ಒಂದೇ ದಿನದ ಮಿಂಚಿನ ನೊಂದಣಿ ಕಾರ್ಯಕ್ರಮದಲ್ಲಿ ಸಾವಿರ ಮತದಾರರು ಸೇರ್ಪಡೆ

ಕೆಂಭಾವಿ: ಭಾನುವಾರ ಮತಗಟ್ಟೆ ಸಂಖ್ಯೆ 103 ರಲ್ಲಿ ಪುರಸಭೆ ಮುಖ್ಯಾಧಿಕಾರಿ ಚಂದ್ರಶೇಖರ ಮೇಟಿ ಭೇಟಿ ನೀಡಿ ಪರಿಶಿಲನೆ ನಡೆಸಿದರು. ಹಾಗೂ ಪಟ್ಟಣದ ಸಮೀಪದ  ದಂಡಸೋಲ್ಲಾಪೂರ ಗ್ರಾಮದ ಭಾಗ ಸಂಖ್ಯೆ 18 ರಲ್ಲಿ ಮತದಾರರು ನೋಂದಣಿ ಅಧಿಕಾರಿ ಸುಮಂಗಲಾ ರಾಠೋಡ ನೇತೃತ್ವದಲಿ  ಕೊಡ ಮಿಂಚಿನ ನೋಂದಣಿ ಕಾರ್ಯದಲ್ಲಿ ಸೇರ್ಪಡೆ ಮತ್ತು ತಿದ್ದುಪಡಿ ಕಾರ್ಯಕ್ರಮ ನಡೆಸಲಾಯಿತು. 
 ಚುನಾವಣೆ ಸಂಧರ್ಭದಲ್ಲಿ ಇದೆ ಮೇ 12 ರಂದು ಚುನಾವಣೆ ಇರುವ ಸಂದರ್ಭದಲ್ಲಿ ಮತದಾರರ ಯಾದಿಯಲ್ಲಿ ಹೆಸರು ಸೇರಿಸಲು ಅವಕಾಶ ಕೊಟ್ಟ ಪ್ರಯುಕ್ತ ಚುನಾವಣೆ ಆಯೋಗ ಮತ್ತು ಮಾಧ್ಯಮಗಳಲ್ಲಿ ವ್ಯಾಟಸ್ಪ್, ಪೇಸಬುಕ್ ಗಳಲ್ಲಿ ಪ್ರಚಾರ ಸಿಕ್ಕ ಪ್ರಯುಕ್ತ ಮತ್ತು ವಿವಿಧ ಪಕ್ಷದ ಮುಖಂಡರು ಕೂಡ ವ್ಯಾಪಕ ಪ್ರಚಾರ ಮಾಡಿದ ಪ್ರಯುಕ್ತ ಮಿಂಚಿ ನೊಂದಣಿ ಯಶಸ್ವಿಯಾಗಿದೆ. ಇನ್ನೂ ಕೆವು ಜನ ಮತದಾರರಿಗೆ ಸೂಕ್ತ ದಾಖಲಾತಿಗಳು ಪ್ರಯುಕ್ತ ಮತದಾರರ ಯಾದಿಯಲ್ಲಿ ಸೇರ್ಪಡೆಯಾಗಿಲ್ಲ. ಯುವ ಮತದಾರರು ಹೆಚ್ಚು ಸೇರ್ಪಡೆಯಾಗಿದ್ದಾರೆ ಎಂದು ಮತಗಟ್ಟೆಗಳಿಗೆ ಮಾಧ್ಯಮದವರು ಹೋದಾಗ ಕಂಡುಬಂದಿದೆ.
 ಕೆಂಭಾವಿ ವಲಯ ಒಂದರಲ್ಲಿಯೇ ಸಾವಿರ ಮತದಾರರು ಸೇರ್ಪಡೆಯಾಗಿದ್ದಾರೆ. ಕಿರದಳ್ಳಿ (85) ಯಾಳಗಿ (150) ಅತಿಹೆಚ್ಚು  ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಕಂದಾಯ ನೀರಿಕ್ಷಕ ಕಲ್ಲಪ್ಪ ತಿಳಿಸಿದ್ದಾರೆ. ವಿವಿಧ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶಿಲನೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮತದಾನ ಜಾಗೃತಿಗಾಗಿ ಈ ಹಿಂದೆ ಜಿಲ್ಲಾಡಳಿತ ವಿವಿಧೆಡೆ ಮತದಾನ ಜಾಗೃತಿ ಅಭಿಯಾನ ನಡೆಸಿ ಜನಸಾಮಾನ್ಯರಲ್ಲಿ ಮತದಾನ ಕುರಿತು ತಿಳುವಳಿಕೆ ನೀಡಿದ್ದು ಇದರಿಂದ ಹಲವು ರೀತಿಯ ಪ್ರಯೋಜನವಾಗಿದೆ ಎಂದು ಚಂದ್ರಶೇಖರ ಮೇಟಿ ಹೇಳುತ್ತಾರೆ.
  

Comment

Related News