ನುಡಿದಂತೆ ನಡೆದ ಸರ್ಕಾರ : ಶರಣಬಸಪ್ಪ ದರ್ಶನಾಪೂರ

ಕೆಂಭಾವಿ: ಪಟ್ಟಣದ ಯೂತ್ ಕಾಂಗ್ರೇಸ್ ಪಕ್ಷದ ಕಾರ್ಯಾಲತದಲ್ಲಿ ಕಾಂಗ್ರೇಸ್ ಸರ್ಕಾರ ಬಡವರ,ಹಿಂದುಳಿದವರ,ದೀನದಲಿತರಿಗೆ, ನಿರ್ಗತಿಕರಿಗೆ, ರೈತರಿಗೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅನೇಕ ವರದಾನಗಳನ್ನು ನೀಡಿದೆ. ಸತತವಾಗಿ ಐದು ವರ್ಷಗಳ ಕಾಲ ಕೆಲಸ ಮಾಡಿದೆ. ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೇಸ್ ಸರ್ಕಾರ ಸಿದ್ದರಾಮಯ್ಯನವರ ಸರ್ಕಾರ ಎಂದು ಶರಣಬಸಪ್ಪ ದರ್ಶನಾಪೂರವರು ಹೇಳಿದರು.ಕಾಂಗ್ರೇಸ್ ಸಕಾರದ ಜನಪರ ಆಡಳಿತ ಮೆಚ್ಚಿ ವಿವಿಧ ಪಕ್ಷದ ಮುಖಂಡರುಗಳು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಮತೋಮ್ಮೆ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಪಕ್ಷ ಮುಖಂಡರಾದ ಮರಿಗೌಡ ಹುಲಕಲ್, ಸಿದ್ದನಗೌಡ ಪೋ.ಪಾಟೀಲ್, ವಿನೋದ ಪಾಟೀಲ್ ದೋರನಹಳ್ಳಿ, ಲಿಂಗನಗೌಡ ಮಾಲಿ ಪಾಟೀಲ್, ಮಹಾರಾಜ ದಿಗ್ಗಿ ಇಬ್ರಾಹಿಂಪೂರ, ದೇವಪ್ಪ ಮ್ಯಾಗೇರಿ, ಬಸವರಾಜ ಪೂಜಾರಿ ಯಾಳಗಿ, ಅಮ್ಮಣ್ಣ ಧರಿ, ಶಿವಶಂಕರ ಖಾನಾಪೂರ, ರಫೀಕ್ ಖಾಜಿ, ಬಂದಗೀಸ್ ಸಾಸನೂರ, ಖಾಜಾ ಪಟೇಲ್ ಕಾಚೂರ ಇತರರು ಇದ್ದರು.
 

Comment

Related News