ಗೋಮಪತ್ರಕ್ಕೆ ಉತ್ತರಿಸುವವರು ಯಾರು?

ಮೈಸೂರಿನ ಕೃಷ್ಣರಾಜ ಕ್ಷೇತ್ರವು ಬಿ.ಜೆ.ಪಿ.ಪಾಳಯದಲ್ಲಿ ಅತ್ಯಂತ ವಿವಾದವನ್ನು ಹುಟ್ಟುಹಾಕಿದೆ. ಇದಕ್ಕೆ ಕಾರಣ ಬಿ.ಜೆ.ಪಿ.ಯ ಹಿರಿಯ ಮುಖಂಡ ಶ್ರೀ ಗೋಮಧುಸುದನರವರ ಪತ್ರ ಕೃಷ್ಣರಾಜ ಕ್ಷೇತ್ರಕ್ಕೆ ರಾಮದಾಸಗೆ ಟಿಕೆಟ್ ನೀಡಿರುವುದರ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿ ಬಿ.ಜೆ.ಪಿಯ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯುರಪ್ಪರವರಿಗೆ ಬಹಿರಂಗವಾಗಿ ಪತ್ರ ಬರೆಯುವ ಮೂಲಕ ರಾಮದಾಸನ ಚರಿತ್ರೆಯನ್ನು ಜಾಲಾಡಿದ್ದಾರೆ ವ್ಯಯಕ್ತಿಕವಾಗಿ ವರ್ಚಸ್ಸನ್ನು ಕಳೆದುಕೊಂಡು ಮತ್ತು ಭೂಹಗರಣದಲ್ಲಿ ಹಾಗೂ ಬಿ.ಜೆ.ಪಿ.ಯ ಅಧಿಕಾರದ ಸಮಯದಲ್ಲಿ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ರಾಮದಾಸ ಆ ಸಮಯದಲ್ಲಿ ಹಿಂದೂಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಮತ್ತು ಹಲವಾರು ಹಗರಣಗಳಲ್ಲಿ ತಮ್ಮ ಕೈ ಚಳಕವನ್ನು ಮೆರೆದಿದ್ದಾರೆ ಈ ಸಾರಿಯ ಚುನಾವಣೆಯಲ್ಲಿ ಕೃಷ್ಣರಾಜ ನಗರದಿಂದ ಬಿ.ಜೆ.ಪಿ ರಾಮದಾಸರವರನ್ನು ನಿಲ್ಲಿಸುವುದರಿಂದ ಸೋಲು ಖಚಿತವಾಗಿ ಮೈಸೂರು ಭಾಗದಲ್ಲಿ ಬಿ.ಜೆ.ಪಿ.ಗೆ ಮುಖಭಂಗವಾಗುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿ ಮಧುಸೂಧನರವರು ತಮ್ಮ ಅಸಾಮಾಧಾನವನ್ನು ವ್ಯಕ್ತಪಡಿಸಿದ್ದಾರೆ.


ನೋಡಿದಿರಾ ಗೋಸುಂಬೆ  ಬಣ್ಣದವರು
ಕೇಸರಿ ಬಣ್ಣಕ್ಕೆ ಕಣ್ಣಾದವರು
ಕೆಸರೆರಿಚಿಕೊಳ್ಳುತ್ತಿರುವ ಇವರೀವರ
                    ಕೆ.ಆರ್.ಕ್ಷೇತ್ರ ಒಪ್ಪುತ್ತದೆಯೇ


ಸಿಕ್ಕಿಬಿದ್ದ ಇಗೋ ಸನ್ಯಾಸಿ
ಸಂಸಾರಿ ಅಲ್ಲದವನು ಸನ್ಯಾಸಿ
ರಾಮನಂಥ ವ್ಯಕ್ತಿ 
ಕೆಸರನ್ನು ಬಿಳಿಯ ಮೊಸರೆನ್ನುವರು
ಗೋ ಮೂತ್ರ ಕುಡಿದು ಶುದ್ದಿಯಾಯಿತು ಎನ್ನುವರು  

 

Comment

Related News