಹ್ನ  ಬೋರವೆಲ್ಲ ನೀರನ್ನು ತುಂಬಿ ಇಡುವುದುರ ಮೂಲಕ ಇಡೀ ದಿನ ಪ್ರಯಾಣಿಕರ ನೀರಿನ ದಾಹ ತೀರಿಸುವಲ್ಲಿ ಮುಂದೆ ಬಂದಿರುವ ಬಸ್‍ನ ಚಾಲಕ, ನಿರ್ವಾಹಕರ ಮಾದರಿಯ ಮತ್ತು ಶ್ಲಾಘನೀಯ ಕಾರ್ಯಕ್ಕೆ ಪ್ರಯಾಣಿಕರು ಹಾಡಿ ಹರಸುವಂತಹುದ್ದಾಗಿದೆ.
ಬಡ ಪ್ರಯಾಣಿಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಕುಡಿಯಲು ನೀರಿಗಾಗಿ ಪರಿತಪಿಸಬೇಕಾಗಿತ್ತು ಮೀರಿನ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ಅನುಕೂಲಕರವಾಗಿದೆ ಎಂದು ಪ್ರಯಾಣಿಕರು ಸಂತೋಷ ಪಟ್ಟು ಇಂತಹ ಚಾಲಕ ನಿರ್ವಾಹಕರು ಬೇರೆವರು ಇವರ ಮಾರ್ಗದಲ್ಲಿ ನಡೆದು ಜನತೆಯ ನೀರಿನ ದಾಹ ತೀರಿಸಿ ಪುಣ್ಯ ಕಟ್ಟಿಕೊಳ್ಳಲ್ಲಿ ಎಂದು ಪ್ರಯಾಣಿಸುವ ಪ್ರಯಾಣಿಕರು ಹೇಳುತ್ತಾರೆ. 
 

Comment

Related News