By Editor
04:03:09 AM / Sun, Jan 21st, 2018

ತೊಗರಿ ಮಾರಾಟ:

ಸರ್ಕಾರವು ತೊಗರಿಗೆ ಬೆಂಬಲ ಬೆಲೆ ಘೋಷಿಸಿ ಖರೀದಿ ಪ್ರಕ್ರಿಯೆ ಆರಂಭಿಸುತ್ತಿದ್ದರೂ ಮಾರುಕಟ್ಟೆ ತೊಗರಿ ದರದಲ್ಲಿ ಯಾವುದೇ ಏರಿಕೆ ಆಗುತ್ತಿಲ್ಲ! ಪ್ರತಿ ಕ್ವಿಂಟಲ್‌ ಕೆಂಪು ತೊಗರಿ ಗರಿಷ್ಠ ₹4,870 ಕ್ಕೆ ಮಂಗಳವಾರ ಮಾರಾಟವಾಗಿದೆ.

ಕಳೆದ ತಿಂಗಳಿನ ದರಕ್ಕೆ ಹೋಲಿಸಿದರೆ ಮಾರುಕಟ್ಟೆ ದರ ₹5 ಸಾವಿರ ಗಡಿಯಿಂದ ಕೆಳಗೆ ಬಂದಿದೆ. ಇದೀಗ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‌ ತೊಗರಿಗೆ ₹5,450 ಬೆಂಬಲ ಬೆಲೆ ಘೋಷಿಸಿದೆ ಹಾಗೂ ರಾಜ್ಯ ಸರ್ಕಾರವು ₹550 ಪ್ರೋತ್ಸಾಹ ಧನ ನೀಡುತ್ತಿದ್ದು, ಪ್ರತಿ ಕ್ವಿಂಟಲ್‌ ₹6 ಸಾವಿರ ನೀಡಿ ತೊಗರಿ ಖರೀದಿಸಲಾಗುತ್ತಿದೆ. ತೊಗರಿ ಬೆಳೆದ ರೈತರು ಬುಧವಾರದಿಂದ ನೋಂದಣಿ ಮಾಡಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಾದ್ಯಂತ 18 ಕೇಂದ್ರಗಳಲ್ಲಿ ತೊಗರಿ ಖರೀದಿ ನಡೆಸಲಾಗುವುದು.

ಬೆಂಬಲ ಬೆಲೆ ಏರಿಕೆಯಿಂದ ದಲ್ಲಾಳಿಗಳು ಮಾರುಕಟ್ಟೆಯಲ್ಲಿ ತೊಗರಿ ಖರೀದಿಸುವ ದರ ಕೂಡಾ ಹೆಚ್ಚಿಸುತ್ತಾರೆ ಎನ್ನುವ ಸಾಮಾನ್ಯ ತಿಳಿವಳಿಕೆ ಇದೀಗ ಸುಳ್ಳಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಬೆಂಬಲ ಬೆಲೆಯಲ್ಲಿ ತೊಗರಿ ಮಾರಾಟಕ್ಕೆ ಸ್ಪರ್ಧೆ ಏರ್ಪಡಲಿದೆ. ಇನ್ನೊಂದು ಗಮನ ಸೆಳೆಯುವ ಸಂಗತಿ; ಐದು ಎಕರೆ ಜಮೀನಿನಲ್ಲಿ ತೊಗರಿ ಬೆಳೆದ ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಲ್‌ ಮಾತ್ರ ಬೆಂಬಲ ಬೆಲೆ ನೀಡಿ ತೊಗರಿ ಖರೀದಿಸಲಾಗುತ್ತದೆ. ಹಿಂದಿನ ವರ್ಷ ಖರೀದಿ ಪ್ರಮಾಣಕ್ಕೆ ಮಿತಿ ಇರಲಿಲ್ಲ.

‘ರಾಯಚೂರು ತಾಲ್ಲೂಕಿನಲ್ಲಿ ಐದು, ದೇವದುರ್ಗ ಮತ್ತು ಮಾನ್ವಿ ತಾಲ್ಲೂಕು ಗಳಲ್ಲಿ ತಲಾ ಮೂರು, ಲಿಂಗುಸುಗೂರು ತಾಲ್ಲೂಕಿನಲ್ಲಿ ಐದು ಹಾಗೂ ತೊಗರಿ ಕಡಿಮೆ ಬೆಳೆಯುವ ಸಿಂಧನೂರು ನಗರದಲ್ಲಿ ಒಂದು ತೊಗರಿ ಕೇಂದ್ರ ಆರಂಭಿಸಲಾಗುತ್ತಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್‌ ಸಮಿತಿಯು ಈಚೆಗೆ ಸಭೆ ಸೇರಿ ಈ ಬಗ್ಗೆ ನಿರ್ಧರಿಸಿದೆ’ ಎಂದು ಎಪಿಎಂಸಿ ಮಾರುಕಟ್ಟೆ ಅಧಿಕಾರಿ ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತೊಗರಿ ಮಾರಾಟ: ಮಾರುಕಟ್ಟೆ ದರಕ್ಕಿಂತ ಹೆಚ್ಚು ಬೆಂಬಲ ಬೆಲೆ ಕೊಟ್ಟು ತೊಗರಿ ಖರೀದಿಸುವುದಾಗಿ ಸರ್ಕಾರವು ಘೋಷಿಸಿದ್ದರೂ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲ ರೈತರು ಕಡಿಮೆ ದರದಲ್ಲೆ ತೊಗರಿ ಮಾರಾಟ ಮಾಡುತ್ತಿದ್ದಾರೆ. ನವೆಂಬರ್‌ 1 ರಿಂದ ಡಿಸೆಂಬರ್‌ 26 ರವರೆಗೂ 16,158 ಕ್ವಿಂಟಲ್‌ ತೊಗರಿ ಆವಕ ದಾಖಲಾಗಿದೆ. ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ರೈತರು ತೊಗರಿ ಮಾರಾಟಕ್ಕೆ ರಾಯಚೂರಿಗೆ ಬರುತ್ತಿದ್ದಾರೆ.

‘ಕಳೆದ ವರ್ಷ ಎಲ್ಲ ರೈತರು ಬೆಂಬಲ ಬೆಲೆಗೆ ತೊಗರಿ ಮಾರಾಟ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ರೈತರಿಂದ ಕಡಿಮೆ ಬೆಲೆಗೆ ಖರೀದಿಸಿದ್ದ ದಲ್ಲಾಳಿಗಳು ಬೆಂಬಲ ಬೆಲೆಯ ಲಾಭ ಮಾಡಿಕೊಂಡಿದ್ದರು. ಈ ಸಲ ತೊಗರಿಗೆ ಒಳ್ಳೆಯ ದರವನ್ನು ಸರ್ಕಾರ ಘೋಷಿ ಸಿದೆ. ರೈತರು ಕೂಡಲೇ ತೊಗರಿ ಮಾರಾ ಟಕ್ಕೆ ನೋಂದಾಯಿಸಿ ಲಾಭ ಮಾಡಿ ಕೊಳ್ಳಬೇಕು’ ಎಂದು ಜಿಲ್ಲಾ ಹಸಿರು ಸೇನೆ ಮತ್ತು ರೈತ ಸಂಘದ ಪದಾಧಿಕಾರಿ ಲಕ್ಷ್ಮಣ ಕಡ್ಗಂದೊಡ್ಡಿ ಹೇಳಿದರು.

Leave A Comment

   

ರಾಯಚೂರು ಜಿಲ್ಲಾ ಸುದ್ಧಿಗಳು

ರಾಯಚೂರು

ರಾಯಚೂರು

ಬಹುಸಂಖ್ಯಾತ ವೀರಶೈವ ಲಿಂಗಾಯತರಿಗೆ ಅನ್ಯಾಯ

By Editor
04:03:09 AM / Sun, Jan 21st, 2018
ವೈಕುಂಠ ಏಕಾದಶಿ

ವೈಕುಂಠ ಏಕಾದಶಿ

ವೈಕುಂಠ ಏಕಾದಶಿ

By Editor
04:03:09 AM / Sun, Jan 21st, 2018

ಪ್ರಚಲಿತ ಸುದ್ಧಿಗಳು

ವಿಧಾನಸೌಧ :

ಪ್ರಚಲಿತ

ವಿಧಾನಸೌಧ

By Editor
14:36:32 PM / Thu, Dec 28th, 2017
ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

ಪ್ರಚಲಿತ

ಗೋಲ್ಡನ್ ಟೆಂಪಲ್ ವೀಕ್ಷಣೆಗೆ ಮುಕ್ತ

By Editor
14:36:32 PM / Thu, Dec 28th, 2017
ಮಹಾದಾಯಿ ಹೋರಾಟಗಾರರು

ಪ್ರಚಲಿತ

ಮಹಾದಾಯಿ ಹೋರಾಟಗಾರರು
By Editor
14:36:32 PM / Thu, Dec 28th, 2017
ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

ಪ್ರಚಲಿತ

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ
By Editor
14:36:32 PM / Thu, Dec 28th, 2017
ಚಿತ್ರನಟಿ ಪೂಜಾಗಾಂಧಿ ಖುಲಾಸೆ

ಪ್ರಚಲಿತ

ಚಿತ್ರನಟಿ ಪೂಜಾಗಾಂಧಿ ಖುಲಾಸೆ

By Editor
14:36:32 PM / Thu, Dec 28th, 2017
ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

ಪ್ರಚಲಿತ

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

By Editor
14:36:32 PM / Thu, Dec 28th, 2017