ಕಾಂಗ್ರೆಸ್ ಮುಖಂಡರ ನಡುವಳಿಕೆಗೆ ಬೇಸತ್ತು ಜೆಡಿಎಸ್‍ಗೆ ಸೇರ್ಪಡೆ

ಕೆಂಭಾವಿ: ಪಟ್ಟಣದ ಸಮೀಪದ ವಂದಗನೂರ ಗ್ರಾಮದಲ್ಲಿ ಚಿಂಚೋಳಿ, ವಂದಗನೂರ, ಬೇನಾಳ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡರು ಅಮೀನರೆಡ್ಡಿ ಪಾಟೀಲ ಯಾಳಗಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ ಮಾಡಿಕೊಂಡು ಮಾತಾನಾಡಿದ ಅವರು ಕ್ಷೇತ್ರದಲ್ಲಿ ಹಲವು ಹಿರಿಯ ಕಾಂಗ್ರೆಸ್ ಮುಖಂಡರು ಸಂಪರ್ಕದಲ್ಲಿದ್ದು, ಶೀಘ್ರದಲ್ಲೆ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಎಂದು ಜೆಡಿಎಸ್ ನಿಯೋಜಿತ ಅಭ್ಯರ್ಥಿ ಅಮೀನರೆಡ್ಡಿ ಪಾಟೀಲ ಯಾಳಗಿ ಹೇಳಿದರು.
ಕೆಲವು ಕಾಂಗ್ರೆಸ್ ಮುಖಂಡರ ನಡುವಳಿಕೆಗೆ ಬೇಸತ್ತು ಇಂದು ಅನೇಕ ನಾಯಕರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಜೆಡಿಎಸ್‍ನ ರೈತ ಪರ ಹೋರಾಟಕ್ಕೆ ಬೆಂಬಲವನ್ನು ಸೂಚಿಸುತ್ತಿದ್ದಾರೆ ಎಂದು ಹೇಳಿದರು. 
ಗಂಗಾಮತ ಸಮಾಜದ ಹಿರಿಯ ಧುರೀಣ ಕನಕಪ್ಪ ವಂದಗನೂರ ಮಾತಾನಾಡಿ ಕಾಂಗ್ರೆಸ್‍ನಲ್ಲಿ ನಿಜವಾದ ಕಾರ್ಯಕರ್ತರಿಗೆ ಬೆಲೆಯಿಲ್ಲ, ಕಾಂಗ್ರೆಸ್‍ನಲ್ಲಿನ ಉಸಿರು ಕಟ್ಟುವ ವಾತಾವರಣದಿಂದ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಸೇರುತ್ತಿದ್ದೆನೆ ಎಂದು ಹೇಳಿದರು. 
ಮುಖಂಡರಾದ ಅಯ್ಯಣ್ಣ ಕನ್ಯಾಕೋಳುರ, ಬಸವರಾಜ ವಿಭೂತಿಹಳ್ಳಿ, ವಿಠ್ಠಲ ವಗ್ಗಿ, ಅಕ್ಬರ್ ನಲತವಾಡ, ರಾಮನಗೌಡ ವಂದಗನೂರ, ವಿಜಯಕುಮಾರ, ಕುತುಬುದ್ದೀನ್ ಸಾಸನೂರ ಸೇರಿದಂತೆ ವಂದಗನೂರ, ಚಿಂಚೋಳಿ, ಬೇನಾಳ ಗ್ರಾಮದ ಕಾರ್ಯಕರ್ತರಿದ್ದರು. 
ಸೇರ್ಪಡೆಯಾದ ಪ್ರಮುಖರು : ಕನಕಪ್ಪ ವಂದಗನೂರ, ಶರಣಪ್ಪ ಸದಬ, ನಾನಾಗೌಡ ಬೇನಾಳ, ಮುದಕಣ್ಣಗೌಡ ಚಿಂಚೋಳಿ ಸೇರಿದಂತೆ ಅನೇಕರು ಸೇರ್ಪಡೆಯಾದರು. 
 

Comment

Related News