ಕರ್ನಾಟಕ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಿಗೆ ರಾಣಿ ಚೆನ್ನಮ್ಮ ಪಾರ್ಟಿ ಮುಕ್ತ ಅವಕಾಶ

ಕರ್ನಾಟಕ ವಿದಾನಸಬೆ ಚುನಾವಣೆ 2018, ಈ ಬಾರಿ ಬೂದಿ ಮುಚ್ಚಿದ ಕೆಂಡದಂತಿದೆ, ಪಕ್ಷಗಳು ರಂಗೊಲಿ ಕೆಳಗೆ ನುಸುಳಲು ಪರೋಕ್ಷವಾಗಿ ಯತ್ನಿಸುತ್ತಿವೆ, ರಾಜ್ಯದ ತುಂಬ ಭಂಡಾಯದ ಹೊಗೆಯಾಡುತ್ತಿದೆ ಚುನಾವಣಾ ಕ್ಷೇತ್ರಗಳಲ್ಲಿ ಆಯಾ ಪಕ್ಷಗಳಲ್ಲೆ ತುಂಡು ತುಂಡು ಗುಂಪುಗಳಾಗಿಹೋಗಿವೆ, ಅವರವರ ಬೆಂಬಲಿಗರೊಂದಿಗೆ ಅವರವರ ರೀತಿ ಪ್ರಚಾರ ಮಾಡಿಕೊಳ್ಳುವ ಕಾರ್ಯಗಳು ಕೆಲ ಪಕ್ಷಗಳಲ್ಲಿ ಕಂಡೂ ಕಾಣದಂತೆ ನಡೆಯುತ್ತಿರುವುದು ಜಗಜ್ಜಾಹಿರ, ಆಯಾ ಪಕ್ಷದ ನಾಯಕರು ತಮ್ಮ ವಯಕ್ತಿಕ ಪ್ರತಿಷ್ಠೆ ಮತ್ತು ತಮ್ಮ ಪಕ್ಷದ ಹೆಸರಿನ ಸ್ವಾರ್ಥ ಸಾದನೆಗಾಗಿ ಮತದಾರರಿಗೆ ವಿವಿದ ರೀತಿಯ ಪೋಳ್ಳು ಅಶ್ವಾಸನೆಗಳನ್ನು ನೀಡುವ ಮೂಲಕ ಬಲಿಪಶು ಮಾಡುತ್ತಿದ್ದಾರೆ, ಇದನ್ನೆಲ್ಲ ಮತದಾರ ಪ್ರಭುಗಳು  ಸೂಕ್ಷ್ಮ-ಅತಿ ಸೂಕ್ಷ್ಮ ರೀತಿಯಲ್ಲಿ ಪರಿಶಿಲಿಸುತ್ತಿದ್ದಾನೆ. 
ರಾಜ್ಯದ ಕೆಲವೊಂದು ಮಠಾದೀಶರು ಹಿಂಬಾಗಿಲ ರಾಜಕೀಯವನ್ನು ಮಾಡುವ ಮೂಲಕ ದೇಶದ ರಾಜಕೀಯ ವ್ಯವಸ್ಥೆಯನ್ನು ಕುಲಗೆಡಿಸುತ್ತಿವೆÀ ರಾಜಕೀಯ ಮಾಡಲೇ ಬೆಕು ಅಂತ ಮಠಾದೀಶರ ಮನೋಭಾವವಾಗಿದ್ದರೆ ರಾಣಿ ಚೆನ್ನಮ್ಮ ಪಾರ್ಟಿ ಮಠಾದೀಶರಿಗೆ ಮುಕ್ತ ಅವಕಾಶ ಕೊಡುತ್ತದೆ ಹೀಂಬಾಗಿಲ ರಾಜಕೀಯ ಬಿಟ್ಟು ನೇರ ಸ್ಪರ್ದೆಗೆ ಇಳಿಯಬಹುದೆಂದು ದೇಸಾಯಿಯವರು ಕರೆ ನೀಡಿದರು.
ರಾಜಕೀಯವೆಂದರೆ ಹೊಲಸು ಎಂಬ ರೀತಿಯಲ್ಲಿ ಮತದಾರ ಪ್ರಬುವಿಗೆ ಬೇಜಾರು ಆಗಿಹೋಗಿದೆ, ಮಹಾ ದೇಶಭಕ್ತರು, ವಿವಿಧ ಮಠಾದೀಶರು, ಸಮಾಜ ಸೇವಕರು, ಮಾಜಿ ಸೈನಿಕರು, ನಿವೃತ್ತ ಅಧಿಕಾರಿಗಳು, ಜನಸಾಮಾನ್ಯರು, ಹಿಗೆ ಸಾಲು ಸಾಲು ನಿಷ್ಠಾವಂತರು ರಾಜಕೀಯವೇ ಬೇಡ ಎಂಬ ರೀತಿಯಲ್ಲಿ ತಿರ್ಮಾನಿಸಿಕೊಂಡಿದ್ದಾರೆ ಬ್ರೀಟಿಷರೊಂದಿಗೆ ಸ್ವತಂತ್ರಕ್ಕಾಗಿ ಮೊಟ್ಟ ಮೊದಲು ಹೊರಾಡಿದ ಕನ್ನಡದ ಧಿಟ್ಟ ಮಹಿಳೆ ಕನ್ನಡದ ಕುವರಿ, ಕಿತ್ತುರ ರಾಣಿ ಚೆನ್ನಮ್ಮಜಿ ಯವರ ಹೆಸರಿನಲ್ಲಿ ಗಂಡು ಮೆಟ್ಟಿದ ನಾಡು ಗದುಗಿನ ಮೂಲಕ ಜನ್ಮತಾಳಿದ ಮೊಟ್ಟ ಮೊದಲ ಜನಸಾಮಾನ್ಯರ ಪಕ್ಷ “ ರಾಣಿ ಚೆನ್ನಮ್ಮ ಪಾರ್ಟಿ”. ಕರ್ನಾಟಕ ವಿದಾನಸಬಾ ಚುನಾವಣೆ 2018 ಕ್ಕೆ ಸ್ಪರ್ದಿಲಸು ರಾಜ್ಯದ ಜನತೆಗೆ ಮುಕ್ತವಾಗಿ ಅವಕಾಶ ಕಲ್ಪಿಸಿಕೊಡುತ್ತೆವೆ, ರಾಜ್ಯದ ವಿವಿದ ಜಿಲ್ಲಾ ತಾಲೂಕುಗಳ ವಿವಿದ ಮತ ಕ್ಷೇತ್ರಗಳ ವ್ಯಾಪ್ತಿಯ ಟಿಕೆಟ್ ಆಕಾಂಕ್ಷಿಗಳು ನಮ್ಮನ್ನು ಸಂಪರ್ಕಿಸಿ ಬಿ-ಫಾರ್ಮ ಪದೆಯಬಹುದು ಎಂದು ಪಕ್ಷದ ಸಂಸ್ಥಾಪಕ ಅದ್ಯಕ್ಷ ಎಂ ಬಿ ದೇಸಾಯಿ ಹೇಳಿದರು. ಇದೆ ಸಂದರ್ಭದಲ್ಲಿ ಗದಗ ಕ್ಷೇತ್ರದಿಂದ ರಾಣಿ ಚೆನ್ನಮ್ಮ ಪಾರ್ಟಿಯ ಸಂಸ್ಥಾಪಕ ಅದ್ಯಕ್ಷ ಎಂ ಬಿ ದೇಸಯಿ ಹಾಗೂ ಲಂಭಾಣಿ ಜನಾಂಗದ ನಾಯಕ, ಪತ್ರಕರ್ತ ರಾ ದೇ ಕಾರಭಾರಿ ಶಿರಹಟ್ಟಿ ಮಿಸಲು ವಿದಾನಸಬಾ ಕ್ಷೇತ್ರದಿಂದ ಸ್ಪರ್ದೆ ಖಚಿತವಾಗಿದ್ದು, ರಾಜ್ಯದ ಕನಿಷ್ಠ್ಠ 40 ವಿದಾನಸಬಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಶಿಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುವುದು ಮತ್ತು ರಾಜ್ಯದ ವಿವಿದ ಕ್ಷೇತ್ರಗಳಿಂದ ಬರುವ ಆಕಾಂಕ್ಷಿಗಳಿಗೆ ಟಿಕೆಟ ನೀಡುವ ಮೂಲಕ ಚುನಾವಣೆ ಸ್ಪರ್ದೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಇದೇ ಸಂದರ್ಬದಲ್ಲಿ ಮಾತನಾಡಿದ ಶಿರಹಟ್ಟಿ ಮೀಸಲು ವಿದಾನಸಬಾ ಮತಕ್ಷೇತ್ರದ ಅಭ್ಯರ್ಥಿ ರಾ ದೇ ಕಾರಭಾರಿ ಮಾತನಾಡಿ, 1947 ರಿಂದ ದೇಶ ಅತಂತ್ರವಾಗಿ ಹೋಗಿದೆ ಬ್ರೀಟಿಷರು ಹೋದ ಮೆಲೆ ನಮ್ಮ ದೇಶದ ರಾಜಕೀಯ ವ್ಯವಸ್ಥೆ ಪ್ರಜೆಗಳ ಮೆಲೆ ಹಿಡಿತವನ್ನು ಸಾದಿಸತೋಡಗಿದೆ, ಪ್ರಜಾಪ್ರಬುತ್ವ ರಾಷ್ಠ್ರದಲ್ಲಿ ಪ್ರಜೆಗಳ ಹಕ್ಕು ನಶಿಸಿಹೊಗುತ್ತಿದೆ, ಮತದಾನವಲ್ಲದೆ ಬೇರಾವ ಹಕ್ಕಿನ ಮೆಲೆ ಮತದಾರ ತನ್ನ ಹಿಡಿತವನ್ನು ಹೊಂದಿಲ್ಲ ಇಂತಹ ಸಮಯದಲ್ಲಿ ಜನಸಾಮಾನ್ಯರ ಸಂಘಟನೆ ಅನಿವಾರ್ಯ, ಮತದಾರರು ಮತದಾನದ ಹಕ್ಕನ್ನು  ಅರಿತುಕೊಳ್ಳಬೇಕು. ಇದು ಬದಲಾವಣೆಯ ಸಮಯ ಭಾರತದ ರಾಜಕೀಯ ಇತಿಹಾಸವನ್ನು ಬದಲಾಯಿಸಬೇಕು ಇದಕ್ಕಾಗಿ ಜನಸಾಮಾನ್ಯ ವ್ಯಕ್ತಿಯಿಂದ ಸ್ಥಾಪಿತ ರಾಣಿ ಚೆನ್ನಮ್ಮ ಪಾರ್ಟಿಯನ್ನು ಬೆಂಬಲಿಸದೆ ವಿದಿಯಿಲ್ಲ, ಅಂದು ತಾಯಿ ರಾಣಿ ಚೆನ್ನಮ್ಮಜಿ ಬ್ರೀಟಿಷರೊಂದಿಗೆ ಹೋರಾಡಿದಳು ಇಂದು ನಾವು ಬೃಷ್ಠರೊಡನೆ ಹೋರಾಡುತ್ತೆವೆ ಎಂದು ಅವರು ಹೇಳಿದರು.
ಇಂದು ನಡೆದ ಸಬೆಯಲ್ಲಿ ಪಕ್ಷದ ಉಪಾದ್ಯಕ್ಷರಾದ ಶ್ರೀ ಜಗದೀಶ ಎಲ್ ಬಿದರೂರ, ಪಧಾದಿಕಾರಿಗಳಾದ ಚಂದ್ರಶೇಖರ ಎಂ ದೇಸಾಯಿ, ನಾಗರಾಜ ಗಂಜಿ, ಮೋಹನ ಮಾಂತಗುಂಡ, ಮೊದಲಾದವರು ಉಪಸ್ಥಿತರಿದ್ದರು, ಮಹಾದೇವಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.


ಎಂ ಬಿ ದೇಸಾಯಿ: (ಸಂಸ್ಥಾಪಕ ಅದ್ಯಕ್ಷರು) 9980383723
ಜಗದೀಶ ಎಲ್ ಬಿದರೂರ: (ಉಪಾದ್ಯಕ್ಷರು) 9986104007

e-mail: ranichennammapartykar@gmail.com

Comment

Related News